CrimeNational

ಹಬ್ಬದ ರಾತ್ರಿಯೇ ಭೀಕರ ಅಪಘಾತ; ಬಸ್‌ ಅಪಘಾತದಲ್ಲಿ 11 ಮಂದಿ ದುರ್ಮರಣ!

ಛತ್ತೀಸ್​ಗಢ; ಯುಗಾದಿ ಹಬ್ಬದ ರಾತ್ರಿಯೇ ಭೀಕರ ಅಪಘಾತ ಸಂಭವಿಸಿದೆ… ಬಸ್ಸೊಂದು ದೊಡ್ಡ ಗುಂಡಿಯೊಂದಕ್ಕೆ ಉರುಳಿಬಿದ್ದಿದ್ದು, ಘಟನೆಯಲ್ಲಿ 11 ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ.. ಛತ್ತಿಸ್‌ಗಢದ ದುರ್ಗ್‌ ಜಿಲ್ಲೆಯಲ್ಲಿ ಕಳೆದ ರಾತ್ರಿ ಈ ದುರಂತ ನಡಿದೆ.. ಘಟನೆಯಲ್ಲಿ 20 ಮಂದಿ ಗಾಯಗೊಂಡಿದ್ದು, ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ..

ಇದನ್ನೂ ಓದಿ; ಜೇನು ತುಪ್ಪದಿಂದ ಎಷ್ಟು ಉಪಯೋಗವೋ ಅಷ್ಟೇ ತೊಂದರೆಗಳಿವೆ, ಎಚ್ಚರಿಕೆ!

ಮಂಗಳವಾರ ರಾತ್ರಿ 8 ಗಂಟೆಗೆ ದುರ್ಘಟನೆ;

ಬಸ್‌ನಲ್ಲಿದ್ದವರು ಡಿಸ್ಟಿಲರಿ ಕಂಪನಿ ಉದ್ಯೋಗಿಗಳು ಎಂದು ತಿಳಿದುಬಂದಿದೆ.. ಎಲ್ಲರೂ ಕೆಲಸ ಮುಗಿಸಿ ಮನೆಗೆ ವಾಪಸ್‌ ಹೋಗುತ್ತಿದ್ದರು.. ಕುಮ್ಹಾರಿ ಪೊಲೀಸ್‌ ಠಾಣೆ ವ್ಯಾಪ್ತಿಯ ಖಾಪ್ರಿ ಗ್ರಾಮದ ಬಳಿ ದೊಡ್ಡ ಮಣ್ಣಿನ ಹೊಂಡವಿದೆ.. ರಾತ್ರಿ 8 ಗಂಟೆ ಸುಮಾರಿಗೆ ಬಸ್‌ ಅಲ್ಲಿಗೆ ಬಂದಾಗ ಚಾಲಕನ ನಿಯಂತ್ರಣ ತಪ್ಪಿ ಗುಂಡಿಗೆ ಬಿದ್ದು ಈ ದುರಂತ ನಡೆದಿದೆ..

ಇದನ್ನೂ ಓದಿ; ಒಟ್ಟಿಗೆ 17 ಮೊಮ್ಮಕ್ಕಳ ಮದುವೆ ಮಾಡಿದ ಚಾಲಾಕಿ ಅಜ್ಜ!

ಈ ಭಾಗದ ಅತ್ಯಂತ ಭೀಕರ ಅಪಘಾತವಿದು;

ಈ ಭಾಗದಲ್ಲಿ ನಡೆದ ಅತ್ಯಂತ ಭೀಕರ ಅಪಘಾತ ಎಂದು ತಿಳಿದುಬಂದಿದೆ.. ಬಸ್‌ನಲ್ಲಿದ್ದವರೆಲ್ಲರೂ ಕಾರ್ಮಿಕರಾಗಿದ್ದಾರೆ.. ಮನೆಯ ಬೆನ್ನುಲುಬಾಗಿದ್ದವರು ದಾರಿ ಮಧ್ಯೆಯೇ ಸಾವನ್ನಪ್ಪಿದ್ದಾರೆ.. ಇದರಿಂದಾಗಿ 11 ಕುಟುಂಬಗಳು ಬೀದಿಪಾಲಾದಂತಾಗಿದೆ.. ಹೀಗಾಗಿ, ಮೃತರು ಹಾಗೂ ಗಾಯಾಳುಗಳ ಕುಟುಂಬಕ್ಕೆ ಹೆಚ್ಚಿನ ಪರಿಹಾರ ನೀಡಬೇಕೆಂದು ಆಗ್ರಹಿಸಲಾಗುತ್ತಿದೆ.. ಸರ್ಕಾರ ಹಾಗೂ ಡಿಸ್ಟಿಲರಿ ಕಂನಿ ಎರಡರಿಂದಲೂ ಪರಿಹಾರ ಬೇಕು ಎಂದು ಜನ ಆಗ್ರಹಿಸುತ್ತಿದ್ದಾರೆ.

ಇದನ್ನೂ ಓದಿ; ಸಿಎಂ ಪ್ರಚಾರದ ವೇಳೆ ಭದ್ರತಾಲೋಪವಾಗಿಲ್ಲ; ಪೊಲೀಸ್ ಇಲಾಖೆ ಸ್ಪಷ್ಟನೆ

ರಸ್ತೆ ಪಕ್ಕವೇ ಮಣ್ಣಿನ ಗುಂಡಿ;

ಗುತ್ತಿಗೆದಾರರೊಬ್ಬರು ರಸ್ತೆ ಪಕ್ಕವೇ ಕಾಮಗಾರಿಯೊಂದಕ್ಕಾಗಿ ಗುಂಡಿ ತೆಗೆದು ಮಣ್ಣನ್ನು ಸಾಗಿಸಿದ್ದಾರೆ.. ಇದರಿಂದಾಗಿ ರಸ್ತೆ ಪಕ್ಕವೇ ದೊಡ್ಡ ಗುಂಡಿ ಬಿದ್ದಿತ್ತು.. ಇದು ಒಂದು ರೀತಿಯ ಯಮನ ರೀತಿಯಲ್ಲಿ ಕಾಣಿಸುತ್ತಿತ್ತು.. ಯಾವಾಗ ಏನು ಬೇಕಾದರೂ ಆಗಬಹುದು ಎಂದು ಜನ ಭಯ ಬೀಳುತ್ತಿದ್ದರು.. ಅದರಂತೆಯೇ ಅನಾಹುತ ನಡೆದುಹೋಗಿದೆ.. ಬಸ್‌ ಚಾಲಕನ ನಿಯಂತ್ರಣ ತಪ್ಪಿ ದೊಡ್ಡ ಮಣ್ಣಿನ ಗುಂಡಿಗೆ ಬಿದ್ದು ದೊಡ್ಡ ಅನಾಹುತವಾಗಿದೆ..

ಇದನ್ನೂ ಓದಿ; ತೆಂಗಿನೆಣ್ಣೆಗೆ ಈ ಪೌಡರ್ ಸೇರಿಸಿ ಹಚ್ಚಿದರೆ ಕೂದಲು ಉದುರಲ್ಲ!

 

Share Post