LifestyleNational

ಒಟ್ಟಿಗೆ 17 ಮೊಮ್ಮಕ್ಕಳ ಮದುವೆ ಮಾಡಿದ ಚಾಲಾಕಿ ಅಜ್ಜ!

ಜೈಪುರ; ಅಣ್ಣ, ತಮ್ಮ, ಅಕ್ಕ-ತಂಗಿ ಹೀಗೆ ಒಂದಿಬ್ಬರ ಮದುವೆಗಳನ್ನು ಒಟ್ಟಿಗೆ ಮಾಡೋದನ್ನು ನೋಡೋದನ್ನು ನೋಡಿದ್ದೇವೆ.. ಸಾಮೂಹಿಕ‌ ವಿವಾಹಗಳಲ್ಲಿ ನೂರಾರು ಮಾದುವೆಗಳು ಮಾಡೋದು ಕೂಡಾ ಕಾಮನ್.. ಆದ್ರೆ ಇಲ್ಲೊಬ್ಬ ಚಾಲಾಕಿ ಅಜ್ಜ, ಒಂದೇ ಸಮಯದಲ್ಲಿ ತನ್ನ 17 ಮೊಮ್ಮಕ್ಕಳ ಮದುವೆಯನ್ನು ಮಾಡಿ ಮುಗಿಸಿದ್ದಾನೆ.

17 ಮೊಮ್ಮಕ್ಕಳಿಗೆ ಒಟ್ಟಿಗೆ ಮದುವೆ;

  ರಾಜಸ್ಥಾನದ ಬಿಕಾನೇರ್ ನಲ್ಲಿ ಇಂತಹದ್ದೊಂದು ಅಪರೂಪದ ಮದುವೆ ನಡೆದಿದೆ. ಬಿಕಾನೇರ್ ನ ಸುರ್ಜಾರಾಮ್ ಗೋದಾರ್​ ಎಂಬುವವರು ತನ್ನ 17 ಮೊಮ್ಮಕ್ಕಳಿಗ ಏಕಕಾಲಕ್ಕೆ ಮದುವೆ ಮಾಡಿದ್ದಾರೆ. ಇವರದ್ದು ಕೂಡು ಕುಟುಂಬವಾಗಿದ್ದು ಎಲ್ಲರೂ ಒಟ್ಟಿಗೆ ವಾಸಿಸುತ್ತಾರೆ..‌ಮೊಮ್ಮಕ್ಕಳಿಗೆ ಬೇರೆ ಬೇರೆಯಾಗಿ ಮದುವೆ ಮಾಡಿದರೆ ಖರ್ಚು ಹೆಚ್ಚಾಗುತ್ತದೆ.. ಹೀಗಾಗಿ ವಯಸ್ಸಿಗೆ ಬಂದ 17 ಮೊಮ್ಮಕ್ಕಳಿಗೆ ಸಂಗಾತಿಗಳನ್ನು ಒಂದೇ‌ ಮುಹೂರ್ತದಲ್ಲಿ‌ ಮದುವೆ ಮಾಡಲಾಗಿದೆ.

ಒಂದೇ ಆಮಂತ್ರಣ ಪತ್ರ, ಸಾವಿರಾರು ಮಂದಿ;

    ಎಲ್ಲರಿಗೂ ಸೇರಿ ಒಂದೇ ಆಮಂತ್ರಣ ಪತ್ರಿಕೆ ಸಿದ್ಧ ಮಾಡಲಾಗಿತ್ತು. ಇದು ಸಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಇನ್ನು ಮದುವೆಗೆ ಸಾವಿರಾರು ಜನರು ಭಾಗಿಯಾಗಿದ್ದರು ಎಂದು ತಿಳಿದುಬಂದಿದೆ.

 

Share Post