CrimeDistricts

ಸರ್ಕಾರಿ ಬಸ್‌ ಅಡ್ಡಗಟ್ಟಿ ಗೂಂಡಾಗಿರಿ; ಚಾಲಕ, ನಿರ್ವಾಹಕನ ಮೇಲೆ ಹಲ್ಲೆ!

ಕಾರವಾರ; ವ್ಯಕ್ತಿಯೊಬ್ಬ ಸರ್ಕಾರಿ ಬಸ್‌ ಚಾಲಕ ಹಾಗೂ ನಿರ್ವಾಹಕನ ಮೇಲೆ ಹಲ್ಲೆ ನಡೆಸಿದ್ದಾನೆ.. ಉತ್ತರಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಶಿರವಾಡ ಜಾಂಬಾ ಕ್ರಾಸ್ ಬಳಿ ಈ ಘಟನೆ ನಡೆದಿದೆ.. ಬಸ್‌ ಸಂಚಾರ ಮಾಡುತ್ತಿದ್ದಾಗ ಬೈಕ್‌ ನಲ್ಲಿ ಬಂದು ಅಡ್ಡಗಟ್ಟಿದ ವ್ಯಕ್ತಿ ಚಾಲಕ, ನಿರ್ವಾಹಕನ ಮೇಲೆ ಹಲ್ಲೆ ಮಾಡಿದ್ದಾನೆ.. ಪ್ರಶ್ನೆ ಮಾಡಲು ಬಂದ ಪ್ರಯಾಣಿಕರ ಮೇಲೂ ಆತ ದಾಖಲಿ ಮಾಡಿದ್ದಾನೆ..

ಆರೋಪಿ ವ್ಯಕ್ತಿ ಸುಭಾಷ್ ಬಾಡಕರ್ ಶಿರವಾಡ ಜಾಂಬಾ ಕ್ರಾಸ್ ಬಳಿ ಬಸ್​ ಮುಂದೆ ಬೈಕ್​ ನಿಲ್ಲಿಸಿದ್ದಾನೆ. ಬೈಕ್‌ ತೆಗೆದುವಂತೆ ಹೇಳಿದರೂ ಆತ ತೆಗೆದಿಲ್ಲ.. ದಾರಿ ಬಿಡುವಂತೆ ಹೇಳಿದ್ದಕ್ಕೇ ಆತ ಕುಪಿತಗೊಂಡಿದ್ದಾನೆ.. ಇದ್ದಕ್ಕಿದ್ದಂತೆ ದಾಳಿ ಮಾಡಿದ್ದು, ಪ್ರಯಾಣಿಕರ ಮೇಲೂ ದಾಳಿ ಮಾಡಿದ್ದಾನೆ.. ಮೊದಲಿಗೆ ಪ್ರಯಾಣಿಕನ ಮೇಲೆ ದಾಳಿ ಮಾಡಿದ್ದು, ಅನಂತರ ಚಾಲಕ ಹಾಗೂ ನಿರ್ವಾಹಕನ ಮೇಲೆ ದಾಳಿ ಮಾಡಲಾಗಿದೆ..

ಹಲ್ಲೆಯಲ್ಲಿ ಕೆಎಸ್‌ಆರ್‌ಟಿಸಿ ಸಾರಿಗೆ ಬಸ್ ಚಾಲಕ ಮಹಮ್ಮದ್ ಇಸಾಕ್ (28) ತಲೆಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.. ಕಾರವಾರ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..

Share Post