CrimePolitics

ದೆಹಲಿ ಮದ್ಯನೀತಿ ಹಗರಣ; ಎಎಪಿ ಸಂಸದ ಸಂಜಯ್‌ ಸಿಂಗ್‌ಗೆ ಜಾಮೀನು

ದೆಹಲಿಯ ಮದ್ಯ ನೀತಿ ಪ್ರಕರಣದಲ್ಲಿ ಇಂದು ಮಹತ್ವದ ಬೆಳವಣಿಗೆ ನಡೆದಿದೆ. ಈ ಪ್ರಕರಣದಲ್ಲಿ ಬಂಧಿತರಾಗಿದ್ದ ಆಮ್ ಆದ್ಮಿ ಪಕ್ಷದ (ಎಎಪಿ) ಸಂಸದ ಸಂಜಯ್ ಸಿಂಗ್ ಅವರಿಗೆ ಸುಪ್ರೀಂ ಕೋರ್ಟ್ ನಲ್ಲಿ ರಿಲೀಫ್ ಸಿಕ್ಕಿದೆ. ಸಂಸದ ಸಂಜಯ್‌ ಸಿಂಗ್‌ ಅವರಿಗೆ ಸುಪ್ರೀಂ ಕೋರ್ಟ್ ಜಾಮೀನು ಮಂಜೂರು ಮಾಡಿದೆ.

ಇದನ್ನೂ ಓದಿ; ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಮಾಡೋಲ್ಲ; ಸಿಎಂ ಸಿದ್ದರಾಮಯ್ಯ

2023ರ ಅಕ್ಟೋಬರ್ ನಲ್ಲಿ ಸಂಜಯ್ ಸಿಂಗ್ ಅವರನ್ನು ಬಂಧಿಸಲಾಗಿತ್ತು. ಅಂದಿನಿಂದ ಅಂದ್ರೆ ಸುಮಾರು ಆರು ತಿಂಗಳಿಂದ ಅವರು ಜೈಲಿನಲ್ಲಿಯೇ ಇದ್ದರು.. ಇದೀಗ ಅವರಿಗೆ ಕೋರ್ಟ್‌ ಯಾವುದೇ ಷರತ್ತುಗಳನ್ನು ವಿಧಿಸದೆ  ಜಾಮೀನು ನೀಡಿದೆ. ಸಂಜಯ್ ಸಿಂಗ್ ರಾಜಕೀಯ ಚಟುವಟಿಕೆಗಳಲ್ಲಿ ಭಾಗವಹಿಸಬಹುದು ಎಂದು ಕೂಡಾ ಸುಪ್ರೀಂಕೋರ್ಟ್‌ ಸ್ಪಷ್ಟವಾಗಿ ಹೇಳಿದೆ. ಲೋಕಸಭೆ ಚುನಾವಣೆ ಪ್ರಚಾರಕ್ಕೂ ಅವಕಾಶ ಕಲ್ಪಿಸಲಾಗಿದೆ. ಇನ್ನು ಮೂರು ವಾರಗಳಲ್ಲಿ ಮೊದಲ ಹಂತದ ಲೋಕಸಭೆ ಚುನಾವಣೆ ನಡೆಯಲಿದೆ.

ಇದನ್ನೂ ಓದಿ; ಈಶ್ವರಪ್ಪ ಸ್ಪರ್ಧೆಯಿಂದ ಹಿಂದೆ ಸರಿಯಲ್ಲ; ಸುದ್ದಿಗೋಷ್ಠಿಯಲ್ಲಿ ಹೇಳಿದ್ದೇನು..?

ಅಕ್ಟೋಬರ್‌ನಲ್ಲಿ ದೆಹಲಿ ಮದ್ಯ ನೀತಿಯ ಅಡಿಯಲ್ಲಿ ಹಣ ವರ್ಗಾವಣೆ ಆರೋಪದ ಮೇಲೆ ಸಂಜಯ್ ಸಿಂಗ್ ಅವರ ನಿವಾಸದ ಮೇಲೆ ಇಡಿ ದಾಳಿ ನಡೆಸಿತ್ತು. ಈ ಪ್ರಕರಣದಲ್ಲಿ ಅನುಮೋದಕನಾಗಿದ್ದ ಉದ್ಯಮಿ ದಿನೇಶ್ ಅರೋರಾ ಜೊತೆ ಸಂಜಯ್ ಸಂಪರ್ಕ ಹೊಂದಿದ್ದನ್ನು ಇಡಿ ಪತ್ತೆ ಹಚ್ಚಿ ಬಂಧಿಸಿದೆ.

ಸಂಜಯ್ ಸಿಂಗ್ ಅವರಿಗಿಂತ ಮೊದಲು ದೆಹಲಿಯ ಆರೋಗ್ಯ ಸಚಿವ ಸತ್ಯೇಂದರ್ ಜೈನ್, ಅರವಿಂದ್ ಕೇಜ್ರಿವಾಲ್ ಅವರ ನಿಕಟವರ್ತಿ ಹಾಗೂ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಸಿಬಿಐ ಬಂಧಿಸಿ ಜೈಲಿಗೆ ಕಳುಹಿಸಿತ್ತು. ಕಳೆದ ತಿಂಗಳು ಇಡಿಯಿಂದ ಬಂಧನಕ್ಕೊಳಗಾಗಿದ್ದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಸದ್ಯ ತಿಹಾರ್ ಜೈಲಿನಲ್ಲಿದ್ದಾರೆ. ಸೋಮವಾರ, ರೂಸ್ ಅವೆನ್ಯೂ ನ್ಯಾಯಾಲಯವು ಅವರ ಕಸ್ಟಡಿಯನ್ನು ಇನ್ನೂ ಎರಡು ವಾರಗಳವರೆಗೆ ವಿಸ್ತರಿಸಿತು.

ಇದನ್ನೂ ಓದಿ; ನಿಮಗೆ ಕನಸಲ್ಲಿ ಇದೆಲ್ಲಾ ಕಾಣ್ತಿದೆಯಾ..?; ಹಾಗಾದ್ರೆ ಸಿರಿ, ಸಂಪತ್ತು ನಿಮ್ಮದಾಗಲಿದೆ!

ದೆಹಲಿ ಸರ್ಕಾರ ಎರಡು ವರ್ಷದ ಹಿಂದೆ ಹೊಸ ಮದ್ಯನೀತಿ ಜಾರಿಗೆ ತಂದಿತ್ತು.. ಈ ಮೊದಲು ದೆಹಲಿಯಲ್ಲಿ ಸರ್ಕಾರವೇ ಮದ್ಯದಂಗಡಿಗಳನ್ನು ನಡೆಸುತ್ತಿತ್ತು.. ಆದ್ರೆ ಹೊಸ ಮದ್ಯನೀತಿ ತಂದು ಖಾಸಗಿಯವರಿಗೆ ಮದ್ಯ ಮಾರಲು ಅವಕಾಶ ನೀಡಲಾಗಿತ್ತು.. ಈ ವೇಳೆ ಬೆಳಗಿನ ಜಾವ 3 ಗಂಟೆಯವರೆಗೂ ಮದ್ಯ ಮಾರಾಟ ಮಾಡಲು ಅವಕಾಶ ನೀಡಲಾಗಿತ್ತು.. ಇದರಲ್ಲಿ ಭ್ರಷ್ಟಾಚಾರ ನಡೆದಿದೆ.. ಕೆಲ ಉದ್ಯಮಿಗಳಿಗೆ ಅನುಕೂಲ ಮಾಡಿಕೊಡಲೆಂದೇ ಈ ನೀತಿ ಜಾರಿಗೆ ತರಲಾಗಿತ್ತು ಎಂಬ ಆರೋಪ ಕೇಳಿಬಂದಿತ್ತು.. ಜೊತೆಗೆ 100 ಕೋಟಿ ರೂಪಾಯಿ ಲಂಚ ಪಡೆಯಲಾಗಿದೆ ಎಂಬ ಆರೋಪ ಕೇಳಿಬಂದಿದೆ.. ಈ ಹಿನ್ನೆಲೆಯಲ್ಲಿ ಇಡಿ ಅಧಿಕಾರಿಗಳು ಪ್ರಕರಣದ ವಿಚಾರಣೆ ನಡೆಸುತ್ತಿದ್ದಾರೆ..

ಇದನ್ನೂ ಓದಿ; ಸೀರೆ ಕ್ಯಾನ್ಸರ್‌; ಸೀರೆ ಉಡೋದ್ರಿಂದಲೂ ಬರುತ್ತಂತೆ ಕ್ಯಾನ್ಸರ್‌!

Share Post