Lifestyle

ಮೀನು ಅಡುಗೆ ಮಾಡುವಾಗ ವಾಸನೆ ಬರ್ತಿದೆಯಾ..?; ಹಾಗಾದ್ರೆ ಹೀಗೆ ಮಾಡಿ..

ತುಂಬಾ ಜನಕ್ಕೆ ಮೀನು ಅಂದ್ರೆ ಇಷ್ಟ.. ಹೋಟೆಲ್‌ಗೆ ಹೋದರೆ ದುಬಾರಿ ಬೆಲೆ.. ಮನೆಯಲ್ಲಿ ಮಾಡಿಕೊಳ್ಳೋಣ ಅಂದ್ರೆ ಅಕ್ಕ ಪಕ್ಕದ ಮನೆಗಳಿಗೂ ಗೊತ್ತಾಗುವಷ್ಟು ವಾಸನೆ ಬರುತ್ತದೆ.. ಇದರ ನಡುವೆಯೂ ಮೀನಿನ ಅಡುಗೆ ಮಾಡಿದರೆ ದಿನವೀಡೀ ವಾಸನೆ ಮನೆಯಿಂದ ಹೋಗುವುದಿಲ್ಲ.. ಮನೆಯಲ್ಲಿ ನಾನ್‌ ವೆಜ್‌ ತಿನ್ನದವರು ಇದ್ದರೆ ಅವರಿಗೆ ಕಿರಿಕಿರಿ ಬೇರೆ.. ಇಂತಹ ಸಮಸ್ಯೆಯನ್ನು ನೀವೂ ಎದುರಿಸುತ್ತಿದ್ದೀರಾ..? ಹಾಗಾದ್ರೆ ನಿಮಗಾಗಿ ಇಲ್ಲಿ ಕೆಲವೊಂದು ಟಿಪ್ಸ್‌ ನೀಡುತ್ತಿದ್ದೇವೆ.. ಇವುಗಳನ್ನು ಫಾಲೋ ಮಾಡಿದರೆ ಮೀನಿನ ವಾಸನೆ ಬರದಂತೆ ತಡೆಯಬಹುದು..

ಇದನ್ನೂ ಓದಿ; ಬಾಡಿಗೆ ವಿಲ್ಲಾದಲ್ಲಿ ನೀಲಿ ಚಿತ್ರ ಚಿತ್ರೀಕರಣ; ಬಲೆಗೆ ಬಿತ್ತು ಖತರ್ನಾಕ್‌ ಗ್ಯಾಂಗ್‌

ಚೆನ್ನಾಗಿ ಮೀನನ್ನು ಸ್ವಚ್ಛ ಮಾಡಿ;

ಮೀನನ್ನು ಬೇಯಿಸಿದ ನಂತರ, ಸಾಧ್ಯವಾದಷ್ಟು ಬಹುಬೇಗ ಅಡುಗೆ ಮನೆಯನ್ನು ಸ್ವಚ್ಛ ಮಾಡಿ. ಇದರ ಜೊತೆಗೆ ಪಾತ್ರೆಗಳನ್ನು ಕೂಡಾ ಬಹುಬೇಗ ತೊಳೆದುಬಿಡಿ.. ಇದರಿಂದಾಗಿ ಮನೆಯಲ್ಲಿ ಮೀನಿನ ವಾಸನೆ ಕಡಿಮೆಯಾಗುತ್ತದೆ.. ಸ್ಟೌ ಮತ್ತು ಕೌಂಟರ್ ಟಾಪ್ ಗಳನ್ನು ಸ್ವಚ್ಛಗೊಳಿಸುವುದರಿಂದ ಮೀನಿನ ವಾಸನೆ ದೂರವಾಗುತ್ತದೆ.

ಏರ್ ಫ್ರೆಶನರ್;

ಮೀನು ಬೇಯಿಸಿದ ಅಥವಾ ಫ್ರೈ ಮಾಡಿದ ತಕ್ಷಣ ಅವುಗಳನ್ನು ಸರ್ವ್‌ ಮಾಡಬೇಡಿ.. ಅದಕ್ಕಿಂತ ಮೊದಲು ಫ್ಯಾನ್‌ ಆನ್‌ ಮಾಡಿ, ಏರ್‌ಫ್ರೆಶನರ್‌ ಸಿಂಪಡಿಸಿ.. ಇದರಿಂದಾಗಿ ಮನೆಯ ತುಂಬಾ ಸುವಾಸನೆ ಹರಡುತ್ತದೆ.. ಮೀನಿನ ವಾಸನೆ ಕಡಿಮೆಯಾಗುತ್ತದೆ.. ಆಗ ಮೀನನ್ನು ಸರ್ವ್‌ ಮಾಡಿ.. ಇದರಿಂದಾಗಿ ಮೀನಿ ವಾಸನೆ ಇರೋದಿಲ್ಲ.. ಯಾವುದೇ ಮುಜುಗರವಿಲ್ಲದೆ ಮೀನಿನ ಆಹಾರವನ್ನು ಸೇವನೆ ಮಾಡಬಹುದು..

ಇದನ್ನೂ ಓದಿ; ಅತಿಯಾಗಿ ಉಪ್ಪು ಸೇವನೆ ಮಾಡಿದರೆ ʻಆʼ ಶಕ್ತಿ ಕಡಿಮೆಯಾಗುತ್ತಂತೆ!

ದಾಲ್ಚಿನ್ನಿ;

ದಾಲ್ಚಿನ್ನಿಯನ್ನು ಕೂಡಾ ಬಳಸಬಹುದು.. ಯಾಕಂದ್ರೆ ದಾಲ್ಚಿಯಿಂದ ಮೀನಿನ ವಾಸನೆಯನ್ನು ಹೋಗಲಾಡಿಸಬಹುದು. ವಿನೆಗರ್ ನೀರಿನಲ್ಲಿ ದಾಲ್ಚಿನ್ನಿ ಹಾಕಿಟ್ಟರೆ ಮನೆಯಲ್ಲಿ ಸುವಾಸನೆ ಬರುತ್ತದೆ. ನೀವು ಹೊಂದಿರುವ ಯಾವುದೇ ಸಾರಭೂತ ತೈಲಗಳನ್ನು ಸಹ ಬಳಸಬಹುದು. ಇದು ನಿಮ್ಮ ಅಡುಗೆಮನೆಗೆ ಉತ್ತಮವಾದ ವಾಸನೆಯನ್ನು ನೀಡುತ್ತದೆ. ಇದರಿಂದಾಗಿ ನೀವು ಮೀನಿನ ಅಡುಗೆ ಮಾಡಿದರೂ ಯಾವುದೇ ವಾಸನೆ ಬರುವುದಿಲ್ಲ.

ಕಾಫಿ ಬೀನ್ಸ್;

ವಾಸನೆಯನ್ನು ತೆಗೆದುಹಾಕಲು ಒಂದು ಬೌಲ್ ವಿನೆಗರ್ ಮತ್ತು ಸ್ವಲ್ಪ ನೆಲದ ಕಾಫಿಯನ್ನು ಕೌಂಟರ್ ಟಾಪ್‌ನಲ್ಲಿ ಇರಿಸಿ. ಹುರಿದರೂ ಆ ವಾಸನೆಯ ಸಮಸ್ಯೆ ದೂರವಾಗುತ್ತದೆ.

ಇದನ್ನೂ ಓದಿ; ಕಡಿಮೆ ಬಡ್ಡಿ ದರದಲ್ಲಿ ಪರ್ಸನಲ್‌ ಲೋನ್‌ ಬೇಕಾ..?; ಹಾಗಾದರೆ ಈ ವಿಧಾನ ಅನುಸರಿಸಿ!

ವಿನೆಗರ್, ನೀರು;

ಮೀನು ಫ್ರೈ ಮಾಡುವಾಗ, ಬಾಣಲೆಯಲ್ಲಿ ನೀರನ್ನು ಕುದಿಸಬೇಕು. ನೀರು ಕುದಿಯುವಾಗ, ಎರಡು ಅಥವಾ ಮೂರು ಸ್ಪೂನ್ ವಿನೆಗರ್ ಸೇರಿಸಬೇಕು. ಇದು ತಕ್ಷಣವೇ ಗಾಳಿಯಿಂದ ಮೀನಿನ ವಾಸನೆಯನ್ನು ತೆಗೆದುಹಾಕುತ್ತದೆ. ಇದರಿಂದ ಉತ್ತಮ ಅನುಭವವಾಗುತ್ತದೆ. ಯಾವುದೇ ತೊಂದರೆಯಿಲ್ಲದೆ ಮೀನಿನ ಆಹಾರವನ್ನು ಸೇವನೆ ಮಾಡಬಹುದಾಗಿದೆ.

ಇದನ್ನೂ ಓದಿ; ಕೇಕ್‌ನಲ್ಲೇ ಇದ್ದ ಯಮರಾಯ; ಹುಟ್ಟಹಬ್ಬದಂದೇ ಬಾಲಕಿ ಕೇಕ್‌ಗೆ ಬಲಿ!

ಎಕ್ಸಾಸ್ಟ್ ಫ್ಯಾನ್;

ನಾನ್ ವೆಜ್ ಫುಡ್ ಅದರಲ್ಲೂ ಮೀನನ್ನು ಅಡುಗೆ ಮಾಡುವಾಗ ಹೆಚ್ಚು ವಾಸನೆ ಮತ್ತು ಹೊಗೆ ಇರುವಾಗ ಎಕ್ಸಾಸ್ಟ್ ಫ್ಯಾನ್ ಬಳಸುವುದು ಉತ್ತಮ. ಈ ಚಿಮಣಿಯನ್ನು ಬಳಸುವುದರಿಂದ ಕೇವಲ ವಾಸನೆ ನಿವಾರಣೆಯಾಗುವುದಿಲ್ಲ. ಹೊಗೆಯೂ ಇರುವುದಿಲ್ಲ.

ಹೀಗೆ ಹಲವು ವಿಧಾನಗಳನ್ನು ಅನಸರಿಸುವ ಮೂಲಕ ಮೀನಿನ ಅಡುಗೆಯನ್ನು ಮನೆಯಲ್ಲಿ ಆರಾಮಾಗಿ ಮಾಡಿಕೊಳ್ಳಬಹುದು.. ಮೀನಿನ ಫ್ರೈ ಮಾಡಿದರೂ ಕೂಡಾ ಮೇಲಿನ ವಿಧಾನಗಳನ್ನು ಅನುಸರಿಸಿದರೆ ಹೆಚ್ಚು ವಾಸನೆ ಬರುವುದಿಲ್ಲ.. ಯಾರಿಗೂ ಗೊತ್ತಾಗುವುದೂ ಇಲ್ಲ..

ಇದನ್ನೂ ಓದಿ; ಬೆಂಗಳೂರು ನೀರಿನ ಸಮಸ್ಯೆಗೆ ಪರಿಹಾರ ಸೂಚಿಸಿದ ಮೆಗಾಸ್ಟಾರ್‌ ಚಿರಂಜೀವಿ!

Share Post