Health

ಈ ಲಕ್ಷಣಗಳಿದ್ದರೆ ನಿಮ್ಮ ಕಿಡ್ನಿಯಲ್ಲಿ ಸ್ಟೋನ್‌ ಇರಬಹುದು!

ಒತ್ತಡ ಜೀವನದಲ್ಲಿ ನಡುವೆ ನಾವು ನಮ್ಮ ದೇಹಕ್ಕೆ ಬೇಕಾದ ನೀರನ್ನು ಕುಡಿಯುವುದೇ ಇಲ್ಲ… ಕೆಲಸದ ನಡುವೆ ನೀರು ಕುಡಿಯುವುದನ್ನೂ ಮರೆಯುತ್ತೇವೆ.. ಇದರ ಜೊತೆಗೆ ಜಂಕ್‌ ಫುಡ್‌ ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತೇವೆ.. ಇದರಿಂದಾಗಿ ಕಿಡ್ನಿ ಸ್ಟೋನ್‌ ಉಂಟಾಗಬಹುದು.. ಇತ್ತೀಚೆಗೆ ಕಿಡ್ನಿ ಸ್ಟೋನ್‌ ಸಮಸ್ಯೆಯಿಂದ ಬಳಲುವವರು ತುಂಬಾನೇ ಹೆಚ್ಚಾಗಿದ್ದಾರೆ.. ಅಂದಹಾಗೆ ಕಿಡ್ನಿಸ್ಟೋನ್‌ ಆಗಿದೆ ಎಂದು ನಮ್ಮ ದೇಹದಲ್ಲಿ ಉಂಟಾಗುವ ಸಮಸ್ಯೆಗಳಿಂದಲೇ ತಿಳಿಯಬಹುದು… ಕಿಡ್ನಿ ಸ್ಟೋನ್‌ ಆಗಿದ್ದರೆ ನಿಮಗೆ ಏನೆಲ್ಲಾ ಸಮಸ್ಯೆ ಕಾಣಿಸಿಕೊಳ್ಳುತ್ತದೆ ನೋಡೋಣ ಬನ್ನಿ..

ಇದನ್ನೂ ಓದಿ; Breaking; ಕಾಂಗ್ರೆಸ್ ಪಟ್ಟಿ ರಿಲೀಸ್; ಚಿಕ್ಕಬಳ್ಳಾಪುರಕ್ಕೆ ರಕ್ಷಾ ರಾಮಯ್ಯ

ಈ ಸಮಸ್ಯೆಗಳು ನಿಮ್ಮಲ್ಲಿ ಪದೇ ಪದೇ ಕಾಡುತ್ತಿದ್ದರೆ ಅದು ಕಿಡ್ನಿ ಸ್ಟೋನ್‌ ಸಮಸ್ಯೆಯ ಆರಂಭಿಕ ಲಕ್ಷಣಗಳು ಎಂದು ನಾವು ತಿಳಿಯಬಹುದು..

೧. ಹೊಟ್ಟೆಯ ಕೆಳಭಾಗದಲ್ಲಿ ಯಾವಾಗಲೂ ವಿಪರೀತ ನೋವು ಕಾಣಿಸಿಕೊಳ್ಳುತ್ತದೆ.. ಪಕ್ಕೆಲುಬುಗಳು, ಭುಜಗಳು, ಬೆನ್ನಿನ ಕೆಳಭಾಗ ಕೂಡಾ ನೋವಿರುತ್ತದೆ.. ಈ ಲಕ್ಷಣಗಳಿದ್ದರೆ ಮೂತ್ರಪಿಂಡದಲ್ಲಿ ಕಲ್ಲು ಆಗಿರುವ ಸಾಧ್ಯತೆ ಇದೆ..  ಮೂತ್ರಪಿಂಡದ ಕಲ್ಲುಗಳು ಇತರ ಪ್ರದೇಶಗಳಿಗೆ ಹರಡಿದಾಗ, ನೋವು ಹೊಟ್ಟೆಯ ಜೊತೆಗೆ ಬೆನ್ನಿನ ಕೆಳಭಾಗಕ್ಕೆ ಹರಡುತ್ತದೆ.

ಇದನ್ನೂ ಓದಿ; ಸಿದ್ದರಾಮಯ್ಯ ಗರ್ವಭಂಗ ಆಗಬೇಕು; ದೇವೇಗೌಡ

೨. ಮೂತ್ರ ವಿಸರ್ಜನೆ ಮಾಡುವಾಗ ತೀವ್ರವಾದ ನೋವು ಅಥವಾ ಉರಿ ಹೆಚ್ಚಾಗಿರುತ್ತದೆ.. ಇದು ಸತತವಾಗಿ ಕಂಡುಬಂದರೆ ಕಿಡ್ನಿ ಸ್ಟೋನ್‌ ಆಗಿರುವ ಸಂಕೇತವಾಗಿರಬಹುದು. ಈ ರೋಗಲಕ್ಷಣವು ಕಂಡುಬಂದರೆ, ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ಪರೀಕ್ಷೆಗಳನ್ನು ಮಾಡಿಸಿ ವೈದ್ಯರ ಸಲಹೆಯಂತೆ ಮುನ್ನಡೆಯಬೇಕು..

೩. ಪದೇ ಪದೇ ಮೂತ್ರ ವಿಸರ್ಜನೆ,  ಸಾಮಾನ್ಯಕ್ಕಿಂತ ಹೆಚ್ಚಾಗಿ ಮೂತ್ರ ಹೊರಹೋಗುತ್ತಿದ್ದರೂ ಮೂತ್ರನಾಳಕ್ಕೆ ಕಲ್ಲು ಸೇರಿರುವ ಸಾಧ್ಯತೆಯೇ ಹೆಚ್ಚಿರುತ್ತದೆ.. ಹೀಗಾಗಿ ಇಂತಹ ಸಮಸ್ಯೆ ಇದ್ದಾಗ ತಡ ಮಾಡದೇ ವೈದ್ಯರ ಬಳಿ ಪರೀಕ್ಷೆ ಮಾಡಿಸುವುದು, ವೈದ್ಯರ ಸಲಹೆ ಪಡೆಯುವುದು ಒಳ್ಳೆಯದು.

ಇದನ್ನೂ ಓದಿ; ಬೆವರು ದುರ್ವಾಸನೆಯಿಂದ ರೋಸಿಹೋಗಿದ್ದೀರಾ..?; ಹಾಗಾದ್ರೆ ಈ ಟಿಪ್ಸ್‌ ಫಾಲೋ ಮಾಡಿ..

೪. ಮೂತ್ರದ ಜೊತೆ ಕೆಲವು ಬಾರಿ ರಕ್ತವೂ ಕೂಡಾ ಹೊರಬರುತ್ತದೆ..  ಇದೂ ಕೂಡಾ ಕಿಡ್ನಿಯಲ್ಲಿ ಕಲ್ಲು ಆಗಿದೆ ಎಂಬುದರ ಲಕ್ಷಣ..  ಇದನ್ನು ಹೆಮಟುರಿಯಾ ಅಂತಾನೂ ಕರೆಯುತ್ತಾರೆ. ರಕ್ತ ಕೆಂಪು, ಗುಲಾಬಿ ಅಥವಾ ಕಂದು ಬಣ್ಣದ್ದಾಗಿ ಮೂತ್ರದಿಂದ ಹೊರಬರುತ್ತದೆ.. ಹೀಗೆ ಬಂದರೆ ಕಿಡ್ನಿಯಲ್ಲಿ ಸ್ಟೋನ್‌ ಆಗಿರಬಹುದು. ವೈದ್ಯರಿಗೆ ಸಮಸ್ಯೆ ಹೇಳಿ ಪರೀಕ್ಷೆಗಳನ್ನು ಮಾಡಿಸಿ, ವೈದ್ಯರು ಸೂಚಿಸಿದಂತೆ ನಡೆಯಿತು.

೫. ಮೂತ್ರದಲ್ಲಿ ದುರ್ವಾಸನೆ ಬರುತ್ತದೆ.. ಮೂತ್ರ ವಿಸರ್ಜನೆ ಮಾಡುವಾಗ ವಿಪರೀತ ವಾಸನೆ ಬಂದರೆ ಕಿಡ್ನಿ ಸ್ಟೋನ್‌ ಆಗಿರುವ ಸಾಧ್ಯತೆಯೇ ಹೆಚ್ಚಿರುತ್ತದೆ.. ಇಂತಹ ಸಂದರ್ಭದಲ್ಲಿ ತಡ ಮಾಡದೇ ವೈದ್ಯರನ್ನು ಭೇಟಿಯಾಗುವುದು ಒಳ್ಳೆಯದು. ಪರೀಕ್ಷೆ ಮಾಡಿ ವೈದ್ಯರು ನಿಮಗೆ ಸೂಕ್ತ ಸಲಹೆಗಳನ್ನು ನೀಡುತ್ತಾರೆ.. ಅದನ್ನು ಅನಸರಿಸಬೇಕಾಗುತ್ತದೆ..

೬. ಕಿಡ್ನಿಯಲ್ಲಿ ಕಲ್ಲುಗಳಿದ್ದರೆ ವಾಕರಿಕೆ, ವಾಂತಿ ಮುಂತಾದ ಲಕ್ಷಣಗಳು ಕೂಡಾ ಕಾಣಿಸಿಕೊಳ್ಳುತ್ತವೆ..  ಈ ಲಕ್ಷಣದ  ಜೊತೆಗೆ ಹೊಟ್ಟೆ ನೋವು ಕೂಡಾ ಬರುತ್ತದೆ.. ಇಂತಹ ಲಕ್ಷಣಗಳು ಕಿಡ್ನಿ ಸ್ಟೋನ್‌ ಇದೆ ಎಂಬುದನ್ನು ನೆನಪಿಸುವುದೇ ಆಗಿರಬಹುದು.. ಇಂತಹ ಸಮಸ್ಯೆಗಳು ಉಂಟಾದಾಗ ನಿರ್ಲಕ್ಷ್ಯ ಮಾಡದೇ ವೈದ್ಯರ ಬಳಿ ಹೋಗುವುದು ಉತ್ತಮ.. ಹಾಗಂತ ಈ ಲಕ್ಷಣಗಳು ಇದ್ದ ಮಾತ್ರಕ್ಕೆ ಕಿಡ್ನಿ ಸ್ಟೋನ್‌ ಆಗೇ ಆಗಿರುತ್ತದೆ ಎಂದಲ್ಲ.. ಬೇರೆ ಸಮಸ್ಯೆಗಳಿಂದ ಇಂತಹ ಲಕ್ಷಣಗಳು ಕಾಣಿಸಿರಬಹುದು.. ಹೀಗಾಗಿ ವೈದ್ಯರಿಗೆ ತೋರಿಸಬೇಕಾಗುತ್ತದೆ.. ನಾವೇ ನಿರ್ಧಾರ ಮಾಡುವುದು ಸರಿಯಾಗುವುದಿಲ್ಲ..

ಇದನ್ನೂ ಓದಿ; ಮಾನಸಿಕ ಒತ್ತಡದಲ್ಲಿದ್ದೀರಾ..?; ಹಾಗಾದರೆ ಈ ಮಂತ್ರಗಳನ್ನು ಜಪಿಸಿ!

೭. ಜ್ವರ ಮತ್ತು ಶೀತ ಯಾವಾಗಲೂ ಬರುತ್ತಿದ್ದರೂ ಕೂಡಾ ಮೂತ್ರಪಿಂಡದ ಕಲ್ಲುಗಳಾಗಿರುವ ಸಂಕೇತ ಆಗಿರಬಹುದು. ದೀರ್ಘಕಾಲದವರೆಗೆ ಜ್ವರ ಬಂದರೆ ನೀವು ವೈದ್ಯರನ್ನು ಸಂಪರ್ಕಿಸಿ, ನಿಮಗೆ ಆಗುತ್ತಿರುವ ತೊಂದರೆ ಬಗ್ಗೆ ಯಾವುದನ್ನು ಮುಚ್ಚಿಡದೆ ಹೇಳಿ. ತಜ್ಞ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಪರೀಕ್ಷೆ ಮಾಡಿಸಿಕೊಳ್ಳಿ.

ಹೀಗೆ ಹಲವಾರು ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.. ಒತ್ತಡದ ಜೀವನ, ಜಂಕ್‌ ಫುಡ್‌ ಸೇವನೆ, ನೀರು ಕುಡಿಯುವುದನ್ನ ಕಡಿಮೆ ಮಾಡುವುದು ಕಿಡ್ನಿ ಸ್ಟೋನ್‌ ಆಗಲು ಕಾರಣವಾಗುತ್ತದೆ..

ಇದನ್ನೂ ಓದಿ; ಬೇಸಿಗೆಯಲ್ಲಿ ಸನ್ ಟ್ಯಾನ್ ಸಮಸ್ಯೆಗೆ ಇಲ್ಲಿದೆ ಪರಿಹಾರ

Share Post