Politics

ಶಿವಮೊಗ್ಗಕ್ಕೆ ಪ್ರಧಾನಿ ಮೋದಿ; ಏರ್‌ಪೋರ್ಟ್‌ನಲ್ಲೇ ಈಶ್ವರಪ್ಪನ ಕೋಪ ಶಮನ?

ಶಿವಮೊಗ್ಗ; ಕಳೆದ ಎರಡು ದಿನಗಳಿಂದ ದಕ್ಷಿಣ ಭಾರತದ ಪ್ರವಾಸ ಆರಂಭಿಸಿರುವ ಪ್ರಧಾನಿ ಮೋದಿಯವರು ಶನಿವಾರ ಕಲಬುರಗಿಯಲ್ಲಿ ಸಮಾವೇಶ ನಡೆಸಿದ್ದರು.. ಅನಂತರ ಆಂಧ್ರ ಪ್ರದೇಶ, ತೆಲಂಗಾಣದಲ್ಲಿ ಅಬ್ಬರ ಪ್ರಚಾರ ಭಾಷಣ ಮಾಡಿದ್ದರು.. ಇದೀಗ ಇಂದು ಅವರು ಶಿವಮೊಗ್ಗಕ್ಕೆ ಆಗಮಿಸುತ್ತಿದ್ದಾರೆ… ಈಶ್ವರಪ್ಪ ಬಂಡಾಯವೆದ್ದಿದ್ದಾರೆ.. ಮೋದಿ ಆಗಮನದಿಂದ ಅದು ಶಮನವಾಗಬಹುದೇ ಎಂಬ ಕುತೂಹಲ ಶುರುವಾಗಿದೆ..

ಇದನ್ನೂ ಓದಿ;ಒಕ್ಕಲಿಗ-ಬಲಿಜ ಕಾಂಬಿನೇಷನ್‌; ಚಿಕ್ಕಬಳ್ಳಾಪುರಕ್ಕೆ ಸುಮಲತಾ ಅಂಬರೀಶ್‌?

ಮಧ್ಯಾಹ್ನ 1.15ಕ್ಕೆ ಆಗಮಿಸಲಿರುವ ಮೋದಿ;

ಪ್ರಧಾನಿ ನರೇಂದ್ರ ಮೋದಿಯವರು ಬೆಳಗ್ಗೆ ತೆಲಂಗಾಣದಲ್ಲಿ ಪ್ರಚಾರ ಸಭೆಯಲ್ಲಿ ಪಾಲ್ಗೊಂಡಿದ್ದರು.. ಇದೀಗ ಅವರು ಶಿವಮೊಗ್ಗದತ್ತ ಆಗಮಿಸುತ್ತಿದ್ದಾರೆ. ಮಾಧ್ಯಹ್ನ 1.15ಕ್ಕೆ ಅವರು ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ… ನಂತರ ಅವರು ಶಿವಮೊಗ್ಗದ ಫ್ರೀಡಂ ಪಾರ್ಕ್‌ನಲ್ಲಿ ಹಮ್ಮಿಕೊಂಡಿರುವ ಸಮಾವೇಶದಲ್ಲಿ ಭಾಗಿಯಾಗಲಿದ್ದದಾರೆ. ಸುಮಾರು 3-4 ಲಕ್ಷ ಜನ ಈ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.

ಇದನ್ನೂ ಓದಿ; ಬಿಜೆಪಿಯಲ್ಲಿ ಭಿನ್ನಮತದ ಜ್ವಾಲೆ; 9 ಕ್ಷೇತ್ರಗಳಲ್ಲಿ ಬಂಡಾಯ ಭೀತಿ!

ವಿಮಾನ ನಿಲ್ದಾಣದಲ್ಲಿ ಈಶ್ವರಪ್ಪ ಭೇಟಿ..?

ಪುತ್ರ ಕಾಂತೇಶ್‌ಗೆ ಹಾವೇರಿ ಟಿಕೆಟ್‌ ನೀಡದಿದ್ದಕ್ಕೆ ಈಶ್ವರಪ್ಪ ಮುನಿಸಿಕೊಂಡಿದ್ದಾರೆ.. ಶಿವಮೊಗ್ಗ ಕ್ಷೇತ್ರದಲ್ಲಿ ಯಡಿಯೂರಪ್ಪ ಪುತ್ರ ರಾಘವೇಂದ್ರ ವಿರುದ್ಧ ಸ್ಪರ್ಧೆಗೆ ಈಶ್ವರಪ್ಪ ಫಿಕ್ಸ್‌ ಆಗಿದ್ದಾರೆ.. ಈ ನಡುವೆ ನಿನ್ನೆ ರಾಜ್ಯ ಬಿಜೆಪಿ ಉಸ್ತುವಾರಿ ಸೇರಿ ಹಲವು ನಾಯಕರು ಈಶ್ವರಪ್ಪ ಅವರ ಮನವೊಲಿಸುವ ಪ್ರಯತ್ನ ಮಾಡಿದರು.. ಆದ್ರೆ ಯಾವುದೇ ಪ್ರಯೋಜನವಾಗಿಲ್ಲ.. ಈ ನಡುವೆ ಇಂದು ಮೋದಿ ಶಿವಮೊಗ್ಗಕ್ಕೆ ಆಗಮಿಸುತ್ತಿದ್ದಾರೆ.. ಇದೇ ವೇಳೆ ಈಶ್ವರಪ್ಪ ಅವರನ್ನು ಶಿವಮೊಗ್ಗ ವಿಮಾನ ನಿಲ್ದಾಣದಕ್ಕೆ ಮೋದಿ ಭೇಟಿ ಮಾಡಿಸುವ ಪ್ರಯತ್ನ ನಡೆಯುತ್ತಿದೆ.. ಈ ಹಿಂದೆ ವಿಧಾನಸಭಾ ಚುನಾವಣೆ ಸಮಯದಲ್ಲಿ ಕೂಡಾ ಈಶ್ವರಪ್ಪ ಮುನಿಸಿಕೊಂಡಿದ್ದರು.. ಈ ವೇಳೆ ಮೋದಿ ಒಂದು ಕಾಲ್‌ ಮಾಡುತ್ತಿದ್ದಂತೆ ಎಲ್ಲಾ ಮುನಿಸು ಮರೆತು ಪ್ರಚಾರದಲ್ಲಿ ಪಾಲ್ಗೊಂಡಿದ್ದರು.. ಈ ಬಾರಿ ಕೂಡಾ ಅವರು ಮೋದಿ ವಿರುದ್ಧ ಮುನಿಸು ತೋರಿಸುತ್ತಿಲ್ಲ.. ಯಡಿಯೂರಪ್ಪ ಕುಟುಂಬದ ವಿರುದ್ಧ ಮುನಿಸು ತೋರಿಸುತ್ತಿದ್ದಾರೆ.. ಹೀಗಾಗಿ ಮೋದಿ ಒಂದು ಮಾತು ಹೇಳಿದರೆ ಈಶ್ವರಪ್ಪ ಮುನಿಸು ಶಮನವಾಗುತ್ತೆ ಎಂದೇ ಹೇಳಲಾಗುತ್ತಿದೆ.

ಇದನ್ನೂ ಓದಿ; ಮುಂಜಾನೆಯೇ ಹೆಚ್ಚು ಹೃದಯಾಘಾತ ಯಾಕೆ..?; ಇದಕ್ಕೆ ಕಾರಣ ಏನು..?

2.5 ಲಕ್ಷ ಖುರ್ಚಿಗಳ ವ್ಯವಸ್ಥೆ, ಬೃಹತ್‌ ಪೆಂಡಾಲ್‌;

ಮೋದಿ ಆಗಮನದ ಹಿನ್ನೆಲೆಯಲ್ಲಿ ಶಿವಮೊಗ್ಗದ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್‌ ಪೆಂಡಾಲ್‌ ಹಾಕಲಾಗಿದೆ.. ಸುಮಾರು 2.5 ಲಕ್ಷ ಖುರ್ಚಿಗಳನ್ನು ಹಾಕಲಾಗಿದೆ. ಸಮಾವೇಶಕ್ಕೆ ಸುಮಾರು 3 ರಿಂದ 4 ಲಕ್ಷ ಬರುವ ನಿರೀಕ್ಷೆ ಇದೆ.. ಮೋದಿಯವರು ಪ್ರಧಾನಿಯಾದ ಮೇಲೆ ಇದು ಮೂರನೇ ಬಾರಿ ಶಿವಮೊಗ್ಗಕ್ಕೆ ಬರುತ್ತಿದ್ದಾರೆ.. ಹೀಗಾಗಿ ಅವರ ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿ ಕಾಯುತ್ತಿದ್ದಾರೆ.. ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಬಂದಿಳಿಯುವ ಮೋದಿಯವರು, ಅಲ್ಲಿಂದ ರಸ್ತೆ ಮಾರ್ಗವಾಗಿ 10 ಕಿಲೋ ಮೀಟರ್‌ ದೂರದಲ್ಲಿರುವ ಫ್ರೀಡಂ ಪಾರ್ಕ್‌ಗೆ ಬರಲಿದ್ದಾರೆ.. ರೋಡ್‌ ಶೋ ಕೂಡಾ ನಡೆಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ; ಮತದಾರ ಗುರುತಿನ ಚೀಟಿಯಲ್ಲಿ ಅಡ್ರೆಸ್ ಬದಲಿಸಬೇಕೇ..?; ಹೀಗೆ ಮಾಡಿ ಸಾಕು

ನಾಲ್ಕು ಲೋಕಸಭಾ ಕ್ಷೇತ್ರದ ಕಾರ್ಯಕರ್ತರು ಭಾಗಿ;

ಒಂದೂವರೆ ಗಂಟೆ ಕಾಲ ಈ ಸಮಾವೇಶ ನಡೆಯಲಿದೆ.  ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ತೆರಳಲಿದ್ದಾರೆ. ಸಂಜೆ 4ಕ್ಕೆ ತಮಿಳುನಾಡಿನ ಕೊಯಮತ್ತೂರು ಕಾರ್ಯಕ್ರಮದಲ್ಲಿ ಭಾಗಿ ಆಗಲಿದ್ದಾರೆ. ಮಧ್ಯ ಕರ್ನಾಟಕ ಭಾಗವಾದ ಶಿವಮೊಗ್ಗ, ಚಿತ್ರದುರ್ಗ, ದಾವಣೆಗೆರೆ, ಚಿಕ್ಕಮಗಳೂರು-ಉಡುಪಿ ಕ್ಷೇತ್ರ ಗಮನದಲ್ಲಿರಿಸಿಕೊಂಡು ಶಿವಮೊಗ್ಗದಲ್ಲಿ ಈ ಸಮಾವೇಶ ಆಯೋಜನೆ ಮಾಡಲಾಗಿದೆ. ಈ ನಾಲ್ಕು ಲೋಕಸಭಾ ಕ್ಷೇತ್ರಗಳಿಂದ ಮುಖಂಡರು, ಕಾರ್ಯಕರ್ತರು ಭಾಗಿಯಾಗುತ್ತಿದ್ದಾರೆ.. ಭಾಷಣ ಮುಗಿದ ಮೇಲೆ ಮೋದಿಯವರು ತಮಿಳುನಾಡಿಗೆ ಪ್ರವಾಸ ಬೆಳೆಸಲಿದ್ದಾರೆ.

 

Share Post