BengaluruEconomy

ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ; ಶೇ.27.50 ವೇತನ ಹೆಚ್ಚಳಕ್ಕೆ ಶಿಫಾರಸು!

ಬೆಂಗಳೂರು; ಕೊನೆಗೂ ಸರ್ಕಾರಕ್ಕೆ ಏಳನೇ ವೇತನ ಆಯೋಗದ ವರದಿ ಸಲ್ಲಿಕೆಯಾಗಿದೆ. ಇಂದು ಏಳನೇ ವೇತನ ಆಯೋಗದ ಸಮಿತಿ ಅಧ್ಯಕ್ಷ ಸುಧಾಕರ್‌ ರಾವ್‌ ನೇತೃತ್ವದಲ್ಲಿ ಸಿಎಂ ಸಿದ್ದರಾಮಯ್ಯಗೆ ವರದಿ ಸಲ್ಲಿಸಲಾಯಿತು. ಆಯೋಗದ ಸದಸ್ಯರಾದ ಪಿ.ಬಿ. ರಾಮಮೂರ್ತಿ, ಶ್ರೀಕಾಂತ್ ವನಹಳ್ಳಿ, ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಇದನ್ನೂ ಓದಿ; ಶಿವಮೊಗ್ಗ ಲೋಕಸಭಾ; BSY ವಿರುದ್ಧ ʻಈಶಾʼಸ್ತ್ರ ಪ್ರಯೋಗ, ಗೀತಾಗೆ ʻಕುಮಾರʼದೆಸೆ

ಶೇ.27.5ರಷ್ಟು ವೇತನ ಹೆಚ್ಚಳಕ್ಕೆ ಶಿಫಾರಸು;

ಸಿದ್ದರಾಮಯ್ಯ ಅವರು ನಿನ್ನೆ ಪ್ರವಾಸದಲ್ಲಿದ್ದ ಕಾರಣ ವರದಿ ಸ್ವೀಕಾರ ಮಾಡೋದಕ್ಕೆ ಆಗಿರಲಿಲ್ಲ.. ಇಂದು ಸಿದ್ದರಾಮಯ್ಯ ಅವರಿಗೆ ವರದಿ ಸಲ್ಲಿಸಲಾಗಿದೆ.. ಸಲ್ಲಿಕೆಯಾಗಿರುವ ಏಳನೇ ವೇತನ ಆಯೋಗದ ವರದಿಯಲ್ಲಿ ಮೂಲ ವೇತನದ ಮೇಲೆ ಶೇ.27.5 ರಷ್ಟು ಹೆಚ್ಚಳ ಮಾಡಬೇಕೆಂದು ಶಿಫಾರಸು ಮಾಡಲಾಗಿದೆ… ಈ ಶಿಫಾರಸಿನಂತೆ ಲೆಕ್ಕ ಹಾಕಿದರೆ, ಮೂಲ ವೇತನ 17 ಸಾವಿರದಿಂದ 27 ಸಾವಿರ ರೂ.ಗಳಿಗೆ ಏರಿಕೆ ಮಾಡಬೇಕಾಗುತ್ತದೆ.. ಈ ವರದಿಯನ್ನು ಆರ್ಥಿಕ ಇಲಾಖೆಯಲ್ಲಿ ಪರಿಶೀಲನೆ ಮಾಡಿ ನಿರ್ಧಾರ ಕೈಗೊಳ್ಳಲಾಗುತ್ತದೆ.

ಇದನ್ನೂ ಓದಿ; ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ಕೊಟ್ರಾ ನಮ್ಮ ಮೆಟ್ರೋ ಅಧಿಕಾರಿ?

ಶೇ.17ರಷ್ಟು ವೇತನ ಹೆಚ್ಚಳ ಮಾಡಿದ್ದ ಸರ್ಕಾರ;

ವೇತನ ಹೆಚ್ಚ ಮಾಡುವಂತೆ ಸರ್ಕಾರಿ ನೌಕರರು ಪ್ರತಿಭಟನೆ ನಡೆಸಿದ್ದರು.. ಆ ವೇಳೆ ತಕ್ಷಣಕ್ಕೆ ಮೂಲ ವೇತನದಲ್ಲಿ ಶೇಕಡಾ 17ರಷ್ಟು ಹೆಚ್ಚಳ ಮಾಡಿ ಸರ್ಕಾರ ಆದೇಶ ಹೊರಡಿಸಿತ್ತು. ಅನಂತರ ಇನ್ನೂ ವೇತನ ಹೆಚ್ಚಳ ಕುರಿತಂತೆ ವರದಿ ನೀಡಲು ೭ನೇ ವೇತನ ಆಯೋಗದ ಅಧ್ಯಕ್ಷ ಸುಧಾಕರ್‌ ರಾವ್‌ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿತ್ತು. ಆ ಸಮಿತಿ ಈಗ ವರದಿ ಕೊಟ್ಟಿದೆ.. ಈ ವರದಿಯಲ್ಲಿ ಶೇ.27.5ರಷ್ಟು ಮೂಲ ವೇತನದಲ್ಲಿ ಹೆಚ್ಚಳ ಮಾಡಬೇಕೆಂದು ಹೇಳಲಾಗಿದೆ. ಸರ್ಕಾರ ಇದನ್ನು ಪರಿಗಣಿಸಿ ಜಾರಿಗೆ ತಂದರೆ ಸರ್ಕಾರಿ ನೌಕರರಿಗೆ ಖುಷಿಯಾಗಲಿದೆ.

ಇದನ್ನೂ ಓದಿ; Loksabha Election Date; ಮಧ್ಯಾಹ್ನ ಲೋಕಸಭಾ ಚುನಾವಣೆ ವೇಳಾಪಟ್ಟಿ ಪ್ರಕಟ; ಇಂದಿನಿಂದಲೇ ನೀತಿ ಸಂಹಿತೆ!

12 ಲಕ್ಷ ಸರ್ಕಾರಿ ನೌಕರರಿಗೆ ಇದರಿಂದ ಅನುಕೂಲ;

ಈ ವರದಿ ಜಾರಿ ಮಾಡುವುದರಿಂದ 12 ಲಕ್ಷ ಸರ್ಕಾರಿ ನೌಕರರಿಗೆ ಅನುಕೂಲವಾಗಲಿದೆ ಎಂದು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ಹೇಳಿದ್ದಾರೆ.  ಈ ಹಿಂದೆ ಸಿದ್ದರಾಮಯ್ಯ ನವರು ಶೇಕಡಾ 30ರಷ್ಟು ವೇತನ ಹೆಚ್ಚಳ ಮಾಡಿದ್ದರು. ಈಗ ಸರ್ಕಾರಕ್ಕೆ ಶೇ. 27.50ರಷ್ಟು ವೇತನ ಹೆಚ್ಚಳಕ್ಕೆ ಆಯೋಗ ವರದಿ ನೀಡಿದೆ. ಇದು ನಮಗೆ ಖುಷಿ ಕೊಟ್ಟಿದೆ. ಇನ್ನಷ್ಟು ಹೆಚ್ಚಳಕ್ಕೆ ನಾವು ಮನವಿ ಮಾಡುತ್ತೇವೆ. ಸರ್ಕಾರ ಆಯೋಗ ನೀಡಿರುವ ವರದಿಯನ್ನು ಜಾರಿ ಮಾಡಬೇಕೆಂದು ಹೇಳಿದರು.

ಇದನ್ನೂ ಓದಿ; Mysore Loksabha; ಮೈಸೂರಲ್ಲಿ ಯತೀಂದ್ರ-ಯದುವೀರ ಯುದ್ಧ ಫಿಕ್ಸ್‌!

ವರದಿ ಸ್ವೀಕರಿಸಿದ್ದರೂ ಜಾರಿ ತಡ;

ಇಂದು ಏಳನೇ ವೇತನ ಆಯೋಗ ವರದಿ ನೀಡಿದೆ.. ಸರ್ಕಾರಿ ಮೂಲ ವೇತನದಲ್ಲಿ ಹೆಚ್ಚಳ ಮಾಡುವಂತೆ ಶಿಫಾರಸು ಮಾಡಿದೆ.. ಇದನ್ನು ಬಹುತೇಕ ಸರ್ಕಾರ ಜಾರಿ ಮಾಡಲಿದೆ.. ಆದ್ರೆ, ಜಾರಿ ಮಾಡುವುದು ತಡವಾಗುತ್ತದೆ.. ಯಾಕಂದ್ರೆ ಇಂದು ಮಧ್ಯಾಹ್ನ 3 ಗಂಟೆಗೆ ಲೋಕಸಭಾ ಚುನಾವಣೆ ಘೋಷಣೆಯಾಗಲಿದೆ.. ಅದಕ್ಕಾಗಿ ಕೇಂದ್ರ ಚುನಾವಣಾ ಮುಖ್ಯ ಆಯುಕ್ತರು ಸುದ್ದಿಗೋಷ್ಠಿ ಕರೆದಿದ್ದಾರೆ.. ಮಧ್ಯಾಹ್ನ 3 ಗಂಟೆಗೆ ವೇಳಾಪಟ್ಟಿ ಪ್ರಕಟವಾಗಲಿದ್ದು, ಇಂದಿನಿಂದಲೇ ನೀತಿ ಸಂಹಿತೆ ಜಾರಿಯಾಗಲಿದೆ. ಚುನಾವಣಾ ನೀತಿ ಸಂಹಿತೇ ಜಾರಿಯಾದ ಮೇಲೆ ಯಾವುದೇ ಯೋಜನೆ ಘೋಷಣೆ ಮಾಡುವಂತಿಲ್ಲ.. ಹೀಗಾಗಿ ಲೋಕಸಭಾ ಚುನಾವಣೆ ಮುಗಿದು, ಫಲಿತಾಂಶ ಬಂದ ನಂತರವೇ ವೇತನ ಹೆಚ್ಚಳ ಜಾರಿ ಮಾಡುವ ಸಾಧ್ಯತೆ ಇದೆ.

ಇದನ್ನೂ ಓದಿ; ಯಡಿಯೂರಪ್ಪ ಪುತ್ರನ ವಿರುದ್ಧ ಈಶ್ವರಪ್ಪ ಸ್ಪರ್ಧೆ; ಘೋಷಣೆ

 

Share Post