Health

ಅಳು ಬಂದರೆ ಅತ್ತುಬಿಡಿ ಎನ್ನುತ್ತಿದ್ದಾರೆ ತಜ್ಞರು; ಯಾಕೆ ಗೊತ್ತಾ..?

‘ಯಾಕೋ, ಚಿಕ್ಕ ಮಗು ತರಾ ಆಳ್ತೀಯಲ್ಲೋ..?’.. ‘ಹುಡುಗರು ಎಲ್ಲಿಯಾದರೂ ಕಣ್ಣೀರು ಹಾಕ್ತಾರೇನೋ..?’.. ಇಂತಹ ಮಾತುಗಳು ನಾನು ಆಗಾಗ ಕೇಳುತ್ತಿರುತ್ತೇವೆ, ಹೇಳುತ್ತಿರುತ್ತೇವೆ.. ಇನ್ನು ಕೆಲವರು ಸಣ್ಣ ಸಣ್ಣ ವಿಚಾರಕ್ಕೂ ಅಳುತ್ತಿರುತ್ತಾರೆ.. ಆಗ ಬೈಯ್ಯುತ್ತಿರುತ್ತೇವೆ.. ಆದ್ರೆ ಈ ಸುದ್ದಿ ಓದಿದರೆ, ಅಳುವವರಿಗೆ ಅಡ್ಡ ಹೋಗೋದಿಲ್ಲ.. ಸಮಾಧಾನವನ್ನೂ ಮಾಡೋದಿಲ್ಲ.. ಅಳೋದಕ್ಕೆ ನಾವೇ ಅವಕಾಶ ಮಾಡಿಕೊಡುತ್ತೇವೆ.

ಅಳೋದು ಕೆಟ್ಟದ್ದು ಅಲ್ಲವಂತೆ;

ಅಳುವುದು ಅಷ್ಟು ಕೆಟ್ಟದ್ದು ಅಲ್ಲವಂತೆ. ಅಳುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಭಾವನೆಗಳನ್ನು ಹತ್ತಿಕ್ಕುವುದು ಒಳ್ಳೆಯದಲ್ಲ. ಅತ್ತರೆ ಅಥವಾ ಜೋರಾಗಿ ಅಳುವುದರಿಂದ ಮಾನಸಿಕ ನೆಮ್ಮದಿ ಸಿಗುತ್ತದೆ ಎನ್ನುತ್ತಾರೆ ತಜ್ಞರು. ಈಗ ಕಣ್ಣೀರು ಹಾಕುವುದರಿಂದ ಆಗುವ ಲಾಭಗಳೇನು ಎಂದು ನೋಡೋಣ.

ಅಳುವುದರಿಂದ ಮನಸ್ಸು ನಿರಾಳವಾಗುತ್ತದೆ;

ಅಳುವುದು ನಿಮ್ಮ ಮನಸ್ಸಿಗೆ ಶಾಂತತೆಯನ್ನು ನೀಡುತ್ತದೆ. ಚೆನ್ನಾಗಿ ಅತ್ತು ನಿಲ್ಲಿಸಿದ ಮೇಲೆ ಮನಸ್ಸು ತುಂಬಾನೆ ನಿರಾಳವಾಗುತ್ತದೆ. ಭಾವನೆಗಳನ್ನು ಹತೋಟಿಯಲ್ಲಿಟ್ಟುಕೊಳ್ಳದೆ ನೋವು ಬಂದಾಗ ಅಳುತ್ತಿದ್ದರೆ ಮನಸ್ಸು ನಿರಾಳವಾಗುತ್ತದೆ. ಹೀಗೆ ಅಳುವುದರಿಂದ ಮನಸ್ಸು ಹಗುರವಾಗುತ್ತದೆ. ಇದಲ್ಲದೆ, ಒತ್ತಡ ಕಡಿಮೆಯಾಗುತ್ತದೆ ಮತ್ತು ನಿದ್ರೆ ಉತ್ತಮವಾಗಿ ಬರುತ್ತದೆ. ಇದರಿಂದ ಮನಸ್ಸು ನಿರಾಳವಾಗುತ್ತದೆ ಎನ್ನುತ್ತಾರೆ ತಜ್ಞರು. ಅಳುವುದರಿಂದ ಮಾನಸಿಕ ಹೊರೆಯೂ ಕಡಿಮೆಯಾಗುತ್ತದೆ. ಅಳುವುದರಿಂದ ಶಿಶುಗಳ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ ಎಂದು ಅಧ್ಯಯನಗಳು ತೋರಿಸಿವೆ.

ಅಳುವುದರಿಂದ ಒತ್ತಡ ನಿವಾರಣೆಯಾಗುತ್ತದೆ;

ಅಳುವುದು ಉತ್ತಮ ಒತ್ತಡ ನಿವಾರಕ. ನೀವು ನೋವಿನಲ್ಲಿದ್ದಾಗ ಅಥವಾ ನೀವು ಭಾವನಾತ್ಮಕವಾಗಿ ತೊಂದರೆ ಅನುಭವಿಸಿದಾಗ ಅಳುವುದು ಪರಿಹಾರವಾಗಿದೆ. ಒತ್ತಡವನ್ನು ಕಡಿಮೆ ಮಾಡಲು ಅಳುವುದು ಉತ್ತಮ ಔಷಧ ಎನ್ನುತ್ತಾರೆ ಆರೋಗ್ಯ ತಜ್ಞರು. ಅಳದೆ ನಿಮ್ಮ ನೋವನ್ನು ಒಳಗೆ ಇಟ್ಟುಕೊಳ್ಳುವುದು ಹೆಚ್ಚಿನ ಒತ್ತಡಕ್ಕೆ ಕಾರಣವಾಗಬಹುದು. ನಿಮಗೆ ಅಳಲು ಅನಿಸಿದಾಗ ಅದನ್ನು ಹೊರಗೆ ಬಿಡಿ. ಆಗ ಮಾತ್ರ ಮನಸ್ಸು ಶಾಂತವಾಗಿರುತ್ತದೆ.

ಅಳುವುದರಿಂದ ಕಣ್ಣಿನ ಆರೋಗ್ಯ ಉತ್ತಮವಾಗುತ್ತದೆ;

ನೀವು ಅಳುತ್ತಿದ್ದರೆ.. ಕಣ್ಣಿನಿಂದ ನೀರು ಬರುತ್ತದೆ. ಕಣ್ಣಿನಲ್ಲಿರುವ ಹಾನಿಕಾರಕ ಬ್ಯಾಕ್ಟೀರಿಯಾಗಳು ಅವುಗಳಿಂದ ನಾಶವಾಗುತ್ತವೆ. ಅಳುವುದು ಕಣ್ಣುಗಳನ್ನು ಸ್ವಚ್ಛಗೊಳಿಸುತ್ತದೆ. ಅಳುವುದು ಕಣ್ಣು ಒಣಗುವುದನ್ನು ತಡೆಯುತ್ತದೆ. ಅಳುವುದರಿಂದ ಕಣ್ಣುಗಳು ಆರೋಗ್ಯವಾಗಿರುತ್ತವೆ. ಅದಕ್ಕಾಗಿಯೇ ಅಳುವುದು ಪ್ರಯೋಜನಗಳನ್ನು ಹೊಂದಿದೆ. ನಾಲ್ವರು ಏನು ಮಾತನಾಡುತ್ತಾರೆ ಎಂದು ಯೋಚಿಸಬೇಡಿ. ನೀವು ಅಳದಿದ್ದರೆ, ನಿಮ್ಮ ನೋವು ನಿಮ್ಮೊಂದಿಗೆ ಉಳಿಯುತ್ತದೆ. ಹತಾಶೆಯಲ್ಲಿ ಮುಳುಗಿರುತ್ತೀರಿ. ಆದ್ದರಿಂದ ಅಳು ಬಂದಾಗ ಅತ್ತುಬಿಡಿ ನಿರಾಳರಾಗುತ್ತೀರಿ.

Share Post