CinemaLifestyle

ಪುನೀತ್‌ ರಾಜ್‌ಕುಮಾರ್‌ ನೆನೆದು ಕಣ್ಣೀರು ಹಾಕಿದ ಸದ್ಗುರು ಜಗ್ಗಿ ವಾಸುದೇವ್‌!

ಬೆಂಗಳೂರು; ಪುನೀತ್‌ ರಾಜ್‌ ಕುಮಾರ್‌ ಅವರು ಬಿಟ್ಟುಹೋದ ನೆನಪುಗಳು ಒಂದೆರಡಲ್ಲ.. ಬಹುತೇಕರ ಬದುಕಿನಲ್ಲಿ ಒಂದೊಂದು ಮರೆಯಲಾರದ ನೆನಪನನ್ನು ಉಳಿಸಿ ಹೋಗಿದಾರೆ. ಅವರು ಮಾಡಿದ ಕಾರ್ಯಗಳು ಸದಾ ನೆನಪಿಸಿಕೊಳ್ಳುವಂತಹವು. ಹೀಗಾಗಿಯೇ ಅವರು ತೀರಿ ಹೋಗಿ ಎರಡು ವರ್ಷವಾದರೂ ಜನ ಈಗಲೂ ಪುನೀತ್‌ ರನ್ನು ನೆನಪಿಸಿಕೊಳ್ಳುತ್ತಾರೆ.. ಅವರ ಕಾರ್ಯಗಳನ್ನು ಶ್ಲಾಘಿಸುತ್ತಾರೆ. ಅದೇ ರೀತಿ ಇಶಾ ಫೌಂಡೇಶನ್‌ನ ಸದ್ಗುರು ಜಗ್ಗಿ ವಾಸುದೇವ್‌ ಅವರು ಕೂಡಾ ಪುನೀತ್‌ ರಾಜ್‌ಕುಮಾರ್‌ ಅವರನ್ನು ನೆನಪಿಸಿಕೊಂಡಿದ್ದಾರೆ.. ಅವರ ಹೆಸರು ಹೇಳಿ ಕಣ್ಣೀರು ಹಾಕಿದ್ದಾರೆ.

ಭಾವುಕರಾಗಿ ಕಣ್ಣೀರು ಹಾಕಿದ ಜಗ್ಗಿ ವಾಸುದೇವ್‌;

ಭಾವುಕರಾಗಿ ಕಣ್ಣೀರು ಹಾಕಿದ ಜಗ್ಗಿ ವಾಸುದೇವ್‌; ಇಶಾ ಫೌಂಡೇಷನ್‌ ವತಿಯಿಂದ ಕಾವೇರಿ ನದಿ ಉಳಿಸಲು ಅಭಿಯಾನ ಶುರು ಮಾಡಲಾಗಿತ್ತು. ಇದಕ್ಕೆ ಕಾವೇರಿ ಕಾಲಿಂಗ್‌ ಎಂದು ಹೆಸರಿಡಲಾಗಿತ್ತು. ಕಾವೇರಿ ನದಿ ಪಾತ್ರದಲ್ಲಿ ಕೋಟಿ ಗಿಡಗಳನ್ನು ನೆಡುವ ಈ ಮೂಲಕ ಕಾವೇರಿ ನದಿಯನ್ನು ಉಳಿಸುವ ಅಭಿಯಾನ ಇದಾಗಿತ್ತು.. ಈ ಅಭಿಯಾನಕ್ಕೆ ಪುನೀತ್‌ ರಾಜ್‌ಕುಮಾರ್‌ ಅವರು ಬೆಂಬಲಿಸಿದ್ದರು. ಅಷ್ಟೇ ಅಲ್ಲ, ಇದಕ್ಕಾಗಿ ಹಾಡೊಂದನ್ನು ಕೂಡಾ ಹಾಡಿಕೊಟ್ಟಿದ್ದರು.. ಈ ಕಾರಣಕ್ಕಾಗಿಯೇ ಸದ್ಗುರು ಜಗ್ಗಿ ವಾಸುದೇವ್‌ ಅವರು ಪುನೀತ್‌ ರಾಜ್‌ಕುಮಾರ್‌ ಅವರನ್ನು ನೆನಪಿಸಿಕೊಂಡಿದ್ದಾರೆ. ಪುನೀತ್‌ ಹಾಡಿದ್ದ ಹಾಡನ್ನು ಹಾಡುತ್ತಾ, ಕಣ್ಣೀರು ಹಾಕಿದ್ದಾರೆ.

ಕಾವೇರಿ ತಾಯೇ ನಿನ್ನ ಮಡಿಲ ಮಕ್ಕಳು;

ಕಾವೇರಿ ತಾಯೇ ನಿನ್ನ ಮಡಿಲ ಮಕ್ಕಳು; ಕಾವೇರಿ ತಾಯೇ ನಿನ್ನ ಮಡಿಲ ಮಕ್ಕಳು.. ಎದೆ ಹಾಲು ಕೊಟ್ಟ ನಿನ್ನೇ ಕಡಿದುಬಿಟ್ಟೇವು ನಾವು.. ಎಂಬ ಈ ಅದ್ಬುತ ಹಾಡನ್ನು ಸದ್ಗುರು ಜಗ್ಗಿ ವಾಸುದೇವ್‌ ಅವರು ಬರೆದಿದ್ದರು.. ಅದನ್ನು ಹಾಡಿದ್ದು, ನಮ್ಮ ಪುನೀತ್‌ ರಾಜ್‌ಕುಮಾರ್‌ ಅವರು…  ಮಹಾಶಿವರಾತ್ರಿ ಪ್ರಯುಕ್ತ ಇಶಾ ಫೌಂಡೇಷನ್‌ ವತಿಯಿಂದ ಕೊಯಮತ್ತೂರಿನಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದರಲ್ಲಿ ಖ್ಯಾತ ಸಿನಿ ತಾರೆಯರು, ಗಾಯಕರು, ರಾಜಕಾರಣಿಗಳು ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು. ಸಾವಿರಾರು ಭಕ್ತರು ಕೂಡಾ ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

ಶಂಕರ್‌ ಮಹಾದೇವನ್‌ ಜೊತೆ ಹಾಡು;

ಶಂಕರ್‌ ಮಹಾದೇವನ್‌ ಜೊತೆ ಹಾಡು; ಶಿವರಾತ್ರಿ ಕಾರ್ಯಕ್ರಮದಲ್ಲಿ ಸದ್ಗುರು ಜಗ್ಗಿ ವಾಸುದೇವ್‌ ಅವರು ಪವರ್‌ ಸ್ಟಾರ್‌ ಡಾ.ಪುನೀತ್‌ ರಾಜ್‌ಕುಮಾರ್‌ ಅವರನ್ನು ನೆನೆದರು. ಈಗ ಪುನೀತ್‌ ಅವರು ನಮ್ಮ ಮುಂದೆ ಇಲ್ಲ. ಅವರು ಹಾಡಿದ ಈ ಹಾಡನ್ನು ಹಾಡುತ್ತಿದ್ದೇನೆ ಎಂದು ಹೇಳಿ ಭಾವುಕರಾದರು. ಕಾವೇರಿ ಕಾಲಿಂಗ್‌ ಅಭಿಯಾನಕ್ಕಾಗಿ ರಚಿಸಿದ್ದ ಹಾಡನ್ನು ಪುನೀತ್‌ ರಾಜ್‌ಕುಮಾರ್‌ ಹಾಡಿದ್ದರು. ಜೊತೆಗೆ ಈ ಅಭಿಯಾನವನ್ನು ಬೆಂಬಲಿಸುವಂತೆ ಪುನೀತ್‌ ರಾಜ್‌ಕುಮಾರ್‌ ಕರೆ ನೀಡಿದ್ದರು. ಇಂದು ಅವರು ನಮ್ಮೊಂದಿಗೆ ಇಲ್ಲ ಎಂದು ಹಾಡಲು ಶುರು ಮಾಡಿದ ಸದ್ಗರು ಹಾಗೂ ಗಾಯಕ ಶಂಕರ್‌ ಮಹಾದೇವನ್‌, ಪುನೀತ್‌ ರಾಜ್‌ಕುಮಾರ್‌ ಅವರನ್ನು ನೆನೆದು ಭಾವುಕರಾಗಿದ್ದಾರೆ. ಈ ವಿಡಿಯೋ ಸಾಮಾಜಿ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.

Share Post