BengaluruCrime

ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ; ಇಬ್ಬರನ್ನು ವಶಕ್ಕೆ ಪಡೆದ ಎನ್‌ಐಎ ತಂಡ

ಬೆಂಗಳೂರು; ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ ನಡೆದು ಇಂದಿಗೆ ಒಂದು ವಾರವಾಗಿದೆ. ಇವತ್ತು ರಾಮೇಶ್ವರಂ ಕೆಫೆ ಮತ್ತೆ ರಿ ಓಪನ್‌ ಆಗಿದೆ.. ಇನ್ನೊಂದೆಡೆ ಎನ್‌ಐಎ ತಂಡ ಪ್ರಕರಣದ ತನಿಖೆ ತೀವ್ರಗೊಳಿಸಿದೆ. ದಿನದಿಂದ ದಿನಕ್ಕೆ ತನಿಖೆ ಪ್ರಗತಿಗೊಳ್ಳುತ್ತಿದೆ.. ಎನ್‌ಐಎ ಅಧಿಕಾರಿಗಳು, ಬೆಂಗಳೂರು ಹಾಗೂ ಬಳ್ಳಾರಿಯಲ್ಲಿ ಇಬ್ಬರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಇಬ್ಬರನ್ನೂ ತೀವ್ರ ವಿಚಾರಣೆಗೊಳಪಡಿಸಿದ್ದಾರೆ. ಈ ಇಬ್ಬರು ಶಂಕಿತ ಉಗ್ರನಿಗೆ ನೆರವು ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನು ಓದಿ; LPG ಸಿಲಿಂಡರ್‌ 100 ರೂಪಾಯಿ ಕಡಿತ; ರಾಜ್ಯದಲ್ಲಿ 805 ರೂಪಾಯಿಗೆ ಸಿಗಲಿದೆ ಸಿಲಿಂಡರ್‌

ಬೆಳ್ಳಂದೂರು ಬಳಿ ಶಂಕಿತನ ಉಗ್ರನ ಭೇಟಿ;

ಬೆಳ್ಳಂದೂರು ಬಳಿ ಶಂಕಿತನ ಉಗ್ರನ ಭೇಟಿ; ಮಾರ್ಚ್‌ 1ರಂದು ರಾಮೇಶ್ವರಂ ಕೆಫೆ ಬಳಿ ಸ್ಫೋಟಕವಿದ್ದ ಬ್ಯಾಗ್‌ ಇಡಲು ವ್ಯಕ್ತಿಯೊಬ್ಬ ಸಹಕರಿಸಿದ್ದ ಎಂದು ಹೇಳಲಾಗಿದೆ. ಶಂಕಿತ ಉಗ್ರ ಹಾಗೂ ಸಹಕಾರ ಕೊಟ್ಟ ವ್ಯಕ್ತಿ ಇಬ್ಬರೂ ಮೊದಲು ಬೆಳ್ಳಂದೂರು ಬಳಿ ಭೇಟಿಯಾಗಿದ್ದರು. ಅನಂತರ ಬೇರೆ ಬೇರೆಯಾಗಿ ಇಬ್ಬರೂ ರಾಮೇಶ್ವರಂ ಕೆಫೆಗೆ ಬಂದಿದ್ದರು ಎಂದು ಹೇಳಲಾಗುತ್ತಿದೆ.. ಹೀಗಾಗಿ ಬೆಂಗಳೂರಿನಲ್ಲಿ ಪತ್ತೆಯಾಗಿರುವ ವ್ಯಕ್ತಿಯನ್ನು ತೀವ್ರ ವಿಚಾರಣೆಗೊಳಪಡಿಸಿದರೆ, ಶಂಕಿತ ಉಗ್ರನ ಸುಳಿವು ಸಿಗಲಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ; ಯತೀಂದ್ರ ಸಿದ್ದರಾಮಯ್ಯಗೆ ಘೇರಾವ್‌; ಗ್ರಾಮಕ್ಕೆ ಬಿಡದೆ ಎಳೆದಾಡಿದ ಜನ!

ಬಳ್ಳಾರಿಯಲ್ಲೂ ಓರ್ವ ಯುವಕನ ವಿಚಾರಣೆ;

ಬಳ್ಳಾರಿಯಲ್ಲೂ ಓರ್ವ ಯುವಕನ ವಿಚಾರಣೆ; ಇನ್ನು ಬಳ್ಳಾರಿ ಜೈಲಿನಲ್ಲಿ ಶಂಕಿತ ಉಗ್ರನೊಬ್ಬನ್ನು ಎರಡು ದಿನಗಳ ಹಿಂದೆ ವಶಕ್ಕೆ ಪಡೆದು ಎನ್‌ಐಎ ತಂಡ ವಿಚಾರಣೆ ನಡೆಸಿದೆ. ಈ ನಡುವೆ ಬಳ್ಳಾರಿಯಲ್ಲಿ ಕೂಡಾ ಒಬ್ಬ ಯುವಕನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಅನುಮಾನದ ಮೇರೆಗೆ ಆ ಯುವಕನ್ನು ವಶಕ್ಕೆ ಪಡೆಯಲಾಗಿದ್ದು, ಒಂದು ಗಂಟೆ ಕಾಲ ತೀವ್ರ ವಿಚಾರಣೆ ನಡೆಸಲಾಗಿದೆ. ಅನಂತರ ಆತನನ್ನು ಬಿಟ್ಟು ಕಳುಹಿಸಲಾಗಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ; ಲೋಕಸಭಾ ರೇಸ್‌ನಿಂದ ಹಿಂದೆ ಸರಿದ್ರಾ ಯತೀಂದ್ರ ಸಿದ್ದರಾಮಯ್ಯ?; ಕಾರಣ ಏನು ಗೊತ್ತಾ..?

 

Share Post