Politics

ಲೋಕಸಭಾ ರೇಸ್‌ನಿಂದ ಹಿಂದೆ ಸರಿದ್ರಾ ಯತೀಂದ್ರ ಸಿದ್ದರಾಮಯ್ಯ?; ಕಾರಣ ಏನು ಗೊತ್ತಾ..?

ಬೆಂಗಳೂರು; ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದು, ಸಿದ್ದರಾಮಯ್ಯ ಸಿಎಂ ಆದ ಮೇಲೆ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರಕ್ಕೆ ಯತೀಂದ್ರ ಸಿದ್ದರಾಮಯ್ಯ ಅವರೇ ಕಾಂಗ್ರೆಸ್‌ ಅಭ್ಯರ್ಥಿಯಾಗ್ತಾರೆ ಎಂದು ಹೇಳಲಾಗುತ್ತಿತ್ತು.. ಮೈಸೂರು ಭಾಗದ ಕಾಂಗ್ರೆಸ್‌ ಮುಖಂಡರು ಕೂಡಾ ಯತೀಂದ್ರ ಸಿದ್ದರಾಮಯ್ಯ ಅವರೇ ಅಭ್ಯರ್ಥಿಯಾಗಲಿ ಎಂದು ಹೇಳುತ್ತಾ ಬಂದಿದ್ದರು.. ಯತೀಂದ್ರ ಸಿದ್ದರಾಮಯ್ಯ ಅವರು ಕೂಡಾ ಅದೇ ಉತ್ಸಾಹದಲ್ಲಿ ಕ್ಷೇತ್ರದಲ್ಲಿ ಸಂಚಾರ ಮಾಡುತ್ತಿದ್ದರು.. ಆದ್ರೆ ಈಗ ಲೋಕಸಭಾ ಚುನಾವಣೆ ಹತ್ತಿರಕ್ಕೆ ಬಂದಿದೆ.. ಇನ್ನೇನು ನಾಲ್ಕೈದು ದಿನಗಳಲ್ಲಿ ಚುನಾವಣಾ ದಿನಾಂಕವೂ ಘೋಷಣೆಯಾಗಲಿದೆ.. ಹೀಗಿರುವಾಗ ಯತೀಂದ್ರ ಹೆಸರು ರೇಸ್‌ ಇದ್ದಂತೆ ಕಾಣಿಸುತ್ತಲೇ ಇಲ್ಲ.. ಹಾಗಾದ್ರೆ, ಯತೀಂದ್ರ ಸಿದ್ದರಾಮಯ್ಯ ಅವರು ರೇಸ್‌ನಿಂದ ಹಿಂದೆ ಸರಿದರಾ ಅನ್ನೋ ಪ್ರಶ್ನೆ ಮೂಡೋಕೆ ಶುರು ಮಾಡಿದೆ..

ಇದನ್ನೂ ಓದಿ; ಯತೀಂದ್ರ ಸಿದ್ದರಾಮಯ್ಯಗೆ ಘೇರಾವ್‌; ಗ್ರಾಮಕ್ಕೆ ಬಿಡದೆ ಎಳೆದಾಡಿದ ಜನ!

ಸಂಭಾವ್ಯರ ಹೆಸರುಗಳಲ್ಲೂ ಯತೀಂದ್ರ ಹೆಸರಿಲ್ಲ!;

ಸಂಭಾವ್ಯರ ಹೆಸರುಗಳಲ್ಲೂ ಯತೀಂದ್ರ ಹೆಸರಿಲ್ಲ!; ವಿಧಾನಸಭಾ ಚುನಾವಣೆಯಲ್ಲಿ ಯತೀಂದ್ರ ಸಿದ್ದರಾಮಯ್ಯ ಅವರು ತಮ್ಮ ವರುಣಾ ಕ್ಷೇತ್ರವನ್ನು ತಮ್ಮ ತಂದೆ ಸಿದ್ದರಾಮಯ್ಯ ಅವರಿಗೆ ಬಿಟ್ಟುಕೊಟ್ಟಿದ್ದರು… ಹೀಗಾಗಿ ಅವರನ್ನು ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿಸಬೇಕೆಂಬ ಆಗ್ರಹಗಳು ಕೇಳಿಬಂದಿದ್ದವು.. ಯತೀಂದ್ರ ಅವರು ಕೂಡಾ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ರೀತಿಯಲ್ಲಿ ಓಡಾಟ ನಡೆಸಿದ್ದರು.. ಇನ್ನು ಸ್ಥಳೀಯ ಮುಖಂಡರಂತೂ ಯತೀಂದ್ರ ಸಿದ್ದರಾಮಯ್ಯ ಅವರಿಗೆ ಟಿಕೆಟ್‌ ಕೊಡೋದಾದರೆ ನಮ್ಮ ಬೆಂಬಲ ಇರುತ್ತೆ ಎಂದು ಹೇಳುತ್ತಾ ಬಂದಿದ್ದರು… ಎಲ್ಲರೂ ಕೂಡಾ ಯತೀಂದ್ರ ಪರವಾಗಿಯೇ ಬ್ಯಾಟಿಂಗ್‌ ಮಾಡುತ್ತಿದ್ದರು… ಇತ್ತ ಹಾಲಿ ಸಂಸದ ಪ್ರತಾಪ ಸಿಂಹ ಕೂಡಾ ಯತೀಂದ್ರ ಸಿದ್ದರಾಮಯ್ಯ ಅವರು ಸ್ಪರ್ಧೆ ಮಾಡಿದರೆ ನನಗೆ ಇನ್ನೂ ಒಳ್ಳೆಯದು ಎಂದು ಹೇಳಿ ಅಖಾಡಕ್ಕೆ ಆಹ್ವಾನ ನೀಡಿದ್ದರು.. ಆದ್ರೆ ಇತ್ತೀಚಿನ ಬೆಳವಣಿಗೆಗಳಲ್ಲಿ ಸಂಭಾವ್ಯರ ಪಟ್ಟಿಯಲ್ಲೂ ಯತೀಂದ್ರ ಅವರ ಹೆಸರು ಕಾಣಿಸಿದಂತೆ ಇಲ್ಲ.

ಇದನ್ನೂ ಓದಿ;ಬಿಜೆಪಿ ಪರ ರೀಲ್ಸ್‌ ಮಾಡಿ; ಮೋದಿ ಭೇಟಿಗೆ ಅವಕಾಶ ಪಡೆಯಿರಿ – ಬಿಜೆಪಿಯ ಹೊಸ ಕ್ಯಾಂಪೇನ್‌

ಯತೀಂದ್ರ ಸ್ಪರ್ಧೆಯ ಸವಾಲುಗಳೇನು..?;

ಯತೀಂದ್ರ ಸ್ಪರ್ಧೆಯ ಸವಾಲುಗಳೇನು..?; ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಪೂರಕ ವಾತಾವರಣವೇನೂ ಇಲ್ಲ.. ಈ ಬಾರಿ ಜೆಡಿಎಸ್‌ ಹಾಗೂ ಬಿಜೆಪಿ ಒಂದಾಗಿರುವುದರಿಂದ ಮೈತ್ರಿ ಅಭ್ಯರ್ಥಿಗೆ ಮತ್ತಷ್ಟು ಬಲ ಬರುತ್ತದೆ. ಇದರ ಜೊತೆಗೆ ಹಾಲಿ ಸಂಸದ ಪ್ರತಾಪ ಸಿಂಹ ಹಲವಾರು ಅಭಿವೃದ್ಧಿ ಕೆಲಸಗಳನ್ನು ಕ್ಷೇತ್ರದಲ್ಲಿ ಮಾಡಿದ್ದಾರೆ. ಇದರ ಜೊತೆಗೆ ಮೋದಿ ಅಲೆ ಕೂಡಾ ಇಲ್ಲಿ ಕೆಲಸ ಮಾಡಲಿದೆ. ಮತದಾರರು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮತ ಹಾಕೋದು ಕಡಿಮೆ. ಇನ್ನು ಯತೀಂದ್ರ ಸಿದ್ದರಾಮಯ್ಯ ಅವರಿಗೆ ವರ್ಚಸ್ಸು ಕಡಿಮೆ. ಅವರ ತಂದೆಯ ಹೆಸರಿನಲ್ಲಿಯೇ ಅವರು ಮತಯಾಚನೆ ಮಾಡಬೇಕು.. ಹೀಗಾಗಿ, ಈ ಕ್ಷೇತ್ರದಲ್ಲಿ ಯತೀಂದ್ರ ಗೆಲ್ಲೋದಕ್ಕೆ ಸಾಹಸವನ್ನೇ ಮಾಡಬೇಕಾಗುತ್ತದೆ.

ಇದನ್ನೂ ಓದಿ; Health Benefits; ದಿನಾ ಹೀಗೆ ಮಾಡಿ, ಯಾವ ರೋಗವೂ ನಿಮ್ಮ ಹತ್ತಿರ ಬರೋಲ್ಲ..!

ಸೋತರೆ ಸಿಎಂ ಸಿದ್ದರಾಮಯ್ಯಗೆ ಮುಖಭಂಗ;

ಸೋತರೆ ಸಿಎಂ ಸಿದ್ದರಾಮಯ್ಯಗೆ ಮುಖಭಂಗ; ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಮೊದಲೇ ಹೇಳಿದಂತೆ ಕಾಂಗ್ರೆಸ್‌ ಗೆಲುವು ಸುಲಭವಲ್ಲ.. ಅದರಲ್ಲೂ ಯತೀಂದ್ರ ಸಿದ್ದರಾಮಯ್ಯಗೆ ಜಯಶಾಲಿಯಾಗಿ ಬರೋದು ತುಂಬಾ ಕಷ್ಟವೇ ಆಗಬಹುದು ಎಂಬ ಲೆಕ್ಕಾಚಾರಗಳಿವೆ.. ಇನ್ನು ಮೈಸೂರು-ಕೊಡಗು ಕ್ಷೇತ್ರ ಸಿಎಂ ಸಿದ್ದರಾಮಯ್ಯ ಅವರ ತವರು ಕ್ಷೇತ್ರ.. ಇಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರುವುದು ಸಿದ್ದರಾಮಯ್ಯ ಅವರಿಗೆ ಪ್ರತಿಷ್ಠೆಯ ಪ್ರಶ್ನೆ. ಅದರಲ್ಲೂ ಸ್ವಂತ ಮಗನೇ ಅಭ್ಯರ್ಥಿಯಾದರೆ ಸಿಎಂ ಸಿದ್ದರಾಮಯ್ಯ ಮತ್ತಷ್ಟು ಶ್ರಮ ಹಾಕಬೇಕಾಗುತ್ತದೆ.. ಸೋತರೆ ಸಿದ್ದರಾಮಯ್ಯ ಅವರು ಎರಡು ರೀತಿಯಲ್ಲಿ ಮುಖಭಂಗ ಅನುಭವಿಸಬೇಕಾಗುತ್ತದೆ. ಹೀಗಾಗಿ ಯತೀಂದ್ರಗೆ ಬದಲಾಗಿ ಬೇರೆಯವರಿಗೆ ಟಿಕೆಟ್‌ ನೀಡುವ ಸಂಬಂಧ ಕಾಂಗ್ರೆಸ್‌ ನಾಯಕರು ಯೋಚನೆ ಮಾಡಿರಬಹುದು.. ಹೀಗಾಗಿಯೇ ಯತೀಂದ್ರ ಹೆಸರು ಈ ಚಾಲ್ತಿಯಲ್ಲಿ ಇಲ್ಲ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ; LPG ಸಿಲಿಂಡರ್‌ 100 ರೂಪಾಯಿ ಕಡಿತ; ರಾಜ್ಯದಲ್ಲಿ 805 ರೂಪಾಯಿಗೆ ಸಿಗಲಿದೆ ಸಿಲಿಂಡರ್‌

Share Post