Rameshwaram Cafe Case; ಆರೋಪಿಯ ರೇಖಾ ಚಿತ್ರ ರಿಲೀಸ್; ಭಟ್ಕಳಕ್ಕೆ ಹೋದನಾ ಶಂಕಿತ ಉಗ್ರ..?
ಬೆಂಗಳೂರು; ಬುಧವಾರವಷ್ಟೇ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದ ಆರೋಪಿಯ ಫೊಟೋ ರಿಲೀಸ್ ಮಾಡಲಾಗಿತ್ತು. ಇದೀಗ ಎನ್ಐಎ ಅಧಿಕಾರಿಗಳು, ಶಂಕಿತ ಉಗ್ರನ ರೇಖಾಚಿತ್ರ ಬಿಡುಗಡೆ ಮಾಡಿದ್ದಾರೆ. ಸಿಸಿಟಿವಿಯಲ್ಲಿ ಸಿಕ್ಕ ದೃಶ್ಯ ಆಧರಿಸಿ ರೇಖಾಚಿತ್ರ ರಿಲೀಸ್ ಮಾಡಲಾಗಿದ್ದು, ಆರೋಪಿಗಾಗಿ ಹುಡುಕಾಟ ತೀವ್ರಗೊಳಿಸಲಾಗಿದೆ. ಶಂಕಿತ ಉಗ್ರ ಭಟ್ಕಳಕ್ಕೆ ಹೋಗಿರುವ ಸಾಧ್ಯತೆ ಇದ್ದು, ತನಿಖೆ ಮುಂದುವರೆಸಲಾಗಿದೆ.
ಆರ್ಟಿಸ್ಟ್ ಹರ್ಷನಿಂದ ಇಮ್ಯಾಜಿನರಿ ಸ್ಕೆಚ್;
ಆರ್ಟಿಸ್ಟ್ ಹರ್ಷನಿಂದ ಇಮ್ಯಾಜಿನರಿ ಸ್ಕೆಚ್; ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯದಲ್ಲಿ ಆರೋಪಿಯ ಮುಖಚಹರೆ ಸ್ಪಷ್ಟವಾಗಿ ಕಾಣಿಸಿರಲಿಲ್ಲ. ಆದರೂ ಕೂಡಾ ನಿನ್ನೆ ಫೋಟೋ ರಿಲೀಸ್ ಮಾಡಲಾಗಿತ್ತು. ಸುಳಿವು ಕೊಟ್ಟವರಿಗೆ 10 ಲಕ್ಷ ರೂಪಾಯಿ ಬಹುಮಾನ ಘೋಷಣೆ ಮಾಡಲಾಗಿತ್ತು. ಈ ನಡುವೆ ಹಲವು ಮಂದಿ ಈ ರೀತಿಯ ಅನುಮಾನಾಸ್ಪದ ವ್ಯಕ್ತಿಯನ್ನು ನೋಡಿರುವುದಾಗಿ ಕರೆ ಮಾಡಿದ್ದಾರೆ. ಈ ನಡುವೆ ಜನಕ್ಕೆ ಇನ್ನಷ್ಟು ಸ್ಪಷ್ಟವಾಗಲಿ ಅನ್ನೋ ಕಾರಣಕ್ಕೆ ಇಮ್ಯಾಜಿನರಿ ಸ್ಕೆಚ್ ಮಾಡಿಸಲಾಗಿದೆ. ಆರ್ಟಿಸ್ಟ್ ಹರ್ಷ ಎಂಬುವವರು ಈ ಇಮ್ಯಾಜಿನರಿ ಸ್ಕೆಚ್ ಮಾಡಿದ್ದಾರೆ. ಇದನ್ನು ಇಂದು ಬಿಡುಗಡೆ ಮಾಡಲಾಗಿದೆ.
ಮಾಸ್ಕ್ ಹಾಕಿದ ಹಾಗೂ ಮಾಸ್ಕ್ ಇಲ್ಲದ ರೀತಿಯಲ್ಲಿ ಸ್ಕೆಚ್;
ಮಾಸ್ಕ್ ಹಾಕಿದ ಹಾಗೂ ಮಾಸ್ಕ್ ಇಲ್ಲದ ರೀತಿಯಲ್ಲಿ ಸ್ಕೆಚ್; ಆರ್ಟಿಸ್ಟ್ ಹರ್ಷ ಅವರು ಎರಡು ರೀತಿಯಲ್ಲಿ ಸ್ಕೆಚ್ ಮಾಡಿದ್ದಾರೆ. ಮಾಸ್ಕ್ ಇರುವ ರೀತಿಯಲ್ಲಿ ಹಾಗೂ ಮಾಸ್ಕ್ ಇಲ್ಲದ ರೀತಿಯಲ್ಲಿ ಸ್ಕೆಚ್ ಮಾಡಲಾಗಿದೆ. ಟೋಪಿ ಹಾಗೂ ಕನ್ನಡಕ ಧರಿಸಿದ ರೀತಿಯಲ್ಲಿ ಬಿಡಿಸಿದ ರೇಖಾಚಿತ್ರ ಈಗ ರಿಲೀಸ್ ಮಾಡಲಾಗಿದೆ. ಬಾಂಬರ್ ಈ ರೀತಿ ಇರಬಹುದು. ಇಂತಹ ಮುಖ ಚಹರೆ ಇರುವ ವ್ಯಕ್ತಿ ಕಂಡರೆ ಕೂಡಲೇ ಮಾಹಿತಿ ನೀಡುವಂತೆ ತಿಳಿಸಲಾಗಿದೆ.
ಶಂಕಿತ ಉಗ್ರ ಭಟ್ಕಳಕ್ಕೆ ಹೋಗಿರುವ ಶಂಕೆ;
ಶಂಕಿತ ಉಗ್ರ ಭಟ್ಕಳಕ್ಕೆ ಹೋಗಿರುವ ಶಂಕೆ; ಬೆಂಗಳೂರಿನ ಹೊರವಲಯದಲ್ಲಿ ಬ್ಲಾಸ್ಟ್ ಮಾಡಿದ್ದ ಶಂಕಿತ ಉಗ್ರ ಹತ್ತಿರದ ತಮಿಳುನಾಡಿಗೆ ಹೋಗಿ ತಲೆಮರೆಸಿಕೊಂಡಿರಬಹುದು ಎಂದು ಎಲ್ಲರೂ ಶಂಕಿಸಿದ್ದರು. ಆದ್ರೆ, ಪೊಲೀಸರು ಕೂಡಾ ಆ ರೀತಿಯಲ್ಲೇ ಯೋಚಿಸಿದ್ದರು. ಆದ್ರೆ, ಎನ್ಐಎ ತನಿಖೆ ಕೈಗೆತ್ತಿಕೊಂಡ ಮೇಲೆ ಬೆಂಗಳೂರು ನಗರದ ಹೃದಯ ಭಾಗದ ಸಿಸಿಟಿವಿಗಳನ್ನು ಪರಿಶೀಲನೆ ನಡೆಸಲಾಗಿದೆ. ಈ ವೇಳೆ ಆರೋಪಿ, ಬೆಂಗಳೂರು ನಗರದ ಹೃದಯ ಭಾಗಕ್ಕೆ ಬಂದು ತುಮಕೂರಿನ ಮೂಲಕ ಭಟ್ಳಕ್ಕೆ ಹೋಗಿರುವ ಬಗ್ಗೆ ಮಾಹಿತಿ ಸಿಕ್ಕಿದೆ.
ಸುಜಾತ ಸರ್ಕಲ್ನಲ್ಲಿ ಬಸ್ ಹತ್ತಿದ್ದ ಶಂಕಿತ ಉಗ್ರ;
ಸುಜಾತ ಸರ್ಕಲ್ನಲ್ಲಿ ಬಸ್ ಹತ್ತಿದ್ದ ಶಂಕಿತ ಉಗ್ರ; ಶಂಕಿತ ಉಗ್ರ ಬೆಂಗಳೂರಿನ ಸುಜಾತ ಸರ್ಕಲ್ನಲ್ಲಿ ಬಸ್ ಹತ್ತಿರುವ ಬಗ್ಗೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದರ ಆಧಾರದ ಮೇಲೆ ಎನ್ಐಎ ಅಧಿಕಾರಿಗಳು ತುಮಕೂರಿಗೆ ಹೋಗಿ ಪರಿಶೀಲನೆ ಮಾಡಿದ್ದಾರೆ. ಆರೋಪಿ ತುಮಕೂರಿನಲ್ಲಿ ಬಸ್ ಇಳಿದು, ಬಳ್ಳಾರಿಗೆ ಹೋಗಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಅಲ್ಲಿಂದ ಆತ ಮಂತ್ರಾಲಯ-ಗೋಕರ್ಣ ಬಸ್ ಹತ್ತಿ ಭಟ್ಕಳಕ್ಕೆ ಹೋಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.
ತುಮಕೂರು-ಬಳ್ಳಾರಿಗಳಲ್ಲಿ ಎನ್ಐಎ ತಂಡ;
ತುಮಕೂರು-ಬಳ್ಳಾರಿಗಳಲ್ಲಿ ಎನ್ಐಎ ತಂಡ; ಯಾವಾಗ ಶಂಕಿತ ಉಗ್ರ ಬಸ್ನಲ್ಲಿ ಪ್ರಯಾಣ ಮಾಡಿರುವುದು ಖಚಿತವಾಯಿತೋ ಎನ್ಐಎ ಅಧಿಕಾರಿಗಳು ಎರಡು ಕಾರುಗಳಲ್ಲಿ ತುಮಕೂರು ಹಾಗೂ ಬಳ್ಳಾರಿಗೆ ಹೋಗಿ ಪರಿಶೀಲನೆ ಮಾಡಿದ್ದಾರೆ. ಅಲ್ಲಿನ ಬಸ್ ನಿಲ್ದಾಣಗಳಲ್ಲಿ ಅಳವಡಿಸಿದ್ದ ಸಿಸಿಟಿವಿ ದೃಶ್ಯಾವಳಿಯನ್ನು ಸಂಗ್ರಹಿಸಿದ್ದಾರೆ. ಆರೋಪಿ ಬಳ್ಳಾರಿಯಿಂದ ಬೇರೆ ಬಸ್ನಲ್ಲಿ ಪ್ರಯಾಣ ಮಾಡಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಎನ್ಐಎ ಅಧಿಕಾರಿಗಳು ಸ್ಥಳೀಯ ಪೊಲೀಸರ ಸಹಕಾರದೊಂದಿಗೆ ಆರೋಪಿಗಾಗಿ ಬಲೆ ಬೀಸಿದ್ದಾರೆ.