BengaluruCrime

ರಾಮೇಶ್ವರಂ ಕೆಫೆ; ಬಸ್‌ ನಿಲ್ದಾಣದಲ್ಲೇ ಬಂಬ್‌ ಟೈಮರ್‌ ಫಿಕ್ಸ್‌!

ಬೆಂಗಳೂರು; ಶುಕ್ರವಾರ ಬೆಂಗಳೂರಿನ ಕುಂದಲಹಳ್ಳಿಯ ರಾಮೇಶ್ವರಂ ಕೆಫೆನಲ್ಲಿ ನಡೆದ ಸ್ಫೋಟ ಪ್ರಕರಣದ ಬಗ್ಗೆ ಮಹತ್ವದ ಸುಳಿವು ಸಿಕ್ಕಿದೆ. ಆರೋಪಿ ಬಸ್‌ ನಿಲ್ದಾಣದಲ್ಲಿಯೇ ಬಾಂಬ್‌ನ ಟೈಮರ್‌ ಫಿಕ್ಸ್‌ ಮಾಡಿದ್ದಾನೆ. ಇದರ ಸಿಟಿಟಿವಿ ವಿಡಿಯೋ ಲಭ್ಯವಾಗಿದ್ದು, ಪೊಲೀಸರು ತನಿಖೆಯನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ.

ಬಸ್‌ ನಿಲ್ದಾಣದಲ್ಲಿಯೇ ಟೈಮರ್‌ ಸೆಟ್‌ ಮಾಡಿದ್ದ ಶಂಕಿತ;

ಬಸ್‌ ನಿಲ್ದಾಣದಲ್ಲಿಯೇ ಟೈಮರ್‌ ಸೆಟ್‌ ಮಾಡಿದ್ದ ಶಂಕಿತ; ಶಂಕಿತ ಬಾಂಬರ್ ಮಾರ್ಚ್ 1 ರಂದು ಬೆಳಗ್ಗೆ 10.40ಕ್ಕೆ ರಾಮೇಶ್ವರಂ ಕೆಫೆ ಬಳಿ ಬಸ್‌ ನಿಲ್ದಣಕ್ಕೆ ಬಂದು ಇಳಿಯುತ್ತಾನೆ. ವೋಲ್ವೋ ಬಸ್‌ನಿಂದ ಬ್ಯಾಗ್‌ನೊಂದಿಗೆ ಇಳಿಯುವ ಆತ, ಬಸ್‌ ನಿಲ್ದಾಣದ ಬಳಿಯೇ ಬಾಂಬ್‌ಗೆ ಟೈಮರ್‌ ಸೆಟ್‌ ಮಾಡಿದ್ದಾನೆ. ಅಂದು ಬೆಳಗ್ಗೆ 10.43ರ ಸುಮಾರಿಗೆ ಟೈಮರ್‌ ಸೆಟ್‌ ಮಾಡಲಾಗಿದೆ. ಬ್ಯಾಗ್‌ ಜಿಪ್‌ ತೆಗೆದು ಟೈಮರ್‌ ಸೆಟ್‌ ಮಾಡುತ್ತಿರುವ ವಿಡಿಯೋ ಹತ್ತಿರದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ವಿಡಿಯೋ ತನಿಖೆಗೆ ಸಹಾಯ ಮಾಡಲಿದೆ ಎಂದು ಹೇಳಲಾಗುತ್ತಿದೆ.

ಬೇರೆ ಮಾರ್ಗವಾಗಿ ತೆರಳಿರುವ ಶಂಕಿತ ವ್ಯಕ್ತಿ;

ಬೇರೆ ಮಾರ್ಗವಾಗಿ ತೆರಳಿರುವ ಶಂಕಿತ ವ್ಯಕ್ತಿ; ಬಾಂಬ್‌ ಸ್ಫೋಟದ ದಿನ ಶಂಕಿತ ವ್ಯಕ್ತಿ ಮೊದಲು ಬಂದಿದ್ದು ಒಂದು ರೂಟ್‌ ನಲ್ಲಾದರೆ, ನಂತರ ಹೋಗಿದ್ದು ಬೇರೆ ರೂಟ್‌ ನಲ್ಲಿ. ಆತ ಹೋದ ಮಾರ್ಗದಲ್ಲಿ ಸಿಸಿಟಿವಿಗಳಿಲ್ಲ. ಹೀಗಾಗಿ ರಾಮೇಶ್ವರಂ ಕೆಫೆ ಬಳಿ ಮಾತ್ರ ಶಂಕಿತನ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಅನಂತರ ಆತ ಎಲ್ಲಿ ಹೋದ ಅನ್ನೋದು ಗೊತ್ತಾಗಿಲ್ಲ. ಮೊದಲೇ ಇದೆಲ್ಲಾ ಪ್ಲ್ಯಾನ್‌ ಮಾಡಿ ದಾಳಿ ಮಾಡಿರಬಹುದು ಎಂದು ಹೇಳಲಾಗುತ್ತಿದೆ.

ಬ್ಯಾಟರಿ, ಟೈಮರ್, ಕೆಮಿಕಲ್ಸ್ ಪತ್ತೆ;

ಬ್ಯಾಟರಿ, ಟೈಮರ್, ಕೆಮಿಕಲ್ಸ್ ಪತ್ತೆ; ಸ್ಫೋಟಗೊಂಡ ಸ್ಥಳದಲ್ಲಿ ಬ್ಯಾಟರಿ ಹಾಗೂ ಟೈಮರ್‌ ಸಿಕ್ಕಿದೆ. ಪೊಟ್ಯಾಷಿಯಂ ನೈಟ್ರೇಟ್ ಮತ್ತು ಹೈಡ್ರೋಜನ್ ಪರಾಕ್ಸೈಡ್ ಬಳಸಿ ಬಾಂಬ್‌ ತಯಾರು ಮಾಡಲಾಗಿದೆ ಎಂದು ತಿಳಿದುಬಂದಿದೆ.

ಆರೋಪಿ ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿರುವ ಸಾಧ್ಯತೆ;

ಆರೋಪಿ ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿರುವ ಸಾಧ್ಯತೆ; ಬಾಂಬ್‌ ಇಟ್ಟು ಹೋದ ಆರೋಪಿಯ ಸುಳಿವು ಇನ್ನೂ ಸಿಕ್ಕಿಲ್ಲ. ಪಕ್ಕಾ ಪ್ಲ್ಯಾನ್‌ ಮಾಡಿಕೊಂಡೇ ಬಂದಿದ್ದ ಆರೋಪಿ, ಗುರುತು ಸಿಗದಂತೆ ಟೋಪಿ ಹಾಗೂ ಮಾಸ್ಕ್‌ ಧರಿಸಿದ್ದ. ಇನ್ನು ಸ್ಫೋಟಕ್ಕೆ ಬೆಂಗಳೂರು ಹೊರವಲಯದ ಹೋಟೆಲ್‌ ಆಯ್ಕೆ ಮಾಡಿಕೊಂಡಿದ್ದು, ಬಾಂಬ್‌ ಇಟ್ಟ ನಂತರ ತಮಿಳುನಾಡಿಗೆ ಪರಾರಿಯಾಗಿರಬಹುದು ಎಂದು ಶಂಕಿಸಲಾಗಿದೆ. ಹೀಗಾಗಿ ಆರೋಪಿಯ ಸುಳಿವು ಇನ್ನೂ ಸಿಕ್ಕಿಲ್ಲ. ಹೀಗಾಗಿ ಪೊಲೀಸರು ಆರೋಪಿಯ ರೇಖಾಚಿತ್ರ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.

ಎನ್‌ಐಎಗೆ ವಹಿಸಲು ಸಿದ್ದ ಎಂದ ಸಿದ್ದರಾಮಯ್ಯ;

ಎನ್‌ಐಎಗೆ ವಹಿಸಲು ಸಿದ್ದ ಎಂದ ಸಿದ್ದರಾಮಯ್ಯ; ಸದ್ಯ ಸಿಸಿಬಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆದ್ರೆ ಇನ್ನೂ ಆರೋಪಿ ಸುಳಿವು ಸಿಕ್ಕಿಲ್ಲ. ಈ ನಡುವೆ ಸಿಎಂ ಸಿದ್ದರಾಮಯ್ಯ ಅವರು ಅಗತ್ಯಬಿದ್ದರೆ ಪ್ರಕರಣವನ್ನು ಎನ್‌ಐಎಗೆ ವಹಿಸಲಾಗುವುದು ಎಂದು ಹೇಳಿದ್ದಾರೆ.

Share Post