ರಾಜ್ಯದ ಆರು ಪೊಲೀಸ್ ಅಧಿಕಾರಿಗಳಿಗೆ ಕೇಂದ್ರ ಗೃಹ ಸಚಿವರ ಪದಕ
ಬೆಂಗಳೂರು; ಕೇಂದ್ರ ಸರ್ಕಾರ 2022ನೇ ಸಾಲಿನ ಕೇಂದ್ರ ಗೃಹ ಸಚಿವರ ಪದಕ ಪಟ್ಟಿಯನ್ನು ಘೋಷಣೆ ಮಾಡಿದೆ. ಒಟ್ಟು 151 ಮಂದಿ ಪೊಲೀಸ್ ಅಧಿಕಾರಿಗಳಿಗೆ ಈ ಪದಕ ಪ್ರದಾನ ಮಾಡಲಾಗುತ್ತಿದೆ. ಇದರಲ್ಲಿ ರಾಜ್ಯದ ಆರು ಮಂದಿ ಪೊಲೀಸ್ ಅಧಿಕಾರಿಗಳು ಇರೋದು ಖುಷಿಯ ವಿಚಾರ.
ಲಕ್ಷ್ಮೀ ಗಣೇಶ್ ಕೆ, ಅಡಿ (ಎಸ್ಪಿ), ವೆಂಕಟಪ್ಪ ನಾಯಕ (ಡಿವೈಎಸ್ಪಿ), ಮೈಸೂರು ರಾಜೇಂದ್ರ ಗೌತಮ್ (ಡಿವೈಎಸ್ಪಿ), ಶಂಕರ ಕಾಳಪ್ಪ ಮಾರಿಹಾಳ್ (ಡಿವೈಎಸ್ಪಿ), ಶಂಕರಗೌಡ ವೀರನಗೌಡ ಪಾಟೀಲ್ (ಡಿವೈಎಸ್ಪಿ) ಗುರುಬಸವರಾಜ ಹೆಚ್ ಹಿರೇಗೌಡರ್ (ಸರ್ಕಲ್ ಪೊಲೀಸ್) ಅವರು ಗೃಹ ಸಚಿವರ ಪದಕ್ಕೆ ಭಾಜನರಾಗಿದ್ದಾರೆ. ಇವರಷ್ಟೇ ಅಲ್ಲದೇ, ದೇಶದ ವಿವಿಧ ರಾಜ್ಯಗಳ 151 ಪೊಲೀಸ್ ಅಧಿಕಾರಿಗಳಿಗೂ ಗೃಹ ಸಚಿವರ ಪದಕ ಸಿಕ್ಕಿದೆ.