CrimePolitics

ಮಂಗಳೂರು ಸ್ಫೋಟಕ್ಕೂ ನಿನ್ನೆಯ ಸ್ಫೋಟಕ್ಕೂ ಸಾಮ್ಯತೆ; ಡಿಕೆಶಿ

ಬೆಂಗಳೂರು; ನಿನ್ನೆ ನಡೆದ ರಾಮೇಶ್ವರಂ ಕೆಫೆಯಲ್ಲಿನ ಸ್ಫೋಟದ ಪ್ರಕಣದ ತನಿಖೆ ಚುರುಕುಗೊಂಡಿದೆ. ಸಿಸಿಟಿವಿ ದೃಶ್ಯಾವಳಿ ಆದರಿಸಿ ಆರೋಪಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಅನುಮಾನದ ಮೇಲೆ ನಾಲ್ವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗಿದ್ದು, ಇದರಲ್ಲಿ ಒಬ್ಬ ವ್ಯಕ್ತಿಯನ್ನು ಬಿಟ್ಟು ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ. ಉಳಿದ ಮೂವರ ವಿಚಾರಣೆ ಮುಂದುವರೆದಿದೆ ಎಂದು ಹೇಳಲಾಗುತ್ತಿದೆ. ಇನ್ನು ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದೆ. ಇವತ್ತೂ ಕೂಡಾ ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ; ಬೇಸಿಗೆಯಲ್ಲಿ ಇರುವೆಗಳ ಸಮಸ್ಯೆ; ನಿವಾರಣೆ ತುಂಬಾ ಸುಲಭ!

ಮಂಗಳೂರು ಸ್ಫೋಟಕ್ಕೂ ನಿನ್ನೆಯ ಸ್ಫೋಟಕ್ಕೂ ಸಾಮ್ಯತೆ;

ಮಂಗಳೂರು ಸ್ಫೋಟಕ್ಕೂ ನಿನ್ನೆಯ ಸ್ಫೋಟಕ್ಕೂ ಸಾಮ್ಯತೆ; ಎರಡು ವರ್ಷದ ಹಿಂದೆ ಮಂಗಳೂರಿನಲ್ಲಿ ಕುಕ್ಕರ್‌ ಬಾಂಬ್‌ ಸ್ಫೋಟವಾಗಿತ್ತು. ವ್ಯಕ್ತಿಯೊಬ್ಬ ಕುಕ್ಕರ್‌ನಲ್ಲಿ ಬಾಂಬಿಟ್ಟು ಅದನ್ನು ಆಟೋದಲ್ಲಿ ಸಾಗಿಸುತ್ತಿದ್ದಾಗ ಆಟೋದಲ್ಲೇ ಬಾಂಬ್‌ ಸ್ಫೋಟಗೊಂಡಿತ್ತು. ಅದರಲ್ಲಿ ಬಳಸಿದ ವಸ್ತುಗಳಿಗೂ, ನಿನ್ನೆ ರಾಮೇಶ್ವರಂ ಕೆಫೆಯಲ್ಲಿ ಆದ ಸ್ಫೋಟದಲ್ಲಿ ಬಳಸಿದ ವಸ್ತುಗಳಿಗೂ ಸಾಮ್ಯತೆ ಇದೆ. ಹೀಗಾಗಿ ಸ್ಥಳೀಯವಾಗಿಯೇ ಈ ಸ್ಫೋಟಕವನ್ನು ತಯಾರು ಮಾಡಲಾಗಿದೆ ಎಂದು ತಿಳಿದುಬಂದಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ಹೇಳಿದರು.

ಇದನ್ನೂ ಓದಿ; ಪಾಕ್ ಪರ ಘೋಷಣೆ ಕೂಗಿದ್ದು‌ ನಿಜ; ಆರೋಪಿ ಪತ್ತೆಗೆ ತಯಾರಿ

ಬಸ್‌ನಲ್ಲಿ ಬಂದುಹೋಗಿರುವ ದೃಶ್ಯ ಸೆರೆ;

ಬಸ್‌ನಲ್ಲಿ ಬಂದುಹೋಗಿರುವ ದೃಶ್ಯ ಸೆರೆ; ಆರೋಪಿ ಬಸ್‌ನಲ್ಲಿ ಬಂದು ದೂರದಲ್ಲೇ ಇಳಿದುಕೊಂಡು ನಡೆದುಕೊಂಡು ರಾಮೇಶ್ವರಂ ಕೆಫೆಗೆ ಬಂದಿದ್ದಾನೆ. ಅವನು ಟೋಪಿ ಹಾಗೂ ಮಾಸ್ಕ್‌ ಧರಿಸಿದ್ದಾನೆ. ಆದರೂ ಕೂಡಾ ಆತನ ಪತ್ತೆ ಕಾರ್ಯ ನಡೆಯುತ್ತಿದೆ. ಜನ ಯಾವುದೇ ಆತಂಕಪಡುವ ಅಗತ್ಯವಿಲ್ಲ ಎಂದು ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. ಪೊಲೀಸರಿಗೆ ಫ್ರೀ ಹ್ಯಾಂಡ್‌ ಕೊಟ್ಟಿದ್ದೇವೆ. ಅವರ ತನಿಖೆ ಮಾಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ಆರೋಪಿಗಳನ್ನು ಬಂಧಿಸದೇ ಬಿಡುವುದಿಲ್ಲ ಎಂದು ಡಿ.ಕೆ.ಶಿವಕುಮಾರ್‌ ಹೇಳಿದರು.

ಪೊಲೀಸರು ಎಂಟು ತಂಡಗಳನ್ನು ರಚನೆ ಮಾಡಿಕೊಂಡಿದ್ದಾರೆ. ಎಲ್ಲಾ ಆಂಗಲ್‌ ನಲ್ಲೂ ತನಿಖೆ ನಡೆಯುತ್ತಿದೆ. ಪೊಲೀಸರಿಗೆ ತನಿಖೆಗೆ ಮುಕ್ತ ಅವಕಾಶ ನೀಡಿದ್ದೇವೆ. ಯಾರೂ ಕೂಡಾ ಭಯಪಡುವಂತಹ ಅವಶ್ಯಕತೆ ಇಲ್ಲ ಎಂದು ಡಿ.ಕೆ.ಶಿವಕುಮಾರ್‌ ಇದೇ ವೇಳೆ ಹೇಳಿದ್ದಾರೆ.

ಇದನ್ನೂ ಓದಿ; Rameshwaram cafe blast; ಬಾಂಬ್‌ ಸ್ಫೋಟ ಪ್ರಕರಣ; ಶಂಕಿತನ ಚಹರೆ ಪತ್ತೆ!

ಬಿಬಿಎಂಪಿಯಿಂದ ಗಾಯಾಳುಗಳಿಗೆ ಪರಿಹಾರ;

ಬಿಬಿಎಂಪಿಯಿಂದ ಗಾಯಾಳುಗಳಿಗೆ ಪರಿಹಾರ; ಘಟನೆಯಲ್ಲಿ ಹತ್ತು ಮಂದಿ ಗಾಯಗೊಂಡಿದ್ದಾರೆ. ಇದರಲ್ಲಿ ಐದು ಮಂದಿಗೆ ಕೊಂಚ ಜಾಸ್ತಿ ಗಾಯಗಳಾಗಿವೆ. ಹೀಗಾಗಿ ಗಾಯಾಳುಗಳಿಗೆ ಪರಿಹಾರ ನೀಡುವ ಬಗ್ಗೆ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇವೆ. ಬಿಬಿಎಂಪಿ ವತಿಯಿಂದ ಗಾಯಾಳುಗಳಿಗೆ ಪರಿಹಾರ ನೀಡಲಾಗುತ್ತದೆ ಎಂದು ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ಆಸ್ಪತ್ರೆಗೆ ಭೇಟಿ ನೀಡಿದ್ದ ಸಿಎಂ ಸಿದ್ದರಾಮಯ್ಯ;

ಆಸ್ಪತ್ರೆಗೆ ಭೇಟಿ ನೀಡಿದ್ದ ಸಿಎಂ ಸಿದ್ದರಾಮಯ್ಯ; ಇನ್ನು ಮೈಸೂರಿನಲ್ಲಿದ್ದ ಸಿಎಂ ಸಿದ್ದರಾಮಯ್ಯ ಅವರು ನೇರವಾಗಿ ಎಚ್‌ಎಎಲ್‌ ವಿಮಾನ ನಿಲ್ದಾಣಕ್ಕೆ ಬಂದರು. ಅಲ್ಲಿಂದ ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿರುವ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಣೆ ಮಾಡಿದರು. ಅನಂತರ ಮಾತನಾಡಿದ ಅವರು ಎಲ್ಲರೂ ಚೇತರಿಸಿಕೊಳ್ಳುತ್ತಿದ್ದಾರೆ. ಯಾವುದೇ ಭಯ ಬೇಡ ಎಂದು ಹೇಳಿದರು. ಆರೋಪಿಗಳನ್ನು ಪತ್ತೆ ಮಾಡುತ್ತೇವೆ. ಈ ಪ್ರಕರಣವನ್ನು ನಾವು ಗಂಭೀರವಾಗಿ ತೆಗೆದುಕೊಂಡಿದ್ದೇವೆ ಎಂದೂ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ನಿನ್ನೆ ಮಧ್ಯಾಹ್ನ ಬೆಂಗಳೂರಿನ ಕುಂದಲಹಳ್ಳಿಯಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ ಬಾಂಬ್‌ ಬ್ಲಾಸ್ಟ್‌ ಆಗಿತ್ತು. ವ್ಯಕ್ತಿಯೊಬ್ಬ ಬ್ಯಾಗ್‌ ಒಂದನ್ನು ತಂದು ವಾಷ್‌ ಬೇಸಿನ್‌ ಬಳಿ ಇಟ್ಟುಹೋಗಿದ್ದ. ಅದರಲ್ಲಿ ಟೈಮರ್‌ ಬಳಸಿದ ಬಾಂಬ್‌ ಇಟ್ಟಿದ್ದು, ಮಧ್ಯಾಹ್ನ 1 ಗಂಟೆ ಸುಮಾರಿಗೆ ಅದು ಬ್ಲಾಸ್ಟ್‌ ಆಗಿತ್ತು. ಇದರಿಂದಾಗಿ ಹತ್ತು ಮಂದಿ ಗಾಯಗೊಂಡಿದ್ದಾರೆ. ಹೋಟೆಲ್‌ ಸಿಬ್ಬಂದಿ ಕೂಡಾ ಗಾಯಗೊಂಡು ಆಸ್ಪತ್ರೆ ಸೇರಿದ್ದರು. ನಿನ್ನೆ ಮಧ್ಯಾಹ್ನ ನಡೆದ ಈ ಘಟನೆ ಬೆಂಗಳೂರಿನಲ್ಲಿ ಸಾಕಷ್ಟು ಆತಂಕಕ್ಕೆ ಕಾರಣವಾಗಿತ್ತು.

ಇದನ್ನೂ ಓದಿ; ಕುಂಬಳಕಾಯಿ ಹೂವು ಸೇವಿಸಿದರೆ ಇಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಾ..?

Share Post