BengaluruCrime

Breaking; ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ; ಎಫ್‌ಎಸ್‌ಎಲ್‌ ತಜ್ಞರಿಂದ ಪರಿಶೀಲನೆ!

ಬೆಂಗಳೂರು; ಬೆಂಗಳೂರಿನ ವೈಟ್‌ಫೀಲ್ಡ್‌ನ ಕುಂದಲಹಳ್ಳಿಯಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ ಇಂದು ಮಧ್ಯಾಹ್ನ ಸ್ಫೋಟ ಸಂಭವಿಸಿದೆ. ದುಷ್ಕರ್ಮಿಗಳು ಕಡಿಮೆ ತೀವ್ರತೆಯ ಸ್ಫೋಟಕ ಸ್ಫೋಟಿಸಿರಬಹುದೆಂದು ಶಂಕಿಸಲಾಗಿದೆ. ಮೊದಲಿಗೆ ಸಿಲಿಂಡರ್‌ ಅಥವಾ ಬಾಯ್ಲರ್‌ ಸ್ಫೋಟ ಎಂದು ಹೇಳಲಾಗುತ್ತಿತ್ತು. ಆದ್ರೆ, ಸ್ಫೋಟದ ಬಗ್ಗೆ ಹಲವು ಅನುಮಾನಗಳು ಮೂಡಿವೆ. ಈ ನಡುವೆ ಹಿರಿಯ ಪೊಲೀಸ್‌ ಅಧಿಕಾರಿಗಳೆಲ್ಲಾ ಸ್ಥಳಕ್ಕೆ ಆಗಮಿಸಿದ್ದಾರೆ. ಜೊತೆಗೆ ಎಫ್‌ಎಸ್‌ಎಲ್‌ ತಜ್ಞರು ಕೂಡಾ ಸ್ಥಳಕ್ಕೆ ಹೋಗುತ್ತಿದ್ದಾರೆ.

ಸ್ಥಳೀಯರ ಮಾಹಿತಿ ಪ್ರಕಾರ ಸ್ಫೋಟದ ಸ್ಥಳದಲ್ಲಿ ಬ್ಯಾಗ್‌ ಒಂದು ಪತ್ತೆಯಾಗಿದೆ. ಆ ಬ್ಯಾಗ್‌ ಸುಟ್ಟು ಸ್ಥಿತಿಯಲ್ಲಿದೆ. ಜೊತೆಗೆ ಬ್ಯಾಗ್‌ ಬಳಿ ಒಂದು ಸಣ್ಣ ಬ್ಯಾಟರಿ ಹಾಗೂ ನಟ್‌, ಐಡಿ ಕಾರ್ಡ್‌ ಟ್ಯಾಗ್‌ ಕೂಡಾ ಸಿಕ್ಕಿದೆ ಎಂದು ಹೇಳಲಾಗುತ್ತಿದೆ. ಆದ್ರೆ ಎಫ್‌ಎಸ್‌ಎಲ್‌ ತಜ್ಞರ ಪರಿಶೀಲನೆ ನಂತರ ಮಾಹಿತಿ ಸಿಗಲಿದೆ.

ರಾಮೇಶ್ವರಂ ಕೆಫೆ ಇತ್ತೀಚೆಗೆ ತುಂಬಾನೇ ಫೇಮಸ್‌ ಆಗಿದೆ. ಹೀಗಾಗಿ ಈ ಕೆಫೆಯಲ್ಲಿ ನೂರಾರು ಜನ ಇರುತ್ತಾರೆ. ಹೀಗಾಗಿ, ಅಲ್ಲಿ ಏನಾಗಿದೆ ಎಂಬುದು ಸರಿಯಾಗಿ ಗೊತ್ತಿಲ್ಲ. ಆದ್ರೆ ಭಾರೀ ಪ್ರಮಾಣದಲ್ಲಿ ಪೊಲೀಸರು ಹಾಗೂ ಪೊಲೀಸ್‌ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದಾರೆ. ಜೊತೆಗೆ ಎಫ್‌ಎಲ್‌ಎಲ್‌ ಅಧಿಕಾರಿಗಳು ಸ್ಥಳದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಹಲವು ಅನುಮಾನಗಳಿಗೆ ಕಾರಣವಾಗಿದೆ.

 

Share Post