BengaluruCrime

Breaking; ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ; ಹಲವು ಅನುಮಾನ ಹುಟ್ಟಿಸಿದ ಸ್ಫೋಟ!

ಬೆಂಗಳೂರು; ಇಂದು ಮಧ್ಯಾಹ್ನ ಬೆಂಗಳೂರಿನ ವೈಟ್‌ ಫೀಲ್ಡ್‌ ನ ಕುಂದಲಹಳ್ಳಿರುವ ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ ಸಂಭವಿಸಿದೆ. ಮೊದಲಿಗೆ ಸಿಲಿಂಡರ್‌ ಅಥವಾ ಬಾಯ್ಲರ್‌ ಸ್ಫೋಟ ಸಂಭವಿಸಿದೆ ಎಂದು ಅನುಮಾನಿಸಲಾಗಿತ್ತು. ಆದ್ರೆ ವ್ಯಕ್ತಿಯೊಬ್ಬರು ತಂದಿದ್ದ ಬ್ಯಾಗ್‌ನಲ್ಲಿದ್ದ ವಸ್ತುವಿನಿಂದ ಸ್ಫೋಟ ಸಂಭವಿಸಿರಬಹುದೆಂದು ಶಂಕಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಕೆಫೆಯನ್ನು ಸುತ್ತವರೆದಿದ್ದಾರೆ. ತೀವ್ರ ಪರಿಶೀಲನೆ ನಡೆಸುತ್ತಿದ್ದಾರೆ. ಸ್ಥಳದಲ್ಲಿ ನೂರಾರು ಜನ ಸೇರಿದ್ದಾರೆ.

ಸ್ಥಳದಲ್ಲಿ ಏನೇನು ನಡೆಯುತ್ತಿದೆ..?

========================

ಸ್ಥಳಕ್ಕೆ ಹಿರಿಯ ಪೊಲೀಸ್‌ ಅಧಿಕಾರಿಗಳು ಆಗಮಿಸಿದ್ದಾರೆ

ಶ್ವಾನದಳ, ಬಾಂಬ್‌ ನಿಷ್ಕ್ರಿಯ ದಳ ಹಾಗೂ ವಿಧಿವಿಜ್ಞಾನ ಪ್ರಯೋಗಾಲಯದಿಂದ ಪರಿಶೀಲನೆ ನಡೆಯುತ್ತಿದೆ

ಇಬ್ಬರು ವ್ಯಕ್ತಿಗಳು ಅನುಮಾನಾಸ್ಪದವಾಗಿ ರಾಮೇಶ್ವರಂ ಕೆಫೆ ಬಳಿ ಓಡಾಡಿದ್ದ ಬಗ್ಗೆ ಅನುಮಾನ

ಬೆಂಗಳೂರು ಪೊಲೀಸ್‌ ಕಮೀಷನರ್‌ ದಯಾನಂದ್‌ ಅವರು ಸ್ಥಳಕ್ಕೆ ಆಗಮಿಸಿದ್ದಾರೆ

ಸಿಸಿಟಿವಿ ದೃಶ್ಯಗಳನ್ನು ಕಲೆ ಹಾಕಿ ಪರಿಶೀಲನೆ ನಡೆಸುತ್ತಿರುವ ಪೊಲೀಸರು

ಗ್ರಾಹಕರು ಕೂರುಗ ಜಾಗದಲ್ಲಿ ಸ್ಫೋಟ ಸಂಭವಿಸಿದೆ

ಮಧ್ಯಾಹ್ನ ಊಟದ ಸಮಯದಲ್ಲಿ ಈ ಸ್ಫೋಟ ಸಂಭವಿಸಿದ್ದು, ಭಾರೀ ಶಬ್ದ ಕೇಳಿಬಂದಿದೆ

ಸ್ಫೋಟದಿಂದಾಗಿ ಕೆಫೆಯಲ್ಲಿನ ನೆಲದ ಭಾಗ ಛಿದ್ರವಾಗಿದೆ, ಟಾಪ್‌ ಕೂಡಾ ಬಿರುಕು ಬಿಟ್ಟಿದೆ

ಕೆಫೆಯಲ್ಲಿ ಸಿಲಿಂಡರ್‌ ಸ್ಫೋಟವಾಗಿಲ್ಲ, ಬಾಯ್ಲರ್‌ ಸ್ಫೋಟ ಕೂಡಾ ಸಂಭವಿಸಿಲ್ಲ

ಘಟನಾ ಸ್ಥಳದಲ್ಲಿ ಬ್ಯಾಗ್‌ ಒಂದು ಸಿಕ್ಕಿದೆ. ಬ್ಯಾಗ್‌ ಬಳಿ ನಟ್‌ ಹಾಗೂ ಸಣ್ಣ ಬ್ಯಾಟರಿ ಸಿಕ್ಕಿದೆ

ಇತ್ತೀಚೆಗೆ ರಾಮೇಶ್ವರಂ ಕೆಫೆ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿತ್ತು. ಈ ಹಿನ್ನೆಲೆಯಲ್ಲಿ ಬೇರೆ ಕೆಫೆಗಳವರು ಹೆದರಿಸಲು ಹೀಗೆ ಮಾಡಿಸಿರಬಹುದೇ ಎಂಬ ಅನುಮಾನ

ಸಾರ್ವಜನಿಕರನ್ನು ಹೊರಗಡೆ ಕಳುಹಿಸಿ ಬ್ಯಾರಿಕೇಡ್‌ ಹಾಕಲಾಗಿದೆ

ಗಾಯಗೊಂಡು ಐದು ಮಂದಿಯೂ ಕೂಡಾ ಒಂದೇ ಕಂಪನಿಯವರು

ಮೈಕ್ರೋಚಿಪ್‌ ಕಂಪನಿಯ ಉದ್ಯೋಗಿಗಳು ಒಟ್ಟಿಗೆ ಊಟಕ್ಕೆ ಬಂದಿದ್ದರು

 

Share Post