Health

Sugar; ಸಕ್ಕರೆ ತಿನ್ನುವುದರಿಂದ ಮಧುಮೇಹ ಬರುತ್ತಾ..?; ನಿಮಗೆ ಗೊತ್ತಿಲ್ಲದೆ ಕೆಲವು ಸತ್ಯಗಳು!

ಸಕ್ಕರೆ ತಿನ್ನುವುದರಿಂದ ಮಧುಮೇಹ ಬರುತ್ತದಾ..? ಈ ಬಗ್ಗೆ ಜನರಲ್ಲಿ ಹಲವು ನಂಬಿಕೆಗಳಿವೆ.. ಸಕ್ಕರೆ ಹೆಚ್ಚು ತಿಂದರೆ ಮಧುಮೇಹ ಬರುತ್ತದೆ.. ಇದರಿಂದ ಹಲವು ಅನಾರೋಗ್ಯಕ್ಕೆ ಕಾರಣವಾಗುತ್ತದೆ ಎಂದು ಬಹುತೇಕ ಜನರು ನಂಬಿದ್ದಾರೆ. ಹಾಗಾದ್ರೆ, ಸಕ್ಕರೆ ಬಗೆಗಿನ ಜನರ ನಂಬಿಕೆಗಳೇನು ನೋಡೋಣ ಬನ್ನಿ.

ಇದನ್ನೂ ಓದಿ; Ananth ambani; ಅನಂತ್‌ ಅಂಬಾನಿ – ರಾಧಿಕಾ ಮರ್ಚೆಂಟ್‌ ಲವ್‌ ಜರ್ನಿ

ಸಕ್ಕರೆ ಬಗೆಗಿನ ನಂಬಿಕೆಗಳು;

ಸಕ್ಕರೆ ಬಗೆಗಿನ ನಂಬಿಕೆಗಳು; ಸಕ್ಕರೆಯನ್ನು ಸ್ಲೋ ಪಾಯಿನಸ್‌ ಎಂದು ಕರೆಯಲಾಗುತ್ತದೆ. ಸಕ್ಕರೆ ಹೆಚ್ಚಿನ ಕ್ಯಾಲೋರಿಗಳನ್ನು ಹೊಂದಿದ್ದು, ಇದರಲ್ಲಿ ಪೋಷಕಾಂಶಗಳು ಮಾತ್ರ ಇರೋದಿಲ್ಲ. ಸಕ್ಕರೆ ಅಂಶ ಹೆಚ್ಚಿರುವ ಆಹಾರ ಪದಾರ್ಥಗಳನ್ನು ಸೇವಿಸಿದರೆ ದೇಹಕ್ಕೆ ಹೆಚ್ಚಿನ ಕ್ಯಾಲೋರಿಗಳು ದೊರೆಯುತ್ತವೆ. ಇದು ಅಧಿಕ ತೂಕ, ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಂತಹ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಇವೆಲ್ಲವೂ ನಿಜವೇ ಆದರೂ ಕೂಡಾ, ಅನೇಕ ಜನರು ಸಕ್ಕರೆಯ ಬಗ್ಗೆ ಅನೇಕ ತಪ್ಪು ಕಲ್ಪನೆಗಳನ್ನು ಹೊಂದಿದ್ದಾರೆ. ಈ ಕಾರಣದಿಂದಾಗಿ, ಅನೇಕರು ತಮ್ಮ ನೆಚ್ಚಿನ ಸಿಹಿತಿಂಡಿಗಳನ್ನು ಸಂಪೂರ್ಣವಾಗಿ ತ್ಯಜಿಸುತ್ತಾರೆ. ಸಕ್ಕರೆಯ ಬಗ್ಗೆ ಇರುವ ಆನೆಕ ತಪ್ಪು ನಂಬಿಕೆಗಳು ಯಾವುವು..?

ಇದನ್ನೂ ಓದಿ; Beauty Tips; ಕೆಂಪು ತೊಗರಿ ಬೇಳೆ ಫೇಸ್‌ಪ್ಯಾಕ್‌ ನಿಮ್ಮ ಅಂದ ಹೆಚ್ಚಿಸುತ್ತೆ!

ಸಕ್ಕರೆ ತಿನ್ನುವುದು ಚಟವಾಗುತ್ತದೆ;

ಸಕ್ಕರೆ ತಿನ್ನುವುದು ಚಟವಾಗುತ್ತದೆ; ಸಿಹಿ ಮತ್ತು ಸಕ್ಕರೆ ತಿನ್ನುವುದು ಚಟವಿದ್ದಂತೆ ಎಂದು ಹಲವರು ನಂಬಿದ್ದಾರೆ. ಆದ್ರೆ ಸಕ್ಕರೆ ಒಂದು ವ್ಯಸನ ಎಂಬುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ಕೆಲವರಿಗೆ, ಸಿಹಿಯಾದ ಯಾವುದನ್ನಾದರೂ ತಿನ್ನುವುದು ಡೋಪಮೈನ್ ಅನ್ನು ಹೆಚ್ಚಿಸಬಹುದು, ಆದರೆ ಯಾವುದೇ ಕಾರಣಕ್ಕೂ ಅದು ಚಟವಾಗುವುದಿಲ್ಲ. ಕೆಲವರು ಇತರ ಆಹಾರಗಳಿಗಿಂತ ಹೆಚ್ಚು ಸಿಹಿ ತಿನ್ನಬಹುದು.. ಹೆಚ್ಚು ಸಕ್ಕರೆ ತಿನ್ನಬಹುದು, ಆದರೆ ಸಕ್ಕರೆ ತಿನ್ನುವುದು ಚಟವಾಗುವುದಿಲ್ಲ.

ಸಕ್ಕರೆ ತಿನ್ನುವುದರಿಂದ ಮಧುಮೇಹ ಬರುತ್ತದೆಯೇ?;

ಸಕ್ಕರೆ ತಿನ್ನುವುದರಿಂದ ಮಧುಮೇಹ ಬರುತ್ತದೆಯೇ?; ಸಕ್ಕರೆ ಸೇವನೆಯೇ ಮಧುಮೇಹಕ್ಕೆ ಮುಖ್ಯ ಕಾರಣ ಎಂದು ಹಲವರು ಭಾವಿಸುತ್ತಾರೆ. ಮಧುಮೇಹವನ್ನು ಸಾಮಾನ್ಯವಾಗಿ ಸಕ್ಕರೆ ಕಾಯಿಲೆ ಎಂದು ಕರೆಯಲಾಗುತ್ತದೆ. ಆದರೆ ಸಿಹಿತಿಂಡಿಗಳನ್ನು ತಿನ್ನುವುದರಿಂದ ಮಾತ್ರ ಮಧುಮೇಹ ಬರುವುದಿಲ್ಲ. ಜೀನ್‌ಗಳು, ವಯಸ್ಸು, ತೂಕ, ಜೀವನಶೈಲಿ, ದೈಹಿಕ ಚಟುವಟಿಕೆಯ ಮಟ್ಟಗಳು, ಪಿಸಿಓಎಸ್ ಮತ್ತು ಇನ್ನೂ ಹೆಚ್ಚಿನ ಕಾರಣಗಳಿಂದ ಮಧುಮೇಹ ಬರುತ್ತದೆ.

ಇದನ್ನೂ ಓದಿ;YASH; ನ್ಯೂ ಲುಕ್‌ನಲ್ಲಿ ಕಾಣಿಸಿಕೊಂಡ ನಟ ಯಶ್‌; ಅಭಿಮಾನಿಗಳು ಫುಲ್‌ ಖುಷ್‌

 

ಸಕ್ಕರೆಯನ್ನು ಪೂರ್ತಿ ತ್ಯಜಿಸುವುದು ಉತ್ತಮ;

ಸಕ್ಕರೆಯನ್ನು ಪೂರ್ತಿ ತ್ಯಜಿಸುವುದು ಉತ್ತಮ; ಅನೇಕ ಜನರು ತೂಕವನ್ನು ಕಳೆದುಕೊಳ್ಳಲು ಮತ್ತು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಕ್ಕರೆಯನ್ನು ಸಂಪೂರ್ಣವಾಗಿ ತ್ಯಜಿಸುತ್ತಾರೆ. ಸತ್ಯವೇನೆಂದರೆ ಹೆಚ್ಚು ಸಕ್ಕರೆ ಸೇವನೆ ಮಾತ್ರ ಹಾನಿಕಾರಕವಾಗಿದೆ. ಸಿಹಿತಿಂಡಿಗಳು ಮತ್ತು ತಂಪು ಪಾನೀಯಗಳಂತಹ ಸಕ್ಕರೆ ಪದಾರ್ಥಗಳು ಆರೋಗ್ಯಕ್ಕೆ ಹಾನಿಕಾರಕ. ಹಣ್ಣುಗಳು ಮತ್ತು ನೈಸರ್ಗಿಕ ಸಕ್ಕರೆಗಳನ್ನು ತೆಗೆದುಕೊಳ್ಳಬಹುದು ಎಂದು ತಜ್ಞರು ಹೇಳುತ್ತಾರೆ.

ಇದನ್ನೂ ಓದಿ; Palav Leaf; ಪಲಾವ್‌ ಎಲೆಗಳಿಂದ ಮಧುಮೇಹ ನಿಯಂತ್ರಿಸಬಹುದಂತೆ!

ಕೃತಕ ಸಿಹಿಕಾರಕಗಳು ಒಳ್ಳೆಯದು;

ಕೃತಕ ಸಿಹಿಕಾರಕಗಳು ಒಳ್ಳೆಯದು; ಕೃತಕ ಸಿಹಿಕಾರಕಗಳು ನಿಮ್ಮನ್ನು ಹೆಚ್ಚು ತಿನ್ನಲು ಪ್ರೇರೇಪಿಸುತ್ತವೆ. ಇವುಗಳಿಂದ ಹಾನಿಯಾಗುವುದಿಲ್ಲ ಎಂದು ಕೆಲವರು ನಂಬಿದ್ದಾರೆ. ಆದ್ರೆ ಇದು ಜೀರ್ಣಾಂಗ ವ್ಯವಸ್ಥೆಯನ್ನು ಹಾನಿಗೊಳಿಸುತ್ತದೆ. ಕರುಳಿನ ಆರೋಗ್ಯವನ್ನು ಅಡ್ಡಿಪಡಿಸುತ್ತದೆ. ರುಚಿಗಳಲ್ಲಿ ಬದಲಾವಣೆಗಳು, ಈ ಹಿಡನ್ ಸಕ್ಕರೆಯ ಸೇವನೆಯಿಂದ ಅನೇಕ ರೋಗಗಳು ದಾಳಿ ಮಾಡುವ ಸಾಧ್ಯತೆ ಇದೆ. ತೂಕ ಹೆಚ್ಚುವುದು, ಜೊತೆಗೆ ಅಧಿಕ ಬಿಪಿ ಉಂಟಾಗುತ್ತದೆ. ಮಧುಮೇಹ ಹೆಚ್ಚುತ್ತದೆಯೇ ಹೊರತು ಕಡಿಮೆಯಾಗುವುದಿಲ್ಲ.

ಇದನ್ನೂ ಓದಿ; Murder; ಸಂಸದ ಉಮೇಶ್‌ ಜಾಧವ್‌ ಬೆಂಬಲಿಗನ ಭೀಕರ ಹತ್ಯೆ!

Share Post