International

ಬಹುಮಹಡಿ ಕಟ್ಟಡಲ್ಲಿ ಭಾರಿ ಬೆಂಕಿ ದುರಂತ; 43 ಮಂದಿ ದುರ್ಮರಣ!

ಢಾಕಾ; ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ (Dhaka) ಬಹುಮಹಡಿ ಕಟ್ಟಡದಲ್ಲಿ ಭಾರಿ ಬೆಂಕಿ ದುರಂತ (Fire) ಸಂಭವಿಸಿದೆ.  ದುರಂತದಲ್ಲಿ 43 ಜನರು ಸಾವನ್ನಪ್ಪಿದ್ದು, ಹಲವಾರು ಮಂದಿ ಗಾಯಗೊಂಡಿದ್ದಾರೆ. ರೆಸ್ಟೋರೆಂಟ್‌ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು, ಅದು ಇಡೀ ಕಟ್ಟಡಕ್ಕೆ ವ್ಯಾಪಿಸಿ ಈ ದುರಂತಕ್ಕೆ ಕಾರಣವಾಗಿದೆ.

ಇದನ್ನೂ ಓದಿ; Ananth ambani; ಅನಂತ್‌ ಅಂಬಾನಿ – ರಾಧಿಕಾ ಮರ್ಚೆಂಟ್‌ ಲವ್‌ ಜರ್ನಿ

ಗುರುವಾರ ಸ್ಥಳೀಯ ಕಾಲಮಾನ ರಾತ್ರಿ 10 ಗಂಟೆ ಸುಮಾರಿಗೆ ಬಹುಮಹಡಿ ಕಟ್ಟಡದಲ್ಲಿದ್ದ ರೆಸ್ಟೋರೆಂಟ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ನಂತರ ಅದು ಇಡೀ ಕಟ್ಟಡ ವ್ಯಾಪಿಸಿದೆ. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಬರುವಷ್ಟರಲ್ಲಿ ಬಹುತೇಕ ಸುಟ್ಟ ಕರಕಲಾಗಿತ್ತು. ಈ ಕಟ್ಟಡವು ಏಳು ಮಹಡಿಗಳನ್ನು ಹೊಂದಿದ್ದು, ಬಹುತೇಕ ಭಾಗ ಸುಟ್ಟಿದೆ.

ಢಾಕಾದ ಪ್ರಮುಖ ಪ್ರದೇಶದಲ್ಲಿರುವ ಈ ಕಟ್ಟಡದಲ್ಲಿ ಇತರ ರೆಸ್ಟೋರೆಂಟ್‌ಗಳು, ಹಲವಾರು ಬಟ್ಟೆ ಅಂಗಡಿಗಳು ಮತ್ತು ಮೊಬೈಲ್ ಫೋನ್ ಅಂಗಡಿಗಳಿವೆ. ಇದರಲ್ಲಿ ಒಂದು ರೆಸ್ಟೋರೆಂಟ್‌ ನಲ್ಲಿ ಬೆಂಕಿ ಕಾಣಿಸಿಕೊಂಡು ದುರಂತಕ್ಕೆ ಕಾರಣವಾಗಿದೆ. ಈಗ ಬೆಂಕಿಯನ್ನು ಹತೋಟಿಗೆ ತರಲಾಗಿದೆ ಎಂದು ಅಗ್ನಿಶಾಮಕ ಸಿಬ್ಬಂದಿ ತಿಳಿಸಿದ್ದಾರೆ. ದುರಂತಕ್ಕೆ ಕಾರಣ ಏನು ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ.

ಇದನ್ನೂ ಓದಿ; Beauty Tips; ಕೆಂಪು ತೊಗರಿ ಬೇಳೆ ಫೇಸ್‌ಪ್ಯಾಕ್‌ ನಿಮ್ಮ ಅಂದ ಹೆಚ್ಚಿಸುತ್ತೆ!

ಢಾಕಾ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 33 ಜನರು ಸಾವನ್ನಪ್ಪಿದ್ದಾರೆ ಎಂದು ಬಾಂಗ್ಲಾದೇಶದ ಆರೋಗ್ಯ ಸಚಿವ ಸಮಂತಾ ಲಾಲ್ ಸೇನ್ ಹೇಳಿದ್ದಾರೆ. ಢಾಕಾ ನಗರದ ಮುಖ್ಯ ಸುಟ್ಟಗಾಯಗಳ ಆಸ್ಪತ್ರೆಯಲ್ಲಿ ಇನ್ನೂ 10 ಜನರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ಇನ್ನು ಕಟ್ಟಡದಲ್ಲಿ ಸಿಲುಕಿದ್ದ 75 ಜನರನ್ನು ರಕ್ಷಿಸಲಾಗಿದೆ. ಹತ್ತಾರು ಜನರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.

“ಬೆಂಕಿ ಹೊತ್ತಿಕೊಂಡಾಗ ನಾವು ಆರನೇ ಮಹಡಿಯಲ್ಲಿದ್ದೆವು. ನಾವು ಮೆಟ್ಟಿಲುಗಳ ಮೂಲಕ ಕೆಳಗೆ ಬಂದು ಬದುಕುಳಿದೆವು” ಎಂದು ರೆಸ್ಟೋರೆಂಟ್ ಮ್ಯಾನೇಜರ್ ಸೊಹೆಲ್ ತಿಳಿಸಿದ್ದಾರೆ. ಮತ್ತೋರ್ವ ವ್ಯಕ್ತಿ ಮೊಹಮ್ಮದ್ ಅಲ್ತಾಫ್, ಮುರಿದ ಕಿಟಕಿಯ ಮೂಲಕ ಅಪಘಾತದಿಂದ ಸ್ವಲ್ಪದರಲ್ಲೇ ಪಾರಾಗಿದ್ದಾರೆ.

ಜನರನ್ನು ಸ್ಥಳಾಂತರಿಸಲು ಸಹಾಯ ಮಾಡುತ್ತಿದ್ದ ಅವರ ಇಬ್ಬರು ಸಹೋದ್ಯೋಗಿಗಳು ಬೆಂಕಿಯಲ್ಲಿ ಸಿಲುಕಿ ಸಾವನ್ನಪ್ಪಿದ್ದಾರೆ ಎಂದು ಅವರು ಹೇಳಿದರು.

ಇದನ್ನೂ ಓದಿ; Beauty Tips; ಕೆಂಪು ತೊಗರಿ ಬೇಳೆ ಫೇಸ್‌ಪ್ಯಾಕ್‌ ನಿಮ್ಮ ಅಂದ ಹೆಚ್ಚಿಸುತ್ತೆ!

Share Post