CrimeDistricts

Murder; ಸಂಸದ ಉಮೇಶ್‌ ಜಾಧವ್‌ ಬೆಂಬಲಿಗನ ಭೀಕರ ಹತ್ಯೆ!

ಕಲಬುರಗಿ; ಲೋಕಸಭಾ ಚುನಾವಣೆ ಹತ್ತಿರವಾಗಿರುವಾಗಲೇ, ಸಂಸದರೊಬ್ಬ ಬೆಂಬಲಿಗನನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ. ಸಂಸದ ಡಾ.ಉಮೇಶ್‌ ಜಾಧವ್‌ ಅವರ ಬೆಂಬಲಿಗ ಹಾಗೂ ಬಿಜೆಪಿ ಮುಖಂಡ ಗಿರೀಶ್‌ ಚಕ್ರ ಎಂಬುವವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದ್ದು, ಜನರನ್ನು ಬೆಚ್ಚಿಬೀಳಿಸಿದೆ.

ಇದನ್ನೂ ಓದಿ; Caste Census Report; ಜಾತಿ ಗಣತಿ ವರದಿ ಸರ್ಕಾರಕ್ಕೆ ಸಲ್ಲಿಕೆ; ಬಿಡುಗಡೆ ಮಾಡುತ್ತಾ ಸರ್ಕಾರ..?

ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ!;

ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ!; ಅಫಜಲಪುರ ತಾಲೂಕಿನ ಸಾಗನೂರು ಗ್ರಾಮದ ಹೊರವಲಯದ ಜಮೀನಿನಲ್ಲಿ ಈ ಕೃತ್ಯ ಎಸಗಿಲಾಗಿದೆ. ದುಷ್ಕರ್ಮಿಗಳು ಬಿಜೆಪಿ ಮುಖಂಡ ಗಿರೀಶ್‌ ಚಕ್ರ ಅವರ ಕಣ್ಣಿಗೆ ಖಾರದ ಪುಡಿ ಎರಚಿಸಿದ್ದು, ಅನಂತರ ಮಾರಕಾಸ್ತ್ರಗಳಿಂದ ಕೊಚ್ಚಿ ಅವರನ್ನು ಕೊಲೆ ಮಾಡಲಾಗಿದೆ. ಭೀಕರವಾಗಿ ಹತ್ಯೆ ಮಾಡಿದ ನಂತರ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.

ಬಿಎಸ್‌ಎನ್‌ಎಲ್‌ ಸಲಹಾ ಸಮಿತಿ ಸದಸ್ಯ;

ಬಿಎಸ್‌ಎನ್‌ಎಲ್‌ ಸಲಹಾ ಸಮಿತಿ ಸದಸ್ಯ; ಕೊಲೆಯಾದ ಗಿರೀಶ್‌ ಚಕ್ರ ಬಿಜೆಪಿ ಮುಖಂಡನಾಗಿ ಗುರುತಿಸಿಕೊಂಡಿದ್ದರು.. ಇದರ ಜೊತೆಗೆ ಬಿಜೆಪಿ ಸಂಸದ ಉಮೇಶ್‌ ಜಾಧವ್‌ ಅವರ ಬೆಂಬಲಿಗರಾಗಿದ್ದರು.. ಉಮೇಶ್‌ ಜಾಧವ್‌ ಅವರ ಜೊತೆ ಉತ್ತ ಸಂಪರ್ಕ ಇಟ್ಟುಕೊಂಡಿದ್ದ ಅವರು, ತಮ್ಮ ಸುತ್ತಮುತ್ತಲ ಗ್ರಾಮಗಳಿಗೆ ಹಲವು ಕೆಲಸಗಳನ್ನು ಮಾಡಿಸಿಕೊಟ್ಟಿದ್ದರು ಎನ್ನಲಾಗಿದೆ. ನಾಲ್ಕು ದಿನಗಳ ಹಿಂದಷ್ಟೇ ಗಿರೀಶ್‌ ಚಕ್ರ ಅವರನನು BSNL ಸಲಹಾ ಸಮಿತಿ ನಿರ್ದೇಶಕರನ್ನಾಗಿ ನೇಮಿಸಲಾಗಿತ್ತು. ಸಂಸದ ಉಮೇಶ್‌ ಜಾಧವ್‌ ಸೂಚನೆ ಮೇರೆ ಈ ನೇಮಕ ಆಗಿತ್ತು. ಇದಾದ ನಾಲ್ಕು ದಿನದಲ್ಲೇ ಗಿರೀಶ್‌ ಚಕ್ರ ಭೀಕರವಾಗಿ ಕೊಲೆಯಾಗಿದ್ದಾರೆ.

ಇದನ್ನೂ ಓದಿ; Himachala;ಅಡ್ಡ ಮತದಾನ ಮಾಡಿದ 6 ಶಾಸಕರು ಅನರ್ಹ; ಸರ್ಕಾರ ಉಳಿಸ್ತಾರಾ ಡಿಕೆಶಿ..?

ಸ್ನೇಹಿತರಿಂದ ಬರ್ಬರವಾಗಿ ಹತ್ಯೆಯಾದರೂ ಗಿರೀಶ್‌?;

ಸ್ನೇಹಿತರಿಂದ ಬರ್ಬರವಾಗಿ ಹತ್ಯೆಯಾದರೂ ಗಿರೀಶ್‌?; ಗಿರೀಶ್‌ ಚಕ್ರ ಅವರು ಬಿಎಸ್‌ಎನ್‌ಎಲ್‌ ಸಲಹಾ ಸಮಿತಿ ನಿರ್ದೇಶಕರಾಗಿ ನೇಮಕವಾಗಿದ್ದರು. ಈ ಹಿನ್ನೆಲೆಯಲ್ಲಿ ಪಾರ್ಟಿ ನೆಪದಲ್ಲಿ ಗಿರೀಶ್‌ ಚಕ್ರವನ್ನು ಸ್ನೇಹಿತರೇ ಅಫಜಲಪುರ ತಾಲೂಕಿನ ಸಾಗನೂರು ಗ್ರಾಮದ ಜಮೀನಿಗೆ ಕರೆಸಿಕೊಂಡಿದ್ದರು. ಈ ವೇಳೆ ಅಲ್ಲಿ ಅದೇನು ನಡೆಯಿತೋ ಗೊತ್ತಿಲ್ಲ. ಅಲ್ಲಿ ಪಾರ್ಟಿ ನಡೆಯಲಿಲ್ಲ. ಬದಲಾಗಿ ಕೊಲೆ ಮಾಡಲಾಗಿದೆ. ಹೊಲದ ಬಳಿ ಗಿರೀಶ್‌ ಚಕ್ರ ಬರುತ್ತಿದ್ದಂತೆ ಪ್ಲ್ಯಾನ್‌ ಮಾಡಿ ಆತನನ್ನು ಸಾಯಿಸಲಾಗಿದೆ. ಮೊದಲೇ ಎಲ್ಲವನ್ನೂ ರೆಡಿ ಮಾಡಿಕೊಂಡೇ ಗಿರೀಶ್‌ ಅವರನ್ನು ಸ್ಥಳಕ್ಕೆ ಕರೆಸಿಕೊಂಡಿದ್ದಾರೆ. ಗಿರೀಶ್‌ ಹೊಲಕ್ಕೆ ಬರುತ್ತಿದ್ದಂತೆ, ಉಪಾಯವಾಗಿ ಅವರ ಕಣ್ಣಿಗೆ ಖಾರದ ಪುಡಿ ಎರಚಿದ್ದಾರೆ. ಗಿರೀಶ್‌ ಕಿರುಚಾಡುತ್ತಾ ಕಣ್ಣುಜ್ಜಿಕೊಳ್ಳುವಷ್ಟರಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ.

ಇದನ್ನೂ ಓದಿ; ರಾಜ್ಯ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಲ್ಯಾಂಡ್‌ ಜಿಹಾದ್‌ ಆರೋಪ ಮಾಡಿದ ಆರ್‌.ಅಶೋಕ್‌!

ಆರೋಪಿಗಳಿಗಾಗಿ ತೀವ್ರ ಶೋಧ;

ಆರೋಪಿಗಳಿಗಾಗಿ ತೀವ್ರ ಶೋಧ; ಕೊಲೆ ಮಾಡಿದ ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದಾರೆ. ಈ ಕೊಲೆ ಯಾಕೆ ನಡೆಯಿತು ಅನ್ನೋದು ಕೂಡಾ ಗೊತ್ತಾಗಿಲ್ಲ.‌ ಗಿರೀಶ್‌ ಚಕ್ರ ಸ್ನೇಹಿತರೇ ಈ ಕೊಲೆ ಮಾಡಿದ್ದಾರೆ ಎಂದು ಹೇಳಲಾಗಿದೆ. ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಅವರಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಗಾಣಗಾಪುರ ಠಾಣಾ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪೊಲೀಸರು ಆರೋಪಿಗಳಿಗಾಗಿ ತೀವ್ರ ಹುಡುಕಾಟ ಆರಂಭಿಸಿದ್ದಾರೆ. ಆರೋಪಿಗಳ ಸುಳಿವು ಸಿಕ್ಕಿದ್ದು ಶೀಘ್ರದಲ್ಲೇ ಅವರ ಬಂಧನವಾಗುತ್ತೆ ಎಂದು ಹೇಳಲಾಗುತ್ತಿದೆ.

Share Post