HealthLifestyle

Tips for Bad Breath; ಬಾಯಿ ದುರ್ಗಂಧ ಬರ್ತಿದೆಯೇ..?; ಈ ಟಿಪ್ಸ್‌ ಫಾಲೋ ಮಾಡಿ!

ಅನೇಕರು ಹಲ್ಲು ಎಷ್ಟೇ ಸ್ವಚ್ಛ ಮಾಡಿದರೂ ಬಾಯಿ ದುರ್ವಾಸನೆಯಿಂದ ಬಳಲುತ್ತಿರುತ್ತಾರೆ.. ಇದರಿಂದಾಗಿ ಯಾರೊಂದಿಗೂ ಆರಾಮಾಗಿ ಮಾತಾಡೋಕೆ ಕಷ್ಟವಾಗುತ್ತಿರುತ್ತದೆ… ಸಾಮಾನ್ಯವಾಗಿ ಸರಿಯಾದ ರೀತಿಯಲ್ಲಿ ಹಲ್ಲುಜ್ಜದೇ ಇರೋದು ಬಾಯಿ ದುರ್ವಾಸನೆಗೆ ಮುಖ್ಯ ಕಾರಣ ಅನ್ನೋದು ಎಲ್ಲರಿಗೂ ಗೊತ್ತಿದೆ. ಇದರ ಹೊರತಾಗಿಯೂ ಬಾಯಿ ದುರ್ವಾಸನೆ ಬರುತ್ತಿದೆ ಅಂದ್ರೆ ಅದಕ್ಕೆ ಹೊಟ್ಟೆ.. ಗ್ಯಾಸ್ಟ್ರಿಕ್‌, ಸರಿಯಾಗಿ ಜೀರ್ಣವಾಗದೇ ಇರುವುದು ಕೂಡ ಬಾಯಿ ದುರ್ವಾಸನೆಗೆ ಕಾರಣವಾಗುತ್ತದೆ.. ಹೀಗಾಗಿ  ಬಾಯಿಯ ದುರ್ವಾಸನೆ ಹೋಗಲಾಡಿಸಲು ಹಲವು ಮನೆಮದ್ದುಗಳಿವೆ. ಇವುಗಳನ್ನು ಪಾಲಿಸಿದರೆ ನಿಮ್ಮ ಬಾಯಿ ದುರ್ವಾಸನೆ ಕಡಿಮೆ ಮಾಡಬಹುದು.

ಇದನ್ನೂ ಓದಿ; Cancer; ಕ್ಯಾನ್ಸರ್‌ಗೆ ಔಷಧಿ ಕಂಡುಹಿಡಿದ ಟಾಟಾ ಸಂಸ್ಥೆ; ಒಂದು ಮಾತ್ರೆ 100 ರೂಪಾಯಿ!

ಉಪ್ಪು ನೀರಿನಿಂದ ಗಾರ್ಗಲ್‌ ಮಾಡಿ;

ಉಪ್ಪು ನೀರಿನಿಂದ ಗಾರ್ಗಲ್‌ ಮಾಡಿ; ಹಲ್ಲನ್ನು ಸೂಕ್ತ ರೀತಿಯಲ್ಲಿ ಬ್ರಷ್‌ ಮಾಡುವುದಲ್ಲದೆ ಉಪ್ಪು ನೀರಿನಿಂದ ನಿಮ್ಮ ಬಾಯಿಯನ್ನು ತೊಳೆಯಬೇಕು. ಉಪ್ಪುನೀರಿನೊಂದಿಗೆ ಗಾರ್ಗ್ಲಿಂಗ್ ಮಾಡುವುದರಿಂದ ಬಾಯಿಯಲ್ಲಿ ಸಂಗ್ರಹವಾಗುವ ಬ್ಯಾಕ್ಟೀರಿಯಾವನ್ನು ಕೊಲ್ಲಲಾಗುತ್ತದೆ. ಇದು ಬಾಯಿಯ ದುರ್ವಾಸನೆಯನ್ನು ಹೋಗಲಾಡಿಸುತ್ತದೆ. ಅಲ್ಲದೆ, ಅರಿಶಿನವು ಬಾಯಿಯ ದುರ್ವಾಸನೆ ತೆಗೆಯಲು ಕೆಲಸ ಮಾಡುತ್ತದೆ. ಅರಿಶಿನವು ಕರ್ಕ್ಯುಮಿನ್ ಅನ್ನು ಹೊಂದಿದ್ದು, ಇದು ಬಾಯಿ ದುರ್ವಾಸನೆಯನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. ಹಲ್ಲುಗಳ ಹಳದಿ ಪದರವನ್ನು ಸ್ವಚ್ಛಗೊಳಿಸಲು ಅರಿಶಿನ ಸಹಾಯ ಮಾಡುತ್ತದೆ.

ಇದನ್ನೂ ಓದಿ; Low Iron Levels; ಐರನ್‌ ಕಡಿಮೆ ಇದ್ದರೆ ದೇಹದಲ್ಲಾಗುವ ಬದಲಾವಣೆ ಏನು..?

ಗ್ರೀನ್‌ ಟೀ ಹಾಗೂ ಪುದಿನಾ ಬಳಸಿ;

ಗ್ರೀನ್‌ ಟೀ ಹಾಗೂ ಪುದೀನಾ; ಗ್ರೀನ್ ಟೀ ಕುಡಿದರೆ ಬಾಯಿ ದರ್ಗಂದ ಇಲ್ಲದಂತೆ ಆಗುತ್ತದೆ. ಯಾಕಂದ್ರೆ ಇದರ ಉತ್ಕರ್ಷಣ ನಿರೋಧಕ ಗುಣ ಬಾಯಿಯಲ್ಲಿನ ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತದೆ. ಇದರ ಜೊತೆಗೆ ಪುದೀನಾವನ್ನೂ ಬಳಸುವುದರಿಂದ ಬಾಯಿ ದುರ್ವಾಸನೆಯನ್ನು ಮತ್ತಷ್ಟು ಕಡಿಮೆ ಮಾಡಬಹುದು. ಪುದಿನಾ ಎಲೆಗಳನ್ನು ಆಗಾಗ ಅಗೆಯುವುದರಿಂದ ಬಾಯಿ ದುರ್ವಾಸನೆ ಕಡಿಮೆಯಾಗುತ್ತದೆ. ಜೊತೆಗೆ ಪುದಿನಾ ಕಷಾಯ ಮಾಡಿ, ಅದರಿಂದ ಗಾರ್ಗ್ಲಿಂಗ್‌ ಮಾಡಿದರೆ ಒಳ್ಳೆಯದು.

ಊಟದ ನಂತರ ಲವಂಗ ಅಗೆಯಿರಿ;

ಊಟದ ನಂತರ ಲವಂಗ ಅಗೆಯಿರಿ; ಟೂತ್‌ ಪೇಸ್ಟ್‌ ನಲ್ಲಿ ಲವಂಗ ಹಾಕಿರುತ್ತಾರೆ.. ಯಾಕಂದ್ರೆ, ಬಾಯಿ ದುರ್ವಾಸನೆಗೆ ಲವಂಗ ಒಳ್ಳೆಯ ಔಷಧ. ಹೀಗಾಗಿ ಆಹಾರ ಸೇವನೆ ಮಾಡಿದ ನಂತರ ಒಂದು ಅಥವಾ ಎರಡು ಲವಂಗಗಳನ್ನು ಬಾಯಿಗೆ ಹಾಕಿಕೊಂಡು ಜಗಿಯುತ್ತಾ ಇರಬೇಕು. ತುಂಬಾ ಹೊತ್ತು ಬಾಯಿಯಲ್ಲಿ ಲವಂಗ ಇಟ್ಟುಕೊಳ್ಳುವುದರಿಂದ ಬ್ಯಾಕ್ಟೀರಿಯಾಗಳು ಕಡಿಮೆಯಾಗಿ,  ಬಾಯಿಯ ದುರ್ವಾಸನೆ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಲವಂಗದಲ್ಲಿರುವ ಶಕ್ತಿಯುತವಾದ ಉತ್ಕರ್ಷಣ ನಿರೋಧಕಗಳು ಸೂಕ್ಷ್ಮಜೀವಿಗಳನ್ನು ಕೊಲ್ಲಲಿದ್ದು, ಇದರಿಂದ ಬಾಯಿಯ ದುರ್ವಾಸನೆ ಕಡಿಮೆಯಾಗುತ್ತದೆ. ಕ್ಯಾಪ್ಸಿಕಂ ಮತ್ತು ಬ್ರೊಕೋಲಿಯನ್ನು ಆಹಾರದಲ್ಲಿ ಸೇರಿಸಿ. ಇವುಗಳಲ್ಲಿರುವ ವಿಟಮಿನ್ ಸಿ ಬಾಯಿಯ ದುರ್ವಾಸನೆಗೆ ಕಾರಣವಾಗುವ ರೋಗಾಣುಗಳನ್ನು ಕೊಲ್ಲುತ್ತದೆ. ಇದರಿಂದ ಬಾಯಿಯಿಂದ ಕೆಟ್ಟ ವಾಸನೆ ಬರುವುದು ನಿಲ್ಲುತ್ತದೆ.

ಇದನ್ನೂ ಓದಿ; ನಿಂಬೆ ರಸ ಸೇವನೆ ಒಳ್ಳೆಯದೇ..?; ಬೇಸಿಗೆಯಲ್ಲಿ ಹೆಚ್ಚು ನಿಂಬೆ ಸೇವಿಸೀರಿ ಹುಷಾರ್‌!

ಈರುಳ್ಳಿ, ಬೆಳ್ಳುಳ್ಳಿ ಅತಿಯಾದ ಸೇವನೆ ಬಿಡಿ;

ಈರುಳ್ಳಿ, ಬೆಳ್ಳುಳ್ಳಿ ಅತಿಯಾದ ಸೇವನೆ ಬಿಡಿ; ಎಲ್ಲಕ್ಕಿಂತ ಮಿಗಿಲಾಗಿ ಹಲ್ಲು ಮತ್ತು ಬಾಯಿಯನ್ನು ಶುಚಿಗೊಳಿಸುತ್ತಿರಬೇಕು. ದಿನಕ್ಕೆ ಎರಡು ಬಾರಿ ಬ್ರಷ್‌ ಮಾಡಬೇಕು. ಏನಾದರೂ ತಿಂದ ನಂತರ ಬಾಯಿಗೆ ನೀರು ಚೆನ್ನಾಗಿ ಮುಕ್ಕಳಿಸಿ ಉಗಿಯಬೇಕು.  ಬಾಯಿ ಒಣಗುವುದು, ವಸಡು ಸಮಸ್ಯೆ, ಹಲ್ಲಿನ ಕುಳಿಗಳು, ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಅತಿಯಾಗಿ ಸೇವಿಸುವುದರಿಂದ ಬಾಯಿ ದುರ್ವಾಸನೆ ಉಂಟಾಗುತ್ತದೆ. ಮಧುಮೇಹ, ಸಲ್ಫರ್ ಯುಕ್ತ ಆಹಾರಗಳ ಹೆಚ್ಚಿನ ಸೇವನೆ, ಧೂಮಪಾನ ಮತ್ತು ಮದ್ಯಪಾನ, ಒತ್ತಡ, ಆತಂಕ ಇತ್ಯಾದಿಗಳು ಕೂಡ ಬಾಯಿಯ ದುರ್ವಾಸನೆಗೆ ಕಾರಣವಾಗಬಹುದು. ಈ ಕಾರಣಗಳನ್ನು ಗಮನದಲ್ಲಿಟ್ಟುಕೊಂಡರೆ ದುರ್ವಾಸನೆ ತಡೆಯಬಹುದು.

ಇದನ್ನೂ ಓದಿ; ಪೀನಟ್‌ ಬಟರ್‌ ಆರೋಗ್ಯಕ್ಕೆ ಒಳ್ಳೆಯದಾ..? ಅದರಲ್ಲಿ ಏನೆಲ್ಲಾ ಪೋಷಕಾಂಶಗಳಿವೆ..?

Share Post