Health

ಮಾಜಿ ಐಎಎಸ್‌ ಅಧಿಕಾರಿ ಕೆ.ಶಿವರಾಮ್‌ಗೆ ಆರೋಗ್ಯದಲ್ಲಿ ಏರುಪೇರು; ಆಸ್ಪತ್ರೆಗೆ ದಾಖಲು!

ಬೆಂಗಳೂರು; ಮಾಜಿ ಐಎಎಸ್‌ ಅಧಿಕಾರಿ, ನಟ ಹಾಗೂ ರಾಜಕಾರಣಿ ಕೆ.ಶಿವರಾಮ್‌ ಅವರ ಆರೋಗ್ಯದಲ್ಲಿ ಏರುಪೇರಾಗಿದೆ ಎಂದು ಹೇಳಲಾಗುತ್ತಿದೆ. ಅವರನ್ನು ಬೆಂಗಳೂರಿನ ಎಚ್‌ಸಿಜಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ತಿಳಿದುಬಂದಿದೆ. ಅವರ ಆರೋಗ್ಯ ಪರಿಸ್ಥಿತಿ ತುಂಬಾ ಕ್ರಿಟಿಕಲ್‌ ಆಗಿದೆ ಎಂದು ಹೇಳಲಾಗುತ್ತಿದೆ..

ಕಾರ್ಡಿಯಾಕ್‌ ಅರೆಸ್ಟ್‌ ಅಂಡ್‌ ಬ್ರೈನ್‌ ಡೆಡ್‌;

ಕಾರ್ಡಿಯಾಕ್‌ ಅರೆಸ್ಟ್‌ ಅಂಡ್‌ ಬ್ರೈನ್‌ ಡೆಡ್‌; ಕೆ.ಶಿವಕುಮಾರ್‌ ಅವರಿಗೆ ಕಾರ್ಡಿಯಾಕ್‌ ಅರೆಸ್ಟ್‌ ಆಗಿದ್ದು, ಬ್ರೈನ್‌ ಡೆಡ್‌ ಆಗಿದೆ ಎಂದು ಹೇಳಲಾಗುತ್ತಿದೆ. ಆದ್ರೆ ಇನ್ನೂ ಈ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಸದ್ಯ ಶಿವರಾಮ್‌ ಅವರಿಗೆ ಚಿಕಿತ್ಸೆ ಮುಂದುವರೆದಿದೆ. ಐಸಿಯುನಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಕನ್ನಡದಲ್ಲೇ ಐಎಎಸ್‌ ಬರೆದಿದ್ದ ಖ್ಯಾತಿಯ ಶಿವರಾಮ್‌;

ಕನ್ನಡದಲ್ಲೇ ಐಎಎಸ್‌ ಬರೆದಿದ್ದ ಖ್ಯಾತಿಯ ಶಿವರಾಮ್‌; ಐಎಸ್‌ಎಸ್‌ ಪರೀಕ್ಷೆ ಪಾಸ್‌ ಮಾಡಬೇಕಾದರೆ ಇಂಗ್ಲೀಷ್‌ ಬರಲೇಬೇಕು ಎಂದು ಎಲ್ಲರೂ ಅಂದುಕೊಂಡಿದ್ದರು. ಆದ್ರೆ ಆಗಿನ ಕಾಲಕ್ಕೇ ಕೆ.ಶಿವರಾಮ್‌ ಅವರು ಕನ್ನಡದಲ್ಲೇ ಐಎಎಸ್‌ ಪರೀಕ್ಷೆ ಬರೆದು ಪಾಸಾಗಿದ್ದರು. ಈ ಮೂಲಕ ಕನ್ನಡದಲ್ಲಿ ಪರೀಕ್ಷೆ ಬರೆದು ಐಎಎಸ್‌ ಅಧಿಕಾರಿಯಾದ ಮೊದಲ ಕನ್ನಡಿಗ ಎಂಬ ಕೀರ್ತಿ ಕೆ.ಶಿವರಾಂ ಅವರಿಗಿದೆ.

ಬೆಂಗಳೂರಿನ ಶ್ರೀರಾಮಪುರದಲ್ಲಿ ಅಕ್ರಮವಾಗಿ ವಾಸವಿದ್ದವರಿಗೆ ಹಕ್ಕುಪತ್ರಗಳನ್ನು ನೀಡಿ ನೂರಾರು ಕುಟುಂಬಗಳಿಗೆ ನೆರವಾಗಿದ್ದರು. ಅದಲ್ಲದೆ ಅವರ ಸೇವಾವಧಿಯಲ್ಲಿ ಬಡವರ ಪರವಾಗಿ ಹಲವಾರು ಕೆಲಸಗಳನ್ನು ಮಾಡಿದ್ದರು.

ಚಿತ್ರನಟರಾಗಿಯೂ ಹೆಸರಾಗಿದ್ದ ಕೆ.ಶಿವರಾಮ್‌; ಶಿವರಾಮ್‌ ಅವರು ‘ಬಾನಲ್ಲೆ ಮಧುಚಂದ್ರಕ್ಕೆ’, ‘ವಸಂತಕಾವ್ಯ’ ಚಿತ್ರದಲ್ಲಿ ನಾಯಕ ನಟರಾಗಿ ಬಣ್ಣ ಹಚ್ಚಿದ್ದರು. ಅನಂತರ ಅವರು ರಾಜಕೀಯಕ್ಕೆ ಬಂದಿದ್ದರು. ಸದ್ಯ ಅವರು ಬಿಜೆಪಿ ನಾಯಕರಾಗಿದ್ದು, ಲೋಕಸಭಾ ಚುನಾವಣೆಯಲ್ಲಿ ಟಿಕೆಟ್‌ ಬಯಸಿದ್ದಾರೆ.

 

Share Post