Cinema

ರಶ್ಮಿಕಾಗೆ ಗಂಡ ಎಂದರೆ ವಿಜಯ್‌ ದೇವರಕೊಂಡ ರೀತಿ ಇರಬೇಕಂತೆ!

ನ್ಯಾಷನಲ್‌ ಕ್ರಶ್‌ ಎಂದೇ ಖ್ಯಾತರಾಗಿರುವ ನಟಿ ರಶ್ಮಿಕಾ ಮಂದಣ್ಣ ಹಾಗೂ ತೆಲುಗಿನ ಖ್ಯಾತ ನಟ ವಿಜಯ್‌ ದೇವರಕೊಂಡ ಮದುವೆಯಾಗುತ್ತಾರೆ ಎಂದು ಇತ್ತೀಚೆಗೆ ಸುದ್ದಿಯಾಗಿತ್ತು. ಆದ್ರೆ ಇದನ್ನು ಇಬ್ಬರೂ ಅಲ್ಲಗೆಳೆದಿದ್ದರು. ಇದೀಗ ಮತ್ತೆ ಇವರಿಬ್ಬರೂ ಸುದ್ದಿಯಾಗಿದ್ದಾರೆ. ಯಾಕಂದ್ರೆ  ರಶ್ಮಿಕಾಗೆ ಗಂಡನಾಗುವವರು ವಿಜಯ್‌ ದೇವರಕೊಂಡ ರೀತಿ ಇರಬೇಕಂತೆ!!!.

ಇದನ್ನೂ ಓದಿ; ಕಾಂಗ್ರೆಸ್ ನ ಮೂರೂ ಅಭ್ಯರ್ಥಿ ಗಳು ಗೆಲ್ಲುತ್ತಾರೆ; ಸಿಎಂ ಸಿದ್ದರಾಮಯ್ಯ ವಿಶ್ವಾಸ

ವಿಜಯ್‌ ಮದುವೆಯಾಗುವ ಬಗ್ಗೆ ಸುಳಿವು ಕೊಟ್ರಾ ರಶ್ಮಿಕಾ..?;

ವಿಜಯ್‌ ಮದುವೆಯಾಗುವ ಬಗ್ಗೆ ಸುಳಿವು ಕೊಟ್ರಾ ರಶ್ಮಿಕಾ..?; ಗೀತಗೋವಿಂದಂ ಸಿನಿಮಾ ನಂತರ ವಿಜಯ್‌ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಹಲವಾರು ಬಅರಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಹಲವು ಕಡೆ ಸುತ್ತಾಡಿದ್ದರು. ಹೀಗಾಗಿ ಇಬ್ಬರ ನಡುವೆ ಏನೋ ನಡೆಯುತ್ತಿದೆ ಎಂಬ ಗುಸುಗುಸು ಎದ್ದಿತ್ತು. ಇತ್ತೀಚೆಗೆ ಇವರಿಬ್ಬರೂ ಮದುವೆಯಾಗುತ್ತಾರೆ ಎಂದು ಸುದ್ದಿ ಹಬ್ಬಿತ್ತು. ಇದೀಗ ರಶ್ಮಿಕಾ ಮಂದಣ್ಣ ಅವರು ಈ ಬಗ್ಗೆ ಸುಳಿವು ಕೊಟ್ಟಂತಿದೆ. ಅವರು ನೇರವಾಗಿ ಹೇಳದಿದ್ದರೂ ಕೂಡಾ ರಶ್ಮಿಕಾ ಫ್ಯಾನ್ಸ್‌ ಹಾಕಿರುವ ಪೋಸ್ಟ್‌ಗೆ ರಶ್ಮಿಕಾ ಕಮೆಂಟ್‌ ಮಾಡಿದ್ದು, ಈ ಕಮೆಂಟ್‌ ವಿಜಯ್‌ ಜೊತೆಗಿನ ಮದುವೆ ವಿಚಾರವೇ ತಿಳಿಸುತ್ತಿದೆ ಎಂದು ಎಲ್ಲರೂ ಮಾತನಾಡುತ್ತಿದ್ದಾರೆ.

ಇದನ್ನೂ ಓದಿ; ಯೂಟ್ಯೂಬ್‌ ನೋಡಿ ಶೂ ಲಾಂಡ್ರಿ ಇಟ್ಟಳು; ಲಕ್ಷ ಲಕ್ಷ ಸಂಪಾದಿಸುತ್ತಿರುವ ಯುವತಿ!

ಫ್ಯಾನ್ಸ್‌ ಪೇಜ್‌ನಲ್ಲಿ ಬರೆದದ್ದೇನು..?;

ಫ್ಯಾನ್ಸ್‌ ಪೇಜ್‌ನಲ್ಲಿ ಬರೆದದ್ದೇನು..?; ರಶ್ಮಿಕಾ ಮಂದಣ್ಣ ಅವರ ಹೆಸರಿನಲ್ಲಿ ಅನೇಕ ಫ್ಯಾನ್ಸ್‌ ಪೇಜ್‌ಗಳಿವೆ.. ಅದರಲ್ಲೊಂದು ಪೇಜ್‌ನಲ್ಲಿ ರಶ್ಮಿಕಾ ಮಂದಣ್ಣ ಅವರು ಮದುವೆಯಾಗುವ ಹುಡುಗ ಹೇಗಿರಬೇಕು ಎಂದು ಬರೆಯಲಾಗಿದೆ. ರಶ್ಮಿಕಾ ಅವರನ್ನು ಎಲ್ಲರೂ ರಾಣಿ ಎಂದು ಕರೆಯುತ್ತಾರೆ. ಅವರು ನ್ಯಾಷನಲ್‌ ಕ್ರಶ್‌. ಹೀಗಾಗಿ ಅವರಿಗೆ ಗಂಡ ಆಗುವವರು VD ರೀತಿ ಇರಬೇಕು. VD ಎಂದರೆ ವೆರಿ ಡೇರಿಂಗ್‌. ಹೀಗಿದ್ದರೆ ಮಾತ್ರ ರಶ್ಮಿಕಾರನ್ನು ಕಾಪಾಡುವ ರಾಜನಾಗುತ್ತಾನೆ ಎಂದು ಬರೆಯಲಾಗಿದೆ. ಇದಕ್ಕೆ ರಶ್ಮಿಕಾ ಕಮೆಂಟ್‌ ಮಾಡಿದ್ದು ʻ ಖಂಡಿತಾ ಹೌದುʼ ಎಂದು ಬರೆದುಕೊಂಡಿದ್ದಾರೆ.

VD ಎಂದರೆ ವಿಜಯ್‌ ದೇವರಕೊಂಡನಾ..?;

VD ಎಂದರೆ ವಿಜಯ್‌ ದೇವರಕೊಂಡನಾ..?; ಫ್ಯಾನ್ಸ್‌ ಪೇಜ್‌ನಲ್ಲಿ VD ಎಂದರೆ ವೆರಿ ಡೇರಿಂಗ್‌ ಎಂದು ಬರೆಯಲಾಗಿದೆಯಾದರೂ, VD ಎಂದರೆ ವಿಜಯ್‌ ದೇವರಕೊಂಡನೇ ಇರಬೇಕು ಎಂದು ಎಲ್ಲರೂ ಮಾತನಾಡಿಕೊಳ್ಳುತ್ತಿದ್ದಾರೆ. ರಶ್ಮಿಕಾ ಅವರೇ ಇಬ್ಬರ ನಡುವಿನ ಸಂಬಂಧ ರಿವೀಲ್‌ ಮಾಡುವುದಕ್ಕಾಗಿಯೇ ಬೇಕಂತಲೇ ಈ ರೀತಿ ಬರೆಸಿರಬಹುದು ಎಂದೂ ಹೇಳಲಾಗುತ್ತಿದೆ.

 

 

Share Post