BengaluruCinema

ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ರಶ್ಮಿಕಾ ಅಭಿಯಾನ; ಹೆಸರು ಉಲ್ಟಾ ಹಾಕಿದ್ದು ಏಕೆ..?

ಬೆಂಗಳೂರು; ರಶ್ಮಿಕಾ ಮಂದಣ್ಣ ಸದಾ ಸುದ್ದಿಯಲ್ಲಿರುವ ಸೆಲೆಬ್ರಿಟಿ.. ಇಂದಿಲ್ಲೊಂದು ಕಾರಣಕ್ಕೆ ಅವರು ಸುದ್ದಿಯಾಗುತ್ತಲೇ ಇರುತ್ತಾರೆ. ಕನ್ನಡಿಗರಂತೂ ಅವರನ್ನು ಟ್ರೋಲ್‌ ಮಾಡುತ್ತಲೇ ಇರುತ್ತಾರೆ. ಆದ್ರೆ ಈ ಬಾರಿ ಒಳ್ಳೆ ವಿಚಾರಕ್ಕಾಗಿ ರಶ್ಮಿಕಾ ಮಂದಣ್ಣ ಸುದ್ದಿಯಾಗಿದ್ದಾರೆ. ಅವರು ಈ ಬಾರಿ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಬೇಕೆಂದು ವಿಶೇಷ ಅಭಿಯಾನ ಆರಂಭಿಸಿದ್ದಾರೆ.

ತಮ್ಮ ಇನ್ಸ್ಟಾಗ್ರಾಂ ಪೇಜ್‌ನಲ್ಲಿ ಅವರು ವಿಶೇಷ ಅಭಿಯಾನ ಶುರು ಮಾಡಿದ್ದು, ತಮ್ಮ ಹೆಸರನ್ನು ಉಲ್ಟಾ ಹಾಕಿ ಕುತೂಹಲಕ್ಕೆ ಕಾರಣರಾಗಿದ್ದಾರೆ. ಈ ರೀತಿ ಪೋಸ್ಟ್‌ ಹಾಕಲು ಕಾರಣ ಏನಿರಬಹುದು ಎಂಬುದರ ಬಗ್ಗೆಯೂ ಚರ್ಚೆ ನಡೆದಿದೆ. ರಶ್ಮಿಕಾ ಮಂದಣ್ಣ ಅವರು ತಮ್ಮ ಹೆಸರನ್ನು ಉಲ್ಟಾ ನೇತು ಹಾಕಿದ್ದಕ್ಕೆ ಕಾರಣ ಇದೆ. ಅವರು ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡಿ ಎಂದು ಹೇಳುವ ಅಭಿಯಾನ ಮಾಡುತ್ತಿದ್ದು, ಅದರ ಭಾಗವಾಗಿ ಅಕ್ಷರ ಬಾರದ ಹೆಣ್ಣುಮಕ್ಕಳಿಗೆ ಅಕ್ಷರಗಳು ಉಲ್ಟಾ ಕಾಣುತ್ತವೆ ಅಂತ ಹೇಳೋದಕ್ಕಾಗಿ ಅವ್ರು ಹೆಸ್ರು ಉಲ್ಟಾ ಬರೆದಿದ್ದಾರೆ.

Share Post