Rich Beggar; ಈಕೆ ಭಿಕ್ಷುಕಿ, ಆದ್ರೆ ಸಂಪಾದನೆ ಲಕ್ಷಗಳಲ್ಲಿ.. ಆಸ್ತಿ ಕೇಳಿದರೆ ದಂಗಾಗ್ತೀರಿ..!
ಇಂಧೋರ್; ನಮಗಿಂತ ಭಿಕ್ಷೆ ಬೇಡೋರೇ ಎಷ್ಟೋ ಚೆನ್ನಾಗಿರುತ್ತಾರೆ ಅಂತ ನಾವು ಆಗಾಗ ಮಾತಾಡೋದಿದೆ.. ಇದಕ್ಕೆ ಸಾಕ್ಷಿ ಸಿಕ್ಕಿಬಿಟ್ಟಿದೆ… ಇಲ್ಲೊಬ್ಬ ಭಿಕ್ಷುಕ ಮಹಿಳೆ ಇದ್ದಾಳೆ.. ಈಕೆ ಕೇವಲ 6 ವಾರಗಳಲ್ಲಿ 2.5 ಲಕ್ಷ ರೂಪಾಯಿ ಗಳಿಸಿದ್ದಾಳೆ.. ಅಷ್ಟೇ ಅಲ್ಲ.. ಈಕೆಗೆ ಕೃಷಿ ಭೂಮಿ, ಎರಡಂತಸ್ತಿನ ಕಟ್ಟಡ ಇದೆ, ಬೈಕ್ ಇದೆ, ಸ್ಮಾರ್ಟ್ ಫೋನ್ ಕೂಡಾ… ತಿಂಗಳಿಗೆ ಲಕ್ಷಗಳ ಲೆಕ್ಕದಲ್ಲಿ ಸಂಪಾದನೆ ಮಾಡುವ ಹೈಟೆಕ್ ಭಿಕ್ಷುಕಿ ಈಕೆ.. ಈಕೆಯನ್ನು ಈಗ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಇದಕ್ಕೆ ಕಾರಣ ಏನು ಇಲ್ಲಿದೆ ಮಾಹಿತಿ…
ಇದನ್ನೂ ಓದಿ;Monkey disease; ಒಂದೇ ದಿನ 6 ಮಂದಿಗೆ ಮಂಗನ ಕಾಯಿಲೆ; ಹೆಚ್ಚಿದ ಆತಂಕ..!
ಸ್ಮಾರ್ಟ್ ಫೋನ್ ಇಟ್ಟುಕೊಂಡೇ ಭಿಕ್ಷಾಟನೆ..!;
ಸ್ಮಾರ್ಟ್ ಫೋನ್ ಇಟ್ಟುಕೊಂಡೇ ಭಿಕ್ಷಾಟನೆ..!; ಮಧ್ಯಪ್ರದೇಶದ ಇಂದೋರ್‌ನಲ್ಲಿ ಇಂದ್ರಾಬಾಯಿ ಎಂಬ ಭಿಕ್ಷುಕಿ ಈಕೆ.. ಹಲವಾರು ವರ್ಷಗಳಿಂದ ಈಕೆ ಇಂದೋರ್‌ನ ಬೀದಿ ಬೀದಿಯಲ್ಲಿ ಅಲೆದಾಡಿ ಭಿಕ್ಷೆ ಬೇಡುತ್ತಾ ಜೀವನ ಸಾಗಿಸುತ್ತಾಳೆ… ತಾವು ಭಿಕ್ಷೆ ಬೇಡುವುದಲ್ಲದೆ ತನ್ನ ಮಕ್ಕಳನ್ನೂ ಬಲವಂತದಿಂದ ಭಿಕ್ಷಾಟನೆ ಬಿಟ್ಟಿದ್ದಾಳೆ… ಹಾಗಂತ ಈಕೆಗೆ ತಿನ್ನೋಕೇನೋ ಕೊರತೆ ಇಲ್ಲ… ಈಕೆಗೆ ಎರಡಂತಸ್ತಿನ ಕಟ್ಟಡ ಇದೆ, ಬೈಕ್ ಇದೆ, ಕೃಷಿ ಭೂಮಿ ಕೂಡಾ ಇದೆ.. ಹಾಗಂತ ಇದೆಲ್ಲಾ ತನ್ನ ಹಿರಿಯರಿಂದ ಬಂದಿದ್ದಲ್ಲ… ಇಂದ್ರಾಬಾಯಿಯೇ ಭಿಕ್ಷೆ ಬೇಡಿ ಸಂಪಾದನೆ ಮಾಡಿರೋದು… ಈಕೆ ತಿಂಗಳಿಗೆ ಕನಿಷ್ಠ ಎಂದರೂ ಎರಡು ಲಕ್ಷ ರೂಪಾಯಿ ಭಿಕ್ಷೆಯಿಂದಲೇ ಸಂಪಾದನೆ ಮಾಡುತ್ತಾಳೆ…
ಇದನ್ನೂ ಓದಿ; Dairy Products; ಒಂದು ತಿಂಗಳು ಡೈರಿ ಉತ್ಪನ್ನ ತ್ಯಜಿಸಿ; ದೇಹದ ಬದಲಾವಣೆ ನೋಡಿ
ಮಕ್ಕಳನ್ನೂ ಭಿಕ್ಷಾಟನೆ ತಳ್ಳಿದ್ದಕ್ಕೆ ಬಂಧನ!
ಮಕ್ಕಳನ್ನೂ ಭಿಕ್ಷಾಟನೆ ತಳ್ಳಿದ್ದಕ್ಕೆ ಬಂಧನ!; ಉನ್ನತ ಶಿಕ್ಷಣ ಪಡೆದು ದೊಡ್ಡ ದೊಡ್ಡ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವ ಹೆಚ್ಚಿನವರಿಗೆ ಇಷ್ಟು ಸಂಬಳ ಸಿಗುವುದಿಲ್ಲ. ತಿಂಗಳಿಗೆ ಹತ್ತು ಸಾವಿರ ರೂಪಾಯಿಗೆ ಉದ್ಯೋಗ ಮಾಡುವವರು ಲಕ್ಷ ಲಕ್ಷ ಜನ ನಮ್ಮ ನಡುವೆ ಇದ್ದಾರೆ. ಆದ್ರೆ ಈಕೆ ಮಾತ್ರ ಭಿಕ್ಷಾಟನೆ ಮಾಡಿ ಲಕ್ಷಾಂತರ ರೂಪಾಯಿ ಸಂಪಾದನೆ ಮಾಡುತ್ತಿರುವುದು ಕೇಳಿ ಎಲ್ಲರಿಗೂ ಅಚ್ಚರಿ..
ಮಕ್ಕಳನ್ನು ಇಂದ್ರಾಬಾಯಿ ಬಲವಂತದಿಂದ ಭಿಕ್ಷಾಟನೆಗೆ ಬಳಸಿಕೊಳ್ಳುತ್ತಿದ್ದಳು.. ಇದರನ್ನು ನೋಡಿದ ಸ್ವಯಂಸೇವಕರೊಬ್ಬರು ಪ್ರಶ್ನೆ ಮಾಡಿದಾಗ, ತಿನ್ನೋಕೆ ಅನ್ನವಿಲ್ಲ.. ಮಾಡೋಕೆ ಕೆಲಸವಿಲ್ಲ.. ಹೀಗಾಗಿ ಭಿಕ್ಷೆ ಬೇಡುತ್ತಿದ್ದೇವೆ. ನಾವು ಕಳ್ಳತನ ಮಾಡುತ್ತಿಲ್ಲವಲ್ಲ.. ಹೊಟ್ಟೆ ತುಂಬಿಸಿಕೊಳ್ಳಲು ಭಿಕ್ಷೆ ಬೇಡುತ್ತಿದ್ದೇವೆ ಎಂದು ಆಕೆ ಹೇಳಿದ್ದಾಳೆ.. ಇಂದ್ರಾಬಾಯಿ ಏಳು ವರ್ಷ ಮಗಳನ್ನು ಬಲವಂತದಿಂದ ಭಿಕ್ಷಾಟನೆ ಮಾಡಿಸುತ್ತಿದ್ದು ಕಂಡು, ಭಿಕ್ಷುಕರಿಗೆ ಪುನರ್ವಸತಿ ಕಲ್ಪಿಸಲು ಇಂದೋರ್ ಮುನ್ಸಿಪಲ್ ಕಾರ್ಪೊರೇಷನ್‌ನೊಂದಿಗೆ ಕೆಲಸ ಮಾಡುತ್ತಿರುವ ಎನ್‌ಜಿಒ ಸ್ವಯಂ ಸೇವಕರು ಬಿಡದೇ ಆಕೆಯ ವಿಚಾರಣೆ ಮಾಡಿದ್ದಾರೆ. ನಂತರ ಪೊಲೀಸರನ್ನು ಕರೆಸಿ, ಆಕೆಯನ್ನು ಬಂಧಿಸಿದ್ದಾರೆ. ಈ ವೇಳೆ ಇಂದ್ರಾಬಾಯಿ ಲಕ್ಷ ಲಕ್ಷ ಭಿಕ್ಷೆಯಿಂದಲೇ ಸಂಪಾದನೆ ಮಾಡಿರುವುದು, ಆಸ್ತಿ ಮಾಡಿರುವುದು ಗೊತ್ತಾಗಿದೆ.
ಇದನ್ನೂ ಓದಿ; Horoscope; ಈ ರಾಶಿಯವರು ಅತ್ತೆ-ಮಾವಂದಿರನ್ನು ಸ್ವಂತ ಪೋಷಕರಂತೆ ನೋಡಿಕೊಳ್ತಾರೆ!!
ಭಿಕ್ಷುಕಿ ಇಂದ್ರಾಬಾಯಿಗೆ 5 ಜನ ಮಕ್ಕಳು!
ಭಿಕ್ಷುಕಿ ಇಂದ್ರಾಬಾಯಿಗೆ 5 ಜನ ಮಕ್ಕಳು!; ಇಂದ್ರಾಬಾಯಿಗೆ 10, 8, 7, 3 ಮತ್ತು 2 ವರ್ಷದ ಐವರು ಮಕ್ಕಳಿದ್ದಾರೆ. ಉಜ್ಜಯಿನಿಯ ಮಹಾಕಾಲ್ ದೇವಸ್ಥಾನಕ್ಕೆ ಹೋಗುವ ಮಾರ್ಗ, ಇಂದೋರ್‌ನ ಲವ್ ಕುಶ್ ಚೌಕದಲ್ಲಿ ಮಕ್ಕಳನ್ನು ಇರಿಸಿ ಆಕೆ ಭಿಕ್ಷೆ ಬೇಡಿಸುತ್ತಾಳೆ. ಉಜ್ಜಯಿನಿಗೆ ತೆರಳುವ ವಾಹನಗಳಿಗೆ ಟರ್ನಿಂಗ್ ಪಾಯಿಂಟ್ ಆಗಿದ್ದರಿಂದ ಆ ಸ್ಥಳವನ್ನೇ ಆಕೆ ಆಯ್ಕೆ ಮಾಡಿಕೊಂಡಿದ್ದಾಳೆ. ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರು ಮಕ್ಕಳನ್ನು ನೋಡಿ ಹೆಚ್ಚು ಹೆಚ್ಚು ಭಿಕ್ಷೆ ಹಾಕುತ್ತಾರೆ. ಮಹಾಕಾಲ್ ಲೋಕ ನಿರ್ಮಾಣದ ನಂತರ ತನ್ನ ಗಳಿಕೆ ಹೆಚ್ಚಾಯಿತು ಎಂದು ಇಂದ್ರಾಬಾಯಿ ಬಹಿರಂಗಪಡಿಸಿದ್ದಾರೆ. ಈ ಹಿಂದೆ ಉಜ್ಜಯಿನಿ ದೇವಸ್ಥಾನಕ್ಕೆ ನಿತ್ಯ 2,500 ಭಕ್ತರು ಭೇಟಿ ನೀಡುತ್ತಿದ್ದರು, ಆದರೆ ಈಗ ಅದು 1.75 ಲಕ್ಷವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.