Hightech Samadhi; ಕೋಲಾರದ ಈ ಎರಡು ಗ್ರಾಮಗಳಲ್ಲಿ ಗಮನಸೆಳೆಯುವ ಹೈಟೆಕ್ ಸಮಾಧಿಗಳು!
ಕೋಲಾರ; ಮೃತ ಹಿರಿಯರಾಗಿ ನಮ್ಮ ಯೋಗ್ಯತೆಗೆ ತಕ್ಕಂತೆ ಸಮಾಧಿಗಳನ್ನು (Samadhi) ನಿರ್ಮಾಣ ಮಾಡುತ್ತೇವೆ. ಆರ್ಥಿಕವಾಗಿ ಸ್ವಂತ ಚೆನ್ನಾಗಿರುವವರು ಸಮಾಧಿಗೆ ಗ್ರಾನೈಟ್ ಕಲ್ಲು ಹಾಕಿಸುತ್ತಾರೆ. ಅಲ್ಲಲ್ಲಿ ಕೆಲವರು ಸಮಾಧಿಯನ್ನೇ ದೇವಸ್ಥಾನದ ರೀತಿಯಲ್ಲಿ ಕಟ್ಟುತ್ತಾರೆ. ಇಂತಹವರು ಸಿಗೋದು ಅಪರೂಪ. ಆದ್ರೆ ಈ ಇಲ್ಲೆರಡು ಗ್ರಾಮಗಳಿವೆ. ಈ ಗ್ರಾಮಗಳಿಗೆ ಭೇಟಿ ಕೊಟ್ಟರೆ, ನಿಮಗೆ ಅಚ್ಚರಿ ಕಾದಿರುತ್ತದೆ. ಯಾಕಂದ್ರೆ ಈ ಗ್ರಾಮಗಳಲ್ಲಿ ಮನೆಗಳು ಎಲ್ಲಾ ಗ್ರಾಮಗಳಲ್ಲಿ ಇರುವಂತೆಯೇ ಇವೆ. ಆದ್ರೆ, ಈ ಗ್ರಾಮಗಳ ಸಮಾಧಿಗಳು ಮಾತ್ರ ಫುಲ್ ಹೈಟೆಕ್… ಇವರು ಮನೆಗಳಿಗೂ ಅಷ್ಟು ದುಡ್ಡ ಖರ್ಚು ಮಾಡಲ್ಲವೇನೋ, ಸಮಾಧಿಗಳಿಗೆ ಲಕ್ಷ ಲಕ್ಷ ಸುರಿಯುತ್ತಾರೆ…
ಇದನ್ನೂ ಓದಿ; longwa village; ಒಂದೇ ಗ್ರಾಮ, ಎರಡು ದೇಶಗಳಿಗೆ ಹಂಚಿಕೆಯಾಗಿದೆ!
ಒಂದೊಂದು ಸಮಾಧಿಗೂ 60-70 ಲಕ್ಷ ರೂ. ಖರ್ಚು!;
ಒಂದೊಂದು ಸಮಾಧಿಗೂ 60-70 ಲಕ್ಷ ರೂ. ಖರ್ಚು!; ಮುಳಬಾಗಿಲು ತಾಲ್ಲೂಕಿನಲ್ಲಿ ಎಂ.ಕೊತ್ತೂರು ಹಾಗೂ ರಾಮಾಪುರ ಎಂಬ ಎರಡು ಗ್ರಾಮಗಳಿವೆ.. ಈ ಎರಡೂ ಗ್ರಾಮಗಳ ಜನರು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಸಮಾಧಿಗಳನ್ನು ನಿರ್ಮಾಣ ಮಾಡುತ್ತಾರೆ. ಬರೋಬ್ಬರಿ ಒಂದೊಂದು ಸಮಾಧಿಗೆ 60-70 ಲಕ್ಷ ರೂಪಾಯಿ ಖರ್ಚು ಮಾಡಿದವರೂ ಇದ್ದಾರೆ. ಸಿನಿಮಾ ನಟರ ಸ್ಮಾರಕಗಳನ್ನು ನಿರ್ಮಾಣ ಮಾಡುತ್ತಾರಲ್ಲ ಆ ರೀತಿಯಲ್ಲಿ ಈಲ್ಲಿ ಸಮಾಧಿಗಳನ್ನು ನಿರ್ಮಾಣ ಮಾಡಲಾಗಿದೆ. ಈ ಭಾಗಕ್ಕೆ ಹೊಸದಾಗಿ ಬರುವವರಿಗೆ ಇವುಗಳನ್ನು ನೋಡಿದರೆ ಅಚ್ಚರಿಯಾಗೋದಂತೂ ಸತ್ಯ.
ಇದನ್ನೂ ಓದಿ; sanskrit village; ಕರ್ನಾಟಕದ ಈ ಗ್ರಾಮದಲ್ಲಿ ಎಲ್ಲರೂ ಸಂಸ್ಕೃತ ಮಾತಾಡ್ತಾರೆ!
ಎರಡೂ ಜೋಡಿ ಗ್ರಾಮಗಳು!;
ಎರಡೂ ಜೋಡಿ ಗ್ರಾಮಗಳು!; ಎಂ.ಕೊತ್ತೂರು ಹಾಗೂ ರಾಮಾಪುರ ಎರಡೂ ಜೋಡಿ ಗ್ರಾಮಗಳು.. ಅಕ್ಕಪಕ್ಕವೇ ಇವೆ.. ಅಂಬ್ಲಿಕಲ್ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಈ ಗ್ರಾಮಗಳ ಜನರು ಸತ್ತವರಿಗಾಗಿ ವಿನೂತನ ಹಾಗೂ ಹೈಟೆಕ್ ರೀತಿಯಲ್ಲಿ ಸಮಾಧಿಗಳನ್ನು ಕಟ್ಟಿಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಇದು ಒಂದು ಸ್ಪರ್ಧೆ ರೀತಿ ಆಗಿಬಿಟ್ಟಿದೆ. ದೇಗುಲ, ಸ್ಮಾರಕಗಳನ್ನೂ ಮೀರಿಸುವ ರೀತಿಯಲ್ಲಿ ಈ ಸಮಾಧಿಗಳನ್ನು ಕಟ್ಟಲಾಗಿದೆ. ಈ ವಿಷಯ ತಿಳಿದು ಸಮಾಧಿಗಳನ್ನು ನೋಡುವುದಕ್ಕಾಗಿಯೇ ಸುತ್ತಮುತ್ತಲ ಜನರು ಬರುತ್ತಿದ್ದಾರೆ.
30ಕ್ಕೂ ಸಮಾಧಿಗಳು ಹೈಟೆಕ್, ಶ್ರೀಮಂತ ಸಮಾಧಿಗಳು!
30ಕ್ಕೂ ಸಮಾಧಿಗಳು ಹೈಟೆಕ್, ಶ್ರೀಮಂತ ಸಮಾಧಿಗಳು!; ಎರಡೂ ಗ್ರಾಮಗಳ ಬಳಿ ಸುಮಾರು 30ಕ್ಕೂ ಹೆಚ್ಚು ಹೈಟೆಕ್ ಸಮಾಧಿಗಳನ್ನು ಕಟ್ಟಲಾಗಿದೆ. ಅದೂ ಕೂಡಾ ಈ ಸಮಾಧಿಗಳು ಒಂದಕ್ಕಿಂತ ಒಂದು ಭಿನ್ನವಾಗಿವೆ. ಒಂದು ಭವ್ಯ ಭಂಗಲೆಯಂತಿದ್ದರೆ, ಇನ್ನೊಂದು ಯಾರದೋ ಸೆಲೆಬ್ರಿಟಿಯ ಸ್ಮಾರಕದಂತಿದೆ, ಇನ್ನೊಂದು ಈಜಿಪ್ಟ್ ಪಿರಮಿಡ್ ರೀತಿ ಕಾಣುತ್ತೆ.. ಮತ್ತೊಂದು ದೇಗುಲದ ಗೋಪುರವನ್ನು ಹೋಲುತ್ತದೆ. ಇವುಗಳಿಗೆ ಒಂದೊಂದಕ್ಕೂ ಕನಿಷ್ಠ 20 ಲಕ್ಷ ರೂಪಾಯಿ ಖರ್ಚು ಮಾಡಲಾಗಿದೆ. ಕೆಲವು ಸಮಾಧಿಗಳಿಗೆ 70 ಲಕ್ಷ ರೂಪಾಯಿಯವರೆಗೂ ಖರ್ಚು ಮಾಡಲಾಗಿದೆಯಂತೆ!.
ಇದನ್ನೂ ಓದಿ; Shoebill Bird; ಡೈನೋಸಾರ್ನಂತೆ ಕಾಣುತ್ತೆ; ಮೊಸಳೆಯನ್ನೇ ತಿನ್ನುತ್ತೆ ಪಕ್ಷಿ..!
ಎಂಜಿಆರ್ ಸಮಾಧಿ ಮಾದರಿಯಲ್ಲಿ ಮುನಿರತ್ನಮ್ಮ ಸಮಾಧಿ!;
ಎಂಜಿಆರ್ ಸಮಾಧಿ ಮಾದರಿಯಲ್ಲಿ ಮುನಿರತ್ನಮ್ಮ ಸಮಾಧಿ!; ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಹಾಗೂ ನಟ ಎಂಜಿಆರ್ಗೆ ವಿಶೇಷವಾದ ಸ್ಮಾರಕ ನಿರ್ಮಾಣ ಮಾಡಲಾಗಿದೆ. ಈಗ ಅದೇ ರೀತಿಯ ಸಮಾಧಿ ಎಂ.ಕೊತ್ತೂರು ಗ್ರಾಮದಲ್ಲಿ ನಿರ್ಮಾಣ ಮಾಡಲಾಗಿದೆ. ಮಳಬಾಗಿಲು ವಿಧಾನಸಭಾ ಚುನಾವಣೆಯಲ್ಲಿ ಸಿಂಗಪೂರ್ ಗೋವಿಂದ್ ಎಂಬುವವರು ಸ್ಪರ್ಧೆ ಮಾಡಿದ್ದರು. ಅವರ ಪತ್ನಿ ಮುನಿರತ್ನಮ್ಮ ಸಮಾಧಿ ಇದು. ಮುನಿರತ್ನಮ್ಮ ಅವರು ತೀರಿಕೊಂಡಾಗ ಅವರ ಮಕ್ಕಳಾದ ವೆಂಕಟೇಶ್, ಸರಸ್ವತಿ, ಭಾಗ್ಯಮ್ಮ ಅವರು ಅಮ್ಮನಿಗೆ ವಿಶೇಷವಾದ ಸಮಾಧಿ ಕಟ್ಟಬೇಕು ಎಂದುಕೊಂಡರು. ಎಂಜಿಆರ್ ಸಮಾಧಿ ನೋಡಿದ್ದ ಅವರು, ಲಕ್ಷ ಲಕ್ಷ ಹಣವನ್ನು ಖರ್ಚು ಮಾಡಿ, ಅದೇ ರೀತಿಯ ಸಮಾಧಿ ನಿರ್ಮಾಣ ಮಾಡಿದ್ದಾರೆ.
ಇನ್ನು ತಾಯಿ ಮುನಿರತ್ನಮ್ಮ ಅವರ ಸಮಾಧಿ ಪಕ್ಕದಲ್ಲಿ ಆಕೆಯ ಸಾಕುಮಗನ ಸಮಾಧಿಯನ್ನೂ ಅದ್ದೂರಿಯಾಗಿ ಕಟ್ಟಲಾಗಿದೆ. ಒಟ್ಟು ಒಂಭತ್ತು ಗೋಪುರಗಳ ನಿರ್ಮಾಣ ಮಾಡಲಾಗಿದ್ದು, ಎರಡೂ ಸಮಾಧಿಗಳ ಮಧ್ಯದಲ್ಲಿ ಕಪ್ಪು ಶಿಲೆಯ ಕಂಬ ನಿಲ್ಲಿಸಿ, ಅದರೆ ಒಳಗೆ ವರ್ಷಪೂರ್ತಿ ದೀಪ ಬೆಳಗುವಂತೆ ನೋಡಿಕೊಳ್ಳಲಾಗಿದೆ. ಈ ಸಮಾಧಿಯ ನಿರ್ವಹಣೆಗಾಗಿಯೇ ಒಂದು ಕುಟುಂಬವನ್ನು ನೇಮಕ ಮಾಡಲಾಗಿದೆ.
ಇದನ್ನೂ ಓದಿ; Seahorse; ಗಂಡಿಗೆ ಹೆರುವುದೇ ಕೆಲಸ; ಇದು ಪುರುಷ ಕಡಲ್ಗುದುರೆಯ ಪ್ರಸವ ವೇದನೆ ಕತೆ..!
ಸಮಾಧಿಗೆ ಹೆಲಿಕಾಪ್ಟರ್ ಮೂಲಕ ಹೂಮಳೆ;
ಸಮಾಧಿಗೆ ಹೆಲಿಕಾಪ್ಟರ್ ಮೂಲಕ ಹೂಮಳೆ; ರಾಮಾಪುರದಲ್ಲಿ ಕೃಷ್ಣಪ್ಪ ಎಂಬುವವರು ಇತ್ತೀಚೆಗೆ ಸಾವನ್ನಪ್ಪಿದ್ದಾರೆ. ಅವರ ಹನ್ನೊಂದನೇ ದಿನದ ತಿಥಿ ಹಿನ್ನೆಲೆಯಲ್ಲಿ ಹೆಲಿಕಾಪ್ಟರ್ ತರಿಸಲಾಗಿತ್ತು. ಹೆಲಿಕಾಪ್ಟರ್ ನಿಂದ ಸಮಾಧಿ ಮೇಲೆ ಹೂಮಳೆ ಸುರಿಸಲಾಯಿತು. ಕೃಷ್ಣಪ್ಪ ಅವರ ಸಮಾಧಿಯನ್ನು ಕೂಡಾ ಅವರ ಮಕ್ಕಳು ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ. ಬಿಳಿ ಮತ್ತು ಕಲ್ಲು ಗ್ರಾನೈಟ್ ಬಳಸಿ ಈ ಸಮಾಧಿ ನಿರ್ಮಾಣ ಮಾಡಲಾಗಿದೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಲಾಗಿದ್ದು ಈ ಸಮಾಧಿ ಆ ಕಡೆ ಬಂದವರನ್ನು ಆಕರ್ಷಿಸುತ್ತಿದೆ.
ಅರ್ಧ ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಿದೆ ಸಮಾಧಿ:
ಅರ್ಧ ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಿದೆ ಸಮಾಧಿ: ಇಲ್ಲಿಯೇ ಇನ್ನೊಂದು ಸಮಾಧಿ ಇದೆ. ಅದನ್ನು ಸುಮಾರು ಅರ್ಧ ಎಕರೆ ಜಾಗದಲ್ಲಿ ನಿರ್ಮಾಣ ಮಾಡಲಾಗಿದೆ. ಸಮಾಧಿಯ ಸುತ್ತಲೂ ಉದ್ಯಾನ ಮಾಡಲಾಗಿದೆ. ಸದಾ ಇದನ್ನು ನಿರ್ವಹಣೆ ಮಾಡಲಾಗುತ್ತದೆ. ಸದಾ ವಿದ್ಯುತ್ ದೀಪಗಗಳು ಇಲ್ಲಿ ಮಿನುಗುತ್ತಿರುತ್ತವೆ. ಇಲ್ಲೂ ಕೂಡಾ ಗ್ರಾನೈಟ್ ಕಲ್ಲಿನಿಂದ ವಿಶೇವಾಗಿ ಸಮಾಧಿ ನಿರ್ಮಾಣ ಮಾಡಲಾಗಿದೆ. ಆ ಕಡೆ, ಈ ಕಡೆ ಎರಡು ಆನೆಗಳನ್ನು ನಿರ್ಮಾಣ ಮಾಡಲಾಗಿದ್ದು, ಅವೆರಡೂ ಸಮಾಧಿಗೆ ಹಾರ ಹಾಕುತ್ತಿರುವ ರೀತಿಯಲ್ಲಿ ನಿರ್ಮಾಣ ಮಾಡಲಾಗಿದೆ.
ಹೀಗೆ ದೇಗುಲದ ರೀತಿ, ಈಜಿಪ್ಟ್ ಪರಿಮಿಡ್ ರೀತಿ, ಸ್ಮಾರಕದ ರೀತಿ, ಉದ್ಯಾವನದ ರೀತಿ ಇಲ್ಲಿ ಸಮಾಧಿಗಳನ್ನು ನಿರ್ಮಾಣ ಮಾಡಲಾಗಿದೆ. ಈ ಸಮಾಧಿಗಳ ನಿರ್ಮಹಣೆಗಾಗಿ ಜನರನ್ನು ಕೆಲಸಕ್ಕೆ ನೇಮಿಸಿಕೊಳ್ಳಲಾಗಿದೆ. ದಿನವೂ ಈ ಸಮಾಧಿಗಳ ನಿರ್ವಹಣೆ ನಡೆಯುತ್ತದೆ.