Cheating; ನಿರ್ಮಲಾ ಸೀತಾರಾಮನ್ ಹೆಸರೇಳಿಕೊಂಡ ವಂಚನೆ; ಲೋನ್ ಕೊಡಿಸ್ತೀನಿ ಅಂತ ಕೋಟಿ ಕೋಟಿ ಲೂಟಿ!
ಬೆಂಗಳೂರು; ಸಮಾಜದಲ್ಲಿ ಮೋಸ ಅನ್ನೋದು ಸಾಮಾನ್ಯ ಅನ್ನೋ ಮಟ್ಟಿಗೆ ಬಂದ್ಬಿಟ್ಟಿದೆ. ಮೋಸ ಹೋಗ್ತೀವಿ ಅನ್ನೋದು ಗೊತ್ತಿದ್ದರೂ ಜನ ಯಾವುದೋ ಆಸೆಯಿಂದ ಹಣ ಕೊಟ್ಟು ಕಳೆದುಕೊಂಡ್ಬಿಡ್ತಾರೆ. ಹೀಗೆ ಜನರಿಗೆ ಪಂಗನಾಮ ಹಾಕಿ ಕೋಟಿ ಕೋಟಿ ಲೂಟಿ ಮಾಡಿದವರ ಕತೆಗಳನ್ನು ನಾವು ಸಾಕಷ್ಟು ನೋಡಿದ್ದೇವೆ. ಇಲ್ಲೊಬ್ಬಳು ಖತರ್ನಾಕ್ ಲೇಡಿ ಕೂಡಾ ಅದೇ ಕೆಲಸ ಮಾಡಿದ್ದಾರೆ. ಕೇಂದ್ರ ಸಚಿವೆಯ ಹೆಸರೇಳಿಕೊಂಡು ಕೋಟಿ ಕೋಟಿ ಲೂಟಿ ಮಾಡಿದ್ದಾರೆ.
ನಿರ್ಮಲಾ ಸೀತಾರಾಮನ್ ಹೆಸ್ರಲ್ಲಿ ಜನರಿಗೆ ಪಂಗನಾಮ
ಹೆಸರು ಪವಿತ್ರಾ.. ತಮಿಳುನಾಡು ಮೂಲದ ಈಕೆ ಬೆಂಗಳೂರಿನ ಹೊರವಲಯದ ಆನೇಕಲ್ ತಾಲ್ಲೂಕಿನಲ್ಲಿ ಲೋನ್ ಕೊಡಿಸೋದಾಗಿ ಜನರನ್ನು ನಂಬಿಸಿದ್ದಾಳೆ. ಅದಕ್ಕೆ ಆಕೆ ಬಳಿಸಿಕೊಂಡಿರೋದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು. ಕೇಂದ್ರದಿಂದ ಕೋಟಿ ಕೋಟಿ ಹಣ ಬರುತ್ತಿದೆ. ನಿಮಗೆ ಸಾಲ ಕೊಡುತ್ತೇನೆ ಎಂದು ಹೇಳಿಕೊಂಡು ಜನರಿಂದ ಡೆಪಾಸಿಟ್ ಕಟ್ಟಿಸಿಕೊಂಡು ಪಂಗನಾಮ ಹಾಕಿದ್ದಾಳೆ.
ಇದನ್ನೂ ಓದಿ; Rashi Phala; ಇಂದಿನ ರಾಶಿಫಲ ಹೇಗಿದೆ..?; ಈ ರಾಶಿಯವರಿಗೆ ಇವತ್ತು ಬಂಪರ್!
ಬ್ಲೂ ವಿಂಗ್ಸ್ ಹೆಸರಿನ ಟ್ರಸ್ಟ್ ಮಾಡಿದ್ದ ಪವಿತ್ರಾ
ಆರೋಪಿ ಪವಿತ್ರಾ ಬ್ಲೂ ವಿಂಗ್ಸ್ ಎಂಬ ಟ್ರಸ್ಟ್ ಮಾಡಿಕೊಂಡಿದ್ದಳು. ಈ ಟ್ರಸ್ಟ್ಗೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹಣ ಮಂಜೂರು ಮಾಡಿದ್ದಾರೆ. ರಿಸರ್ವ್ ಬ್ಯಾಂಕ್ನಿಂದ ನಮ್ಮ ಟ್ರಸ್ಟ್ಗೆ 17 ಕೋಟಿ ರೂಪಾಯಿ ಬಂದಿದೆ ಎಂದು ಜನರ ಬಳಿ ಹೇಳಿಕೊಂಡಿದ್ದಾಳೆ. ನಿರ್ಮಲಾ ಸೀತಾರಾಮ್ ಅವರು ಕಳುಹಿಸಿದ್ದಾರೆನ್ನಲಾದ ನಕಲಿ ಪತ್ರವನ್ನು ಕೂಡಾ ತೋರಿಸಿದ್ದಾಳೆ. ಇದರಿಂದಾಗಿ ಅಮಾಯಕ ಜನರೆಲ್ಲಾ ನಂಬಿ ಹಣ ಕಟ್ಟಿದ್ದಾರೆ.
ಒಬ್ಬೊಬ್ಬರಿಗೆ 10 ಲಕ್ಷ ಸಾಲ, 5 ಲಕ್ಷ ಸಬ್ಸಿಡಿ..!
ಒಬ್ಬೊಬ್ಬರಿಗೆ ಹತ್ತು ಲಕ್ಷ ರೂಪಾಯಿ ಲೋನ್ ಕೊಡಿಸುತ್ತೇವೆ. ಇದು ಕೇಂದ್ರ ಸರ್ಕಾರದಿಂದ ಕೊಡುತ್ತಿರುವ ಲೋನ್. ಹೀಗಾಗಿ ಇದರಲ್ಲಿ ಐದು ಲಕ್ಷ ಸಬ್ಸಿಡಿ ಸಿಗುತ್ತದೆ. ನೀವು ಐದು ಲಕ್ಷ ರೂಪಾಯಿ ಅಷ್ಟೇ ವಾಪಸ್ ಕಟ್ಟಬೇಕು ಎಂದು ಆರೋಪಿ ಪವಿತ್ರಾ ಜನರನ್ನು ನಂಬಿಸಿದ್ದಾಳೆ. ಅನಂತರ ಲೋನ್ ಬೇಕು ಎನ್ನುವವರು ಡೆಪಾಸಿಟ್ ಕಟ್ಟಬೇಕು ಎಂದು ಕಥೆ ಕಟ್ಟಿದ್ದಾಳೆ. ಹತ್ತು ಲಕ್ಷ ಲೋನ್ ಹಾಗೂ ಐದು ಲಕ್ಷ ಸಬ್ಸಡಿ ಬರುವ ಆಸೆಯಿಂದ ಜನರು ಡೆಪಾಸಿಟ್ ಕಟ್ಟಿದ್ದಾರೆ. ಕೆಲವರು ಹಣ ಇಲ್ಲದಿದ್ದರೂ ಸಾಲ ಮಾಡಿ ಕೊಟ್ಟಿದ್ದಾರೆ.
ಇದನ್ನೂ ಓದಿ; Pre wedding Shoot; ಆಪರೇಷನ್ ಥಿಯೇಟರ್ನಲ್ಲಿ ಪ್ರೀ ವೆಡ್ಡಿಂಗ್ ಶೂಟ್; ವೈದ್ಯ ಕೆಲಸದಿಂದ ವಜಾ
ತಿಂಗಳುಗಳು ಕಳೆದರೂ ಬಾರದ ಲೋನ್
ಹೀಗೆ ಡೆಪಾಸಿಟ್ ಕಟ್ಟಿ ತಿಂಗಳುಗಳು ಕಳೆದ ಲೋನ್ ಬಂದಿಲ್ಲ.. ಆರೋಪಿ ಪವಿತ್ರಾಳನ್ನು ಭೇಟಿಯಾಗಿ ಕೇಳಿದರೂ ಏನೇನೋ ಸಬೂಬು ಹೇಳೋಕೆ ಶುರು ಮಾಡಿದ್ದಾಳೆ. ಇದರಿಂದಾಗಿ ಜನರಿಗೆ ಮೋಸ ಹೋಗಿರುವುದು ಖಾತ್ರಿಯಾಗಿದೆ. ಹಣ ಕಳೆದುಕೊಂಡ ನೂರಾರು ಮಂದಿ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಆರೋಪಿ ಚಂದಾಪುರ, ಅತ್ತಿಬೆಲೆ, ಹೊಸೂರು, ಧರ್ಮಪುರಿ ಸೇರಿದಂತೆ ಹಲವು ಕಡೆಗಳಲ್ಲಿ ವಂಚನೆ ನಡೆಸಿದ್ದಾಳೆ. ಈ ಬಗ್ಗೆ ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಹಲವರು ಕೇಸ್ಗಳನ್ನು ದಾಖಲು ಮಾಡಿದ್ದಾರೆ.