HealthInternational

King Charls-3; ಬ್ರಿಟೀಷ್‌ ಕಿಂಗ್ ಚಾರ್ಲ್ಸ್ -3ಗೆ ಕ್ಯಾನ್ಸರ್‌; ಈಗ ಅವರ ಸ್ಥಿತಿ ಹೇಗಿದೆ..?

ಇಂಗ್ಲೆಂಡ್‌; ಕಿಂಗ್ ಚಾರ್ಲ್ಸ್ -3  (King Charls-3) ಕ್ಯಾನ್ಸರ್ ನಿಂದ  (Cancer) ಬಳಲುತ್ತಿದ್ದಾರೆ ಎಂದು ಬ್ರಿಟಿಷ್ ರಾಜಮನೆತನದ ವಕ್ತಾರರು (British Empaire) ಖಚಿತಪಡಿಸಿದ್ದಾರೆ. ವೈದ್ಯರು ಇತ್ತೀಚೆಗೆ ಕಿಂಗ್ ಚಾರ್ಲ್ಸ್ -3  (King Charls-3)  ಆರೋಗ್ಯ ತಪಾಸಣೆ ನಡೆಸಿದ್ದರು. ಈ ವೇಳೆ ಅವರಲ್ಲಿ ಪ್ರಾಸ್ಟೇಟ್ ಕ್ಯಾನ್ಸರ್ ಪತ್ತೆಯಾಗಿದೆ ಎನ್ನಲಾಗಿತ್ತು. ಆದ್ರೆ ಈ ಬಗ್ಗೆ ರಾಜಮನೆತನದ ವಕ್ತಾರರೇ ಮಾಹಿತಿ ನೀಡಿದ್ದು, ಇದು ಪ್ರಾಸ್ಟೇಟ್ ಕ್ಯಾನ್ಸರ್ ಅಲ್ಲ ದೃಢಪಡಿಸಿದ್ದಾರೆ.

ಕಿಂಗ್ ಚಾರ್ಲ್ಸ್ -3 ಬಂದಿರುವ ಕ್ಯಾನ್ಸರ್‌ ಯಾವುದು..?

ಕಿಂಗ್ ಚಾರ್ಲ್ಸ್ -3  (King Charls-3) ಅವರಿಗೆ ಯಾವ ರೀತಿಯ ಕ್ಯಾನ್ಸರ್ ಮತ್ತು ಅದು ದೇಹದ ಯಾವ ಭಾಗದಲ್ಲಿದೆ ಎಂಬುದರ ಬಗ್ಗೆ ಇನ್ನೂ ಸ್ಪಷ್ಟವಾದ ಮಾಹಿತಿ ಸಿಕ್ಕಿಲ್ಲ. ಕಿಂಗ್ ಚಾರ್ಲ್ಸ್ ಅವರಿಗೆ ಸೋಮವಾರ ಕ್ಯಾನ್ಸರ್ ಚಿಕಿತ್ಸೆ ಪ್ರಾರಂಭಿಸಲಾಗಿದೆ. ವಿಶೇಷ ಕ್ಯಾನ್ಸರ್‌ ತಜ್ಞರು, ಅವರಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಆದ್ರೆ ಕಿಂಗ್ ಚಾರ್ಲ್ಸ್ -3  (King Charls-3) ಆರೋಗ್ಯ ಸ್ಥಿತಿ ಹೇಗಿದೆ. ಕ್ಯಾನ್ಸರ್‌ ಯಾವ ಹಂತದಲ್ಲಿದೆ ಅನ್ನೋದು ಇನ್ನೂ ಗೊತ್ತಾಗಿಲ್ಲ.

ಶೀಘ್ರದಲ್ಲೇ ಕರ್ತವ್ಯ ಶುರು ಮಾಡುತ್ತಾರೆ ಎಂದ ವೈದ್ಯರು

ವೈದ್ಯರು ಹೇಳುವ ಪ್ರಕಾರ ರಾಜ ಚಾರ್ಲ್ಸ್ ಪ್ರಸ್ತುತ ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಜೊತೆಗೆ ಚೇತರಿಕೆ ಕೂಡಾ ಕಂಡಿದ್ದಾರೆ. ಆದಷ್ಟು ಬೇಗ ತಮ್ಮ ಕರ್ತವ್ಯವನ್ನು ಪುನರಾರಂಭಿಸಲಿದ್ದಾರೆ ಎಂದು ರಾಜಮನೆತನದ ವಕ್ತಾರರು ತಿಳಿಸಿದ್ದಾರೆ. ಸದ್ಯಕ್ಕೆ ಅವರು ಅಧಿಕೃತ ಕರ್ತವ್ಯಗಳಿಂದ ದೂರವಿದ್ದು, ಅವರ ಸ್ಥಾನಕ್ಕೆ ರಾಜಮನೆತನದ ಹಿರಿಯ ಸದಸ್ಯರು ಬರಲಿದ್ದಾರೆ ಎಂದು ಹೇಳಲಾಗುತ್ತಿದೆ.

ಅವರ ಸ್ಥಿತಿಗತಿ ಮತ್ತು ಅವರು ಚೇತರಿಸಿಕೊಳ್ಳಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂಬುದರ ಕುರಿತು ಯಾವುದೇ ಮಾಹಿತಿ ಹೊರಬಿದ್ದಿಲ್ಲ. ಕಿಂಗ್ ಚಾರ್ಲ್ಸ್ -3  (King Charls-3) ಅವರಿಗೆ 75 ವರ್ಷ ವಯಸ್ಸಾಗಿದೆ. ಪ್ರಸ್ತುತ ‘ಹೊರ ರೋಗಿ’ಯಾಗಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಅರಮನೆಗೇ ಬಂದು ವೈದ್ಯರು ಅವರಿಗೆ ಚಿಕಿತ್ಸೆ ನೀಡುತ್ತಿದ್ದಾರೆ.

ಅರಮನೆಯಲ್ಲಿ ನಡೆಯುವ ಅಧಿಕೃತ ದಾಖಲೆಗಳು ಮತ್ತು ಸಣ್ಣ ಖಾಸಗಿ ಸಭೆಗಳಿಗೆ ಸಹಿ ಹಾಕುವ ಕಾರ್ಯಗಳನ್ನು ಕಿಂಗ್ ಚಾರ್ಲ್ಸ್ -3  (King Charls-3)  ಅವರು ಮಾಡುತ್ತಿದ್ದಾರೆ ಎಂದು ವಕ್ತಾರರು ತಿಳಿಸಿದ್ದಾರೆ.

 

Share Post