CrimeDistricts

ಅಕ್ರಮ ಸಿಮ್‌ಗಳೊಂದಿಗೆ ಬೆಂಗಳೂರಿಗೆ ಹೊರಟಿದ್ದ ಯುವಕರು; ಪೊಲೀಸರ ವಿಚಾರಣೆಗೆ ಕಾರಣ..?

ಮಂಗಳೂರು; ಅಕ್ರಮ ಸಿಮ್‌ಗಳನ್ನು ತೆಗೆದುಕೊಂಡು ಬೆಂಗಳೂರಿನತ್ತ ಹೊರಟಿದ್ದ ನಾಲ್ವರ ಗ್ಯಾಂಗ್‌ನ್ನು ಪೊಲೀಸರು ಬಂಧಿಸಿದ್ದಾರೆ. ಅದ್ಯಾವ ಕೆಲಸಕ್ಕೆ ಅವರು ಬೆಂಗಳೂರಿಗೆ ಹೊರಟಿದ್ದರೋ ಗೊತ್ತಿಲ್ಲ. ಆದ್ರೆ ಅಕ್ರಮ ಮೊಬೈಲ್‌ ಸಿಮ್‌ಗಳನ್ನು ತೆಗೆದುಕೊಂಡು ಹೊರಟಿದ್ದರಿಂದ ಪೊಲೀಸರು ತೀವ್ರ ಅನುಮಾನ ಮೂಡಿದೆ, ಈ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಗಳ ವಿಚಾರಣೆ ನಡೆಸುತ್ತಿದ್ದಾರೆ.

ನಾಲ್ವರೂ ಕೂಡಾ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲ್ಲೂಕಿನವರು ಎಂದು ತಿಳಿದುಬಂದಿದೆ. ಪಾಂಡವಕಲ್ಲು ನಿವಾಸಿ ಅಕ್ಬರ್‌ ಅಲಿ, ಬೆಳ್ತಂಗಡಿಯ ಸಂಜಯ್‌ ನಗರದ ಮೊಹಮದ್‌ ಮುಸ್ತಫಾ, ಗುಂಪಕಲ್ಲಿನ ರಮೀಝ್‌,  ಪಡಂಗಡಿಯ ನಿವಾಸಿ ಮಹಮದ್‌ ಸಾಧಿಕ್‌ ಹಾಗೂ ಕಲ್ಮಂಜ ನಿಡಿಗಲ್‌ ನಿವಾಸಿ ಅಪ್ತಾಪ್ತ ಬಾಲಕ ಬಂಧಿತರು.
ಇದರಲ್ಲಿ ಅಕ್ಬರ್‌ ಅಲಿ ಎಂಬಾತ ದುಬೈನಲ್ಲಿ ಎರಡು ವರ್ಷದಿಂದ ನೆಲೆಸಿದ್ದ. ನಾಲ್ಕು ತಿಂಗಳ ಹಿಂದೆ ತವರಿಗೆ ಬಂದಿದ್ದ ಆತ, ಹುಡುಗರ ಗುಂಪು ಕಟ್ಟಿದ್ದ. ಈತ ತವರಿಗೆ ಬರುವ ಮೊದಲೇ ತನ್ನ ಸ್ನೇಹಿತರಿಗೆ ಹೇಳಿ ನಕಲಿ ದಾಖಲೆ ನೀಡಿ ಅಕ್ರಮವಾಗಿ ಸಿಮ್‌ಗಳನ್ನು ಖರೀದಿ ಮಾಡಿಸಿದ್ದ ಎನ್ನಲಾಗಿದೆ. ಈ ಸಿಮ್‌ಗಳನ್ನು ತೆಗೆದುಕೊಂಡು ಎಲ್ಲರೂ ಬೆಂಗಳೂರಿಗೆ ಹೊರಟಿದ್ದರು. ಅವರು ಕೆಲಸಕ್ಕೆ ಹೊರಟಿದ್ದರೆ, ಇಲ್ಲವೆ ಯಾವುದಾದರೂ ದುಷ್ಕೃತ್ಯ ನಡೆಸಲು ಹೋಗುತ್ತಿದ್ದರೆ ಎಂಬುದರ ಬಗ್ಗೆ ಅನುಮಾನವಿದೆ. ಈ ಹಿನ್ನೆಲೆಯಲ್ಲಿ ಕಳೆದ ನಾಲ್ಕು ದಿನಗಳಿಂದ ಪೊಲೀಸರು ನಾಲ್ವರನ್ನೂ ತೀವ್ರ ವಿಚಾರನೆಗೊಳಪಡಿಸಿದ್ದಾರೆ.

 

Share Post