LifestyleNational

Bedroom Vastu; ಬೆಡ್‌ ರೂಮ್‌ನಲ್ಲಿ ಈ ತಪ್ಪು ಮಾಡ್ತಿದ್ದೀರಾ..?; ಹಾಗಾದ್ರೆ ನಿಮಗೆ ಸಂಕಷ್ಟ ತಪ್ಪಲ್ಲ!

ಬೆಂಗಳೂರು; ಆಸ್ತಿ, ಅಂತಸ್ತು ಎಲ್ಲಾ ಇರುತ್ತದೆ.. ಹಣಕಾಸಿಗೂ ಯಾವುದೇ ತೊಂದರೆ ಇರೋದಿಲ್ಲ. ಗಂಡ-ಹೆಂಡತಿ ಇಬ್ಬರ ನಡುವೆಯೂ ಪ್ರೀತಿ ವಾತ್ಸಲ್ಯ ಇರುತ್ತದೆ. ಆದರೂ ಸಣ್ಣಪುಟ್ಟ ಕಾರಣಗಳಿಗೆಲ್ಲಾ ಇಬ್ಬರ ನಡುವೆ ಜಗಳಗಳಾಗುತ್ತಿರುತ್ತವೆ. ಅದರಲ್ಲೂ ಕೂಡಾ ಬೆಡ್‌ ರೂಮಿನಿಂದಲೇ ಇವರ ಜಗಳಗಳು ಶುರುವಾಗುತ್ತಿರುತ್ತವೆ. ನಿಮ್ಮ ಮನೆಯಲ್ಲೂ ಹೀಗೆ ನಡೆಯುತ್ತಿದ್ದರೆ, ನೀವು ಮೊದಲು ನಿಮ್ಮ ಬೆಡ್‌ ರೂಮ್‌ ವಾಸ್ತು ಸರಿ ಇದೆಯಾ ಎಂದು ನೋಡಿಕೊಳ್ಳಬೇಕು. ಬೆಡ್‌ ರೂಮ್‌ನಲ್ಲಿ ನೀವು ಏನೇನು ವಸ್ತುಗಳನ್ನು ಇಟ್ಟಿದ್ದೀರಿ..? ನಿಮ್ಮ ಬೆಡ್‌ ಯಾವ ಮೂಲೆಯಲ್ಲಿದೆ..? ಹೀಗೆ ಎಲ್ಲಾ ಅಂಶಗಳೂ ಇಲ್ಲಿ ಪ್ರಮುಖವಾಗುತ್ತವೆ.

ನಿಮ್ಮ ಮನೆಯಲ್ಲಿ ನಕಾರಾತ್ಮಕ ಶಕ್ತಿ ತುಂಬಿದೆಯಾ..?

ಎಲ್ಲವೂ ಇದ್ದರೂ ಕೂಡಾ ಮನೆಯಲ್ಲಿ ಅಶಾಂತಿ ನೆಲೆಸಿರುತ್ತದೆ. ಸಣ್ಣಪುಟ್ಟದಕ್ಕೆಲ್ಲಾ ಗಂಡ-ಹೆಂಡತಿ ನಡುವೆ ಜಗಳಗಳು ನಡೆಯುತ್ತಿರುತ್ತವೆ. ಮಾತು ಮಾತಿಗೂ ವಾದಗಳು ನಡೆಯುತ್ತವೆ. ಹೀಗೇನಾದರೂ ನಿಮ್ಮ ಮನೆಯಲ್ಲೂ ನಡೆಯುತ್ತಿದ್ದರೆ ಅದಕ್ಕೆ ನಿಮ್ಮ ಮನೆಯಲ್ಲಿನ ನಕಾರಾತ್ಮಕ ಶಕ್ತಿಯೇ ಕಾರಣ ಅನ್ನುತ್ತೆ ವಾಸ್ತು ಶಾಸ್ತ್ರ. ಮನೆಯಲ್ಲಿ ಆವರಿಸಿರುವ ನಕಾರಾತ್ಮಕ ಶಕ್ತಿಯನ್ನು ದೂರ ಮಾಡದೇ ಹೋದರೆ ನೀವು ಎಷ್ಟೇ ಸಿರಿವಂತರಾಗಿದ್ದರೂ, ಕಾಲಕ್ರಮೇಣ ನಿಮ್ಮನ್ನು ಬಡತನಕ್ಕೆ ದೂಡಿಬಿಡುತ್ತದೆ.

ಬೆಡ್‌ ರೂಮ್‌ ನಲ್ಲಿನ ವಾಸ್ತುದೋಷವೇ ದಂಪತಿ ನಡುವಿನ ಜಗಳಕ್ಕೆ ಕಾರಣ!

ಮನೆಯಲ್ಲಿ ದಂಪತಿ ನಡುವೆ ಯಾವಾಗಲೂ ಜಗಳಗಳಾಗುತ್ತಿವೆ ಅಂದ್ರೆ ಅದಕ್ಕೆ ಬೆಡ್‌ ರೂಮ್‌ನಲ್ಲಿನ ವಾಸ್ತು ದೋಷವೇ ಕಾರಣ ಅಂತಾರೆ ಪ್ರತಿಷ್ಠಿತ ವಾಸ್ತು ತಜ್ಞರು. ಮನೆಯ ಯಜಮಾನರು ಮಲಗುವ ಕೋಣೆ ವಾಸ್ತು ಪ್ರಕಾರವಾಗಿದ್ದರೆ ಮಾತ್ರ ಸಂತೋಷ ಇರುತ್ತದೆ. ಆದ್ರೆ ವಾಸ್ತು ಮೀರಿ ಬೆಡ್‌ ರೂಮ್‌ ಇದ್ದರೆ ಜಗಳ ಗ್ಯಾರೆಂಟಿಯಂತೆ.

ಬೆಡ್‌ರೂಮ್‌ನಲ್ಲಿ ಮೊದಲು ಈ ವಸ್ತುಗಳನ್ನ ತೆಗೆದುಬಿಡಿ!

ಕೆಲವರು ಬೆಡ್‌ ರೂಮ್‌ ಅನ್ನೇ ಕೆಲಸದ ಕೊಠಡಿಯಾಗಿಯೂ ಬದಲಾಯಿಸಿಕೊಂಡಿರುತ್ತಾರೆ. ಇತ್ತೀಚೆಗೆ ವರ್ಕ್‌ ಫ್ರಂ ಹೋಮ್‌ ಜಾಸ್ತಿಯಾಗಿದೆ. ಮನೆಯಿಂದಲೇ ಕೆಲಸ ಮಾಡುವವರು ಬೆಡ್‌ ರೂಮ್‌ನಲ್ಲಿ ಕುಳಿತೇ ಕೆಲಸ ಮಾಡುತ್ತಾರೆ. ಇದು ತಪ್ಪು ಎನ್ನುತ್ತೆ ವಾಸ್ತು ಶಾಸ್ತ್ರ.

ಬೆಡ್‌ ರೂಮ್‌ನಲ್ಲಿ ಕಂಪ್ಯೂಟರ್‌ಗಳು, ಲ್ಯಾಪ್‌ಟಾಪ್‌ಗಳು, ಟಿವಿಗಳು ಸೇರಿದಂತೆ ಯಾವುದೇ ಎಲೆಕ್ಟ್ರಾನಿಕ್‌ ವಸ್ತುಗಳನ್ನು ಇಡಬಾರದು. ರಾತ್ರಿ ಮಲಗುವಾಗ ಮೊಬೈಲ್‌ ನ್ನು ಕೂಡಾ ದೂರ ಇಟ್ಟರೆ ಒಳ್ಳೆಯದು ಅಂತಾರೆ ವಾಸ್ತು ತಜ್ಞರು. ಹೀಗಾಗಿ, ಬೆಡ್‌ರೂಮ್‌ನಲ್ಲಿ ಎಲೆಕ್ಟ್ರಾನಿಕ್‌ ವಸ್ತುಗಳಿಂದ ದೂರ ಇದ್ದು ಸಂಗಾತಿಗೆ ಹತ್ತಿರವಾದರೆ ಇಬ್ಬರ ನಡುವೆ ಜಗಳಗಳೇ ಬರೋದಿಲ್ಲವಂತೆ.

ದೇವರ ಫೋಟೋಗಳು ಕೂಡಾ ಬೇಡವೇ ಬೇಡ!

ಬೆಡ್‌ ರೂಮ್‌ನಲ್ಲಿ ಹಿಂಸೆ ಹಾಗೂ ಯುದ್ಧವನ್ನು ಬಿಂಬಿಸುವ ಯಾವುದೇ ಫೋಟೋಗಳನ್ನು ಇಡಬಾರದು. ಅಷ್ಟೇ ಏಕೆ ಮಲಗುವ ಕೋಣೆಯಲ್ಲಿ ದೇವರ ಫೋಟೋಗಳನ್ನೂ ಇಡಬಾರದು ಅಂತಾರೆ ವಾಸ್ತು ತಜ್ಞರು. ಅದರಲ್ಲೂ ದೇವತೆಗಳ ಫೋಟೋಗಳು ಬೇಡವೇ ಬೇಡವಂತೆ!. ಇದರ ಬದಲಾಗಿ ರೊಮ್ಯಾಂಟಿಕ್‌ ಫೀಲ್‌ ಇರುವ ಫೋಟೋಗಳನ್ನು ಇಟ್ಟರೆ, ದಂಪತಿಯ ನಡುವೆ ಅನ್ಯೋನ್ಯತೆ ಬೆಳೆಯುತ್ತದಂತೆ.!

ಕನ್ನಡಿ ಬೇಡ, ಒಂದೇ ಹಾಸಿಗೆ ಸಾಕು!

ಮಲಗುವ ಕೊಠಡಿಗಳಲ್ಲಿ ಕನ್ನಡಿ ಇಡಬಾರದು ಎಂದೂ ವಾಸ್ತು ಶಾಸ್ತ್ರ ಹೇಳುತ್ತೆ. ಅದರಲ್ಲೂ ಹಾಸಿಗೆ ಎದುರಿಗೆ ಕನ್ನಡಿಯನ್ನೂ ಯಾವ ಕಾರಣಕ್ಕೂ ಇಡಬಾರದಂತೆ. ಇನ್ನೊಂದು ವಿಚಾರ ಏನು ಅಂದ್ರೆ ಮಲಗುವ ಕೊಠಡಿಯಲ್ಲಿ ಒಂದೇ ಹಾಸಿಗೆ ಇರಬೇಕು. ಎರಡು, ಮೂರು ಹಾಸಿಗೆಗಗಳಿರಬಾರದು. ಹಾಗಿದ್ದರೂ ಕೂಡಾ ದಂಪತಿ ನಡುವೆ ಮನಸ್ತಾಪಗಳಾಗುತ್ತವಂತೆ..!

Share Post