CrimeDistricts

ಇವರು ಗೂಗಲ್‌ ಪೇ ದರೋಡೆಕೋರರು..!; ಲಾರಿ ಅಡ್ಡಗಟ್ಟಿ ಅವರು ಮಾಡಿದ್ದೇನು..?

ಮೈಸೂರು; ಈಗ ಭಿಕ್ಷುಕರು ಕೂಡಾ ಕ್ಯೂಆರ್‌ ಕೋಡ್‌ ಇಟ್ಟುಕೊಂಡು ಭಿಕ್ಷೆ ಬೇಡುತ್ತಿದ್ದಾರೆ. ಚಿಲ್ಲರೆ ಇಲ್ಲ ಅಂದರೆ, ಆನ್‌ಲೈನ್‌ ಟ್ರಾನ್ಸ್‌ಫರ್‌ ಮಾಡಿ ಎಂದು ಕ್ಯೂಆರ್‌ ಕೋಡ್‌ ತೋರಿಸುತ್ತಿದ್ದಾರೆ. ಇನ್ನು ದೇಗುಲಗಳಲ್ಲಿ ಕೂಡಾ ಭಕ್ತರಿಗೆ ಅನುಕೂಲವಾಗಲೀ ಅಂತ ಕಾಣಿಕೆಯನ್ನು ಆನ್‌ಲೈನ್‌ ಮೂಲಕ ಪಾವತಿ ಮಾಡೋದಕ್ಕೆ ಅವಕಾಶ ನೀಡಲಾಗಿದೆ. ಇದೆಲ್ಲಾ ಒಳ್ಳೆಯ ಬೆಳವಣಿಗೆಯೇ. ಆದ್ರೆ, ಈ ಆನ್‌ಲೈನ್‌ ವ್ಯವಹಾರವನ್ನು ಕೆಟ್ಟದಕ್ಕೂ ಕೆಲವರು ಬಳಸಿಕೊಳ್ಳುತ್ತಿದ್ದಾರೆ. ಇದಕ್ಕೊಂದು ಉದಾಹರಣೆ ಮೈಸೂರಿನ ಹೆಚ್‌ಡಿ ಕೋಟಿ ಬಳಿ ನಡೆದ ದರೋಡೆ ಪ್ರಕರಣ.

ಹೆಚ್‌.ಡಿ.ಕೋಟೆಯ ಮಾನಂದವಾಡಿ ಮುಖ್ಯರಸ್ತೆಯಲ್ಲಿ ದರೋಡೆಕೋರರು ಲಾರಿಯೊಂದರನ್ನು ಅಡ್ಡಗಟ್ಟಿದ್ದು, ಲಾರಿ ಚಾಲಕನಿಂದ ದರೋಡೆ ಮಾಡಿದ್ದರು. ಲಾರಿ ಚಾಲಕ ಹಣ ಇಲ್ಲ ಎಂದಾಗ, ಗೂಗಲ್‌ ಪೇ ಮಾಡು ಎಂದು ಹೇಳಿ, ಹಣವನ್ನು ಗೂಗಲ್‌ ಪೇ ಮಾಡಿಸಿಕೊಂಡಿದ್ದರು.

ಇದರಿಂದ ನಾವು ಸಿಕ್ಕಿಬೀಳುತ್ತೇವೆ ಅನ್ನೋದು ದರೋಡೆಕೋರರಿಗೆ ಗೊತ್ತಿರಲಿಲ್ಲ. ಪೊಲೀಸರು ಹಣ ಯಾರ ಖಾತೆಗೆ ವರ್ಗಾವಣೆಯಾಗಿದೆ ಎಂದು ಪತ್ತೆ ಹಚ್ಚಿ ಕಾರ್ಯಾಚರಣೆ ನಡೆಸಿದ್ದಾರೆ. ಇದರಿಂದಾಗಿ ಹೆಚ್.ಡಿ.ಕೋಟೆ ಕೋಳಗಾಲದ ಇಬ್ಬರು ಯುವಕರು ಸಿಕ್ಕಿಬಿದ್ದಿದ್ದಾರೆ. ಮತ್ತಿಬ್ಬರು ಪರಾರಿಯಾಗಿದ್ದು, ಅವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.

 

Share Post