ಪ್ರಯಾಗ್‌ರಾಜ್ ಬಿಜೆಪಿ ಸಂಸದೆಗೆ 6 ತಿಂಗಳ ಜೈಲು ಶಿಕ್ಷೆ; ಕೇಸ್ ಯಾವುದು ಗೊತ್ತಾ..?
ಪ್ರಯಾಗ್‌ರಾಜ್; ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪ ಎದುರಿಸುತ್ತಿದ್ದ ಪ್ರಯಾಗ್‌ರಾಜ್ ಬಿಜೆಪಿ ಸಂಸದರೆ ರೀಟಾ ಬಹುಗುಣ ಜೋಷಿ ಅವರಿಗೆ ಕೋರ್ಟ್ ಆರು ತಿಂಗಳ ಜೈಲು ಶಿಕ್ಷೆ ಹಾಗೂ ಒಂದು ಸಾವಿರ ರೂಪಾಯಿ ದಂಡ ವಿಧಿಸಿದೆ. ಆದ್ರೆ ಶಿಕ್ಷ ವಿಧಿಸಿದ ನಂತರ, ರೀಟಾ ಸಲ್ಲಿಸಿದ ಜಾಮೀನು ಅರ್ಜಿ ಸ್ವೀಕರಿಸಿರುವ ಕೋರ್ಟ್, ಅವರಿಗೆ ಜಾಮೀನು ಮಂಜೂರು ಮಾಡಿದೆ. ಈ ಹಿನ್ನೆಲೆಯಲ್ಲಿ ರೀಟಾ ಬಹುಗುಣ ಜೋಷಿಯವರು ಜೈಲಿಗೆ ಹೋಗುವುದರಿಂದ ತಪ್ಪಿಸಿಕೊಂಡಿದ್ದಾರೆ.
2012ರಲ್ಲಿ ನಡೆದ ವಿಧಾನಸಭಾ ಚುನಾವಣೆ ವೇಳೆ ಸಂಸದೆ ರೀಟಾ ಬಹುಗುಣ ಜೋಶಿಯವರು ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಬಗ್ಗೆ ಚುನಾವಣಾ ಆಯೋಗ ದೂರು ದಾಖಲಿಸಿಕೊಂಡಿತ್ತು. ಜನಪ್ರತಿನಿಧಿಗಳ ಕೋರ್ಟ್‌ನಲ್ಲಿ ವಿಚಾರಣೆ ನಡೆದಿತ್ತು. ನ್ಯಾಯಾಧೀಶ ಅಂಬರೀಶ್ ಶ್ರೀವಾಸ್ತವ ಅವರು ತೀರ್ಪು ಪ್ರಕಟಿಸಿದ್ದಾರೆ. ಇದರ ಜೊತೆಗೆ ರೀಟಾ ಅವರಿಗೆ ಜಾಮೀನು ಕೂಡಾ ಮಂಜೂರು ಮಾಡಲಾಗಿದೆ.
2012ರಲ್ಲಿ ರೀಟಾ ಬಹುಗುಣ ಜೋಶಿಯವರು ಕಾಂಗ್ರೆಸ್ ಪಕ್ಷದಲ್ಲಿದ್ದರು. ಲಕ್ನೋ ಕ್ಯಾಂಟ್ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ದರು. 2012ರ ಫೆಬ್ರವರಿ 17ರಂದು ಬಹಿರಂಗ ಸಭೆ ನಡೆದಿತ್ತು. ಅಂದೇ ಬಹಿರಂಗ ಪ್ರಚಾರಕ್ಕೆ ಕೊನೆಯ ದಿನವಾಗಿತ್ತು. ಸಮಯ ಮುಗಿದರೂ ಅವರು ಬಹಿರಂಗ ಸಬೆಯ ಚುನಾವಣಾ ಭಾಷಣ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಅವರ ವಿರುದ್ಧ ಕೇಸ್ ದಾಖಲು ಮಾಡಿತ್ತು. ಇದು ಸಾಬೀತಾದ ಹಿನ್ನೆಲೆಯಲ್ಲಿ ಶಿಕ್ಷೆ ಪ್ರಕಟಿಸಲಾಗಿದೆ.