ನಾಪತ್ತೆಯಾಗಿದ್ದ 2 ಮಕ್ಕಳ ತಂದೆ ತೃತೀಯ ಲಿಂಗಿಯಾದ; ಬಿಗ್ಬಾಸ್ನಿಂದ ವಿಷಯ ಬಹಿರಂಗ!
ಬೆಂಗಳೂರು; ಸಾಕಷ್ಟು ಸಾಲ ಮಾಡಿಕೊಂಡಿದ್ದ ರಾಮನಗರದ ವ್ಯಕ್ತಿಯೊಬ್ಬ ಏಳು ವರ್ಷಗಳ ಹಿಂದೆ ನಾಪತ್ತೆಯಾಗಿದ್ದ. ಎರಡು ಮಕ್ಕಳೊಂದಿಗೆ ಪತ್ನಿ ತವರು ಮನೆ ಸೇರಿದ್ದಳು. ಗಂಡ ನಾಪತ್ತೆಯಾಗಿದ್ದ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ಕೂಡಾ ದಾಖಲಿಸಲಾಗಿತ್ತು. ಆದ್ರೆ, ಆತ ಪತ್ತೆಯಾಗಿರಲಿಲ್ಲ. ಕೊನೆಗೆ ಕನ್ನಡ ಬಿಗ್ಬಾಸ್ ಕಾರಣದಿಂದಾಗಿ ಆತ ಪತ್ತೆಯಾಗಿದ್ದಾನೆ. ಆದ್ರೆ ಈಗ ಅವನಾಗಿ ಉಳಿದಿಲ್ಲ, ಅವನು ಅವಳಾಗಿದ್ದಾಳೆ. ಹೌದು, ಎರಡು ಮಕ್ಕಳ ತಂದೆ ಈಗ ತೃತೀಯಲಿಂಗಿಯಾಗಿ ಬದಲಾಗಿದ್ದಾನೆ.
ರಾಮನಗರದ ಐಜೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಲಕ್ಷ್ಮಣರಾವ್ ಎಂಬ ವ್ಯಕ್ತಿ ವಾಸವಿದ್ದ.ಈತನಿಗೆ ಮದುವೆಯಾಗಿ ಎರಡು ಮಕ್ಕಳು ಕೂಡಾ ಇವೆ. ಆದ್ರೆ ಸಾಕಷ್ಟು ಸಾಲ ಮಾಡಿಕೊಂಡಿದ್ದ ಈತ ಏಳು ವರ್ಷದ ಹಿಂದೆ ಪರಾರಿಯಾಗಿದ್ದ. ಇದರಿಂದ ಇಬ್ಬರು ಮಕ್ಕಳು ಹಾಗೂ ಪತ್ನಿ ಕಂಗಾಳಾಗಿ ವಿಧಿಯಿಲ್ಲದೆ ತವರು ಮನೆಯ ಆಶ್ರಯ ಪಡೆದಿದ್ದರು. ಪೊಲೀಸರು ಸಾಕಷ್ಟು ಹುಡುಕಾಡಿದರೂ ಪ್ರಯೋಜನವಾಗಿರಲಿಲ್ಲ.
ಇನ್ನೂ ಬಾರಿಯ ಕನ್ನಡ ಬಿಗ್ಬಾಸ್ ಸ್ಪರ್ಧಿಯಾಗಿ ತೃತೀಯ ಲಿಂಗಿ ನೀತು ಎಂಟ್ರಿ ಕೊಟ್ಟಿದ್ದರು. ಅವರು ಬಿಗ್ಬಾಸ್ನಿಂದ ಹೊರಬರುವಾಗ ಸ್ವಾಗತ ಮಾಡಲು ವನಜಾಕ್ಷಿಯಾಗಿ ಬದಲಾಗಿದ್ದ ಲಕ್ಷ್ಮಣರಾವ್ ಕೂಡಾ ಬಂದಿದ್ದರು. ಈ ವೇಳೆ ಎಲ್ಲರೂ ರೀಲ್ಸ್ ಮಾಡಿದ್ದಾರೆ. ಆ ರೀಲ್ಸ್ ವೈರಲ್ ಆಗಿದೆ. ಈ ವೇಳೆ ಪೊಲೀಸರು ಇದರಲ್ಲಿದ್ದ ತೃತೀಯಲಿಂಗಿ ಲಕ್ಷ್ಮಣರಾವ್ ಇರಬಹುದು ಎಂದು ಪೊಲೀಸರು ಅನುಮಾನಪಟ್ಟಿದ್ದಾರೆ. ಕೂಡಲೇ ಪೊಲೀಸರು ಲಕ್ಷ್ಮಣರಾವ್ ಪತ್ನಿಗೆ ಮಾಹಿತಿ ಕೊಟ್ಟಿದ್ದಾರೆ. ಆಕೆ ಕೂಡಾ ಆತ ಲಕ್ಷ್ಮಣರಾವ್ ಎಂಬುದನ್ನು ಖಚಿತಪಡಿಸಿದ್ದಾಳೆ.
ಕೂಡಲೇ ಪೊಲೀಸರು ವನಜಾಕ್ಷಿಯಾಗಿ ಬದಲಾಗಿದ್ದ ಲಕ್ಷ್ಮಣರಾವ್ ಅವರನ್ನು ಪೊಲೀಸ್ ಠಾಣೆಗೆ ಕರೆಸಿಕೊಂಡಿದ್ದಾರೆ. ಈ ವೇಳೆ ಲಕ್ಷ್ಮಣರಾವ್ ಅಲಿಯಾಸ್ ವನಜಾಕ್ಷಿ, ನನಗೆ ಹೆಂಡತಿ, ಮಕ್ಕಳು ಬೇಡ, ನಾನು ತೃತೀಯ ಲಿಂಗಿಗಳ ಜೊತೆಯೇ ಇರುತ್ತೇನೆ ಎಂದಿದ್ದಾನೆ. ಹೀಗಾಗಿ ಪೊಲೀಸರು ಮುಚ್ಚಳಿಕೆ ಪತ್ರ ಬರೆಸಿಕೊಂಡು ಕೇಸ್ ಕ್ಲೋಸ್ ಮಾಡಿದ್ದಾರೆ.