Cinema

ಆಂಧ್ರ ಪ್ರದೇಶದಲ್ಲಿ ಇನ್ನು ಗುಟ್ಕಾ, ಪಾನ್‌ ಮಸಾಲಾ ಸಿಗಲ್ಲ..!

ವಿಜಯವಾಡ: ತಂಬಾಕು, ನಿಕೋಟಿನ್‌ ಅಂಶವುಳ್ಳ ಗುಟ್ಕಾ ಹಾಗೂ ಪಾನ್‌ ಮಸಲಾಗಳ ಮಾರಾಟಕ್ಕೆ ಆಂಧ್ರಪ್ರದೇಶ ಸರ್ಕಾರ ಒಂದು ವರ್ಷ ನಿಷೇಧ ಹೇರಿದೆ.

ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಕಾಯ್ದೆ ಅಡಿ ಆಂಧ್ರ ಸರ್ಕಾರ ಈ ಕ್ರಮ ಕೈಗೊಂಡಿದೆ. ಇನ್‌ಸ್ಟಿಟ್ಯೂಟ್ ಆಫ್ ಪ್ರಿವೆಂಟಿವ್ ಮೆಡಿಸಿನ್, ಸಾರ್ವಜನಿಕ ಆರೋಗ್ಯ ಇಲಾಖೆ ಪ್ರಯೋಗಾಲಯಗಳು ಮತ್ತು ಆರೋಗ್ಯ, ಆಹಾರ ಸುರಕ್ಷತಾ ನಿರ್ದೇಶನಾಲಯದ ಆಯುಕ್ತರು ಈ ಆದೇಶವನ್ನು ಹೊರಡಿಸಿದ್ದಾರೆ.

ಇಂದಿನಿಂದ ಒಂದು ವರ್ಷದವರೆಗೆ ಈ ನಿಯಮ ಆಂಧ್ರಪ್ರದೇಶದಾದ್ಯಂತ  ಜಾರಿಯಲ್ಲಿರುತ್ತದೆ ಎಂದು ಸರ್ಕಾರ ತಿಳಿಸಿದೆ. ರಾಜ್ಯ ಸರ್ಕಾರ ತಂಬಾಕು ಮತ್ತು ನಿಕೋಟಿನ್ ಪದಾರ್ಥಗಳನ್ನು ಹೊಂದಿರುವ ಗುಟ್ಕಾ, ಪಾನ್ ಮಸಾಲ ತಯಾರಿಕೆ, ಸಂಗ್ರಹಣೆ, ವಿತರಣೆ, ಸಾಗಣೆ ಮತ್ತು ಮಾರಾಟದಿಂದ ಜನರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಗುಟ್ಕಾ ಪಾನ್‌ ಮಸಾಲಾ ತಿನ್ನುವುದರಿಂದ ಹೃದಯ ಸಂಬಂಧಿ ಕಾಯಲೆಗಳು ಬರುವ ಸಾಧ್ಯತೆ ಇದೆ. ಹೀಗಾಗಿಯೇ, ಆಂಧ್ರದಲ್ಲಿ ಗುಟ್ಕಾ, ಪಾನ್‌ ಮಸಾಲಾ ನಿಷೇಧಿಸಲಾಗಿದೆ.

Share Post