EconomyLifestyleNational

ತಿರುಪತಿ ದೇವಸ್ಥಾನದ ಬಜೆಟ್‌ ಮಂಡನೆ; 5,142 ಕೋಟಿ ರೂ.ಗಳ ಅಂದಾಜು ವೆಚ್ಚ!

ತಿರುಪತಿ; ತಿರುಮಲ ತಿರುಪತಿ ದೇವಸ್ಥಾನದ ಈ ವರ್ಷದ ಬಜೆಟ್‌ ಮಂಡನೆ ಮಾಡಲಾಗಿದೆ. ಈ ಬಾರಿಯ ಬಜೆಟ್‌ ಒಟ್ಟು ಮೊತ್ತವನ್ನು 5,142 ಕೋಟಿ ರೂ.ಗಳೆಂದು ಅಂದಾಜು ಮಾಡಲಾಗಿದೆ. 1933ರಲ್ಲಿ ತಿರುಪತಿ ತಿರುಮಲ ದೇವಾಲಯದ ಟ್ರಸ್ಟ್‌ ಆರಂಭವಾಯಿತು. ಅಂದಿನಿಂದ ಇಂದಿನವರೆಗೆ ಮಂಡನೆಯಾದ ಬಜೆಟ್‌ನಲ್ಲಿ ಇದು ಅತಿದೊಡ್ಡ ಬಜೆಟ್‌ ಎಂದು ತಿಳಿದುಬಂದಿದೆ. 

ಕೊರೊನಾ ನಂತರ ತಿರುಪತಿಗೆ ಬರುವ ಭಕ್ತರ ಸಂಕ್ಯೆ ಹೆಚ್ಚಾಗಿದೆ. ಇದರಿಂದಾಗಿ ದೊಡ್ಡ ಪ್ರಮಾಣದಲ್ಲಿ ದೇಗುಲದ ಆದಾಯ ಕೂಡಾ ಜಾಸ್ತಿಯಾಗಿದೆ. ಹೀಗಾಗಿ ಟಿಟಿಡಿಯ ಹಲವು ಕಾರ್ಮಿಕರಿಗೆ ವೇತನ ಹೆಚ್ಚಳ ಮಾಡಲು ನಿರ್ಧಾರ ಮಾಡಲಾಗಿದೆ. ಲಡ್ಡು ತಯಾರಿಸುವ ಕಾರ್ಮಿಕರಿಗೆ ಹೆಚ್ಚುವರಿಯಾಗಿ 15 ಸಾವಿರ ವೇತನ ನೀಡಲು ತೀರ್ಮಾನ ಮಾಡಲಾಗಿದೆ. ಇನ್ನು ವೇದ ಶಾಲೆಗಳ 51 ಶಿಕ್ಷಕರ ವೇತನವನ್ನು 34,000ದಿಂದ 54,000ಕ್ಕೆ ಹೆಚ್ಚಿಸಲು ನಿರ್ಧರಿಸಲಾಗಿದೆ.

ಟಿಟಿಡಿ ಅಡಿಯಲ್ಲಿ ಬರುವ 60 ದೇವಸ್ಥಾನಗಳಲ್ಲಿ ಹೊಸ ಹುದ್ದೆಗಳ ಮಂಜುರಾತಿ ಪಡೆಯಲು ನಿರ್ಧರಿಸಲಾಗಿದ್ದು, ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗುತ್ತಿದೆ. ಇನ್ನು ಸ್ವಿಮ್ಸ್ ಆಸ್ಪತ್ರೆಯನ್ನು 300 ಹಾಸಿಗೆಗಳಿಂದ 1200 ಹಾಸಿಗೆಗಳಿಗೆ ವಿಸ್ತರಿಸಲು 148 ಕೋಟಿ ರೂಪಾಯಿಗಳ ಟೆಂಡರ್ ಗೆ ಅನುಮೋದನೆ ನೀಡಲಾಗಿದೆ. ಹೀಗೆ ಈ ವರ್ಷದಲ್ಲಿ ಅನ್ನಮಯ್ಯ ಭವನದ ಆಧುನೀಕರಣ, ರಸ್ತೆಗಳ ಕಾಮಗಾರಿ , ಸತ್ರಗಳು, ಕಾಟೇಜ್‌ಗಳ ಅಭಿವೃದ್ಧಿ ಹೀಗೆ ಹತ್ತು ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ತೀರ್ಮಾನಿಸಲಾಗಿದ್ದು, ಅದಕ್ಕಾಗಿ ಕೋಟಿ ಕೋಟಿ ಅನುದಾನ ಮೀಸಲಿರಿಸಲಾಗಿದೆ.

 

Share Post