DistrictsPolitics

ಮೋದಿ ಉಪವಾಸ ಮಾಡಿದ್ದೇ ಅನುಮಾನ; ವೀರಪ್ಪ ಮೊಯ್ಲಿ

ಚಿಕ್ಕಬಳ್ಳಾಪುರ; ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆಗೂ ಮೊದಲು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಣೆ ಮಾಡಿದ್ದರು. ಆದ್ರೆ ಇದರ ಬಗ್ಗೆಯೂ ಕಾಂಗ್ರೆಸ್ ನಾಯಕರು ಅನುಮಾನ ವ್ಯಕ್ತಪಡಿಸಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಮಾತನಾಡಿರುವ ಮಾಜಿ ಕೇಂದ್ರ ಸಚಿವ ವೀರಪ್ಪ ಮೊಯ್ಲಿ, ಪ್ರಧಾನಿ ಮೋದಿ ಉಪವಾಸ ಮಾಡಿದ್ದೇ ಅನುಮಾನ ಎಂದಿದ್ದಾರೆ.

  ಬರೀ ಎಳನೀರು ಸೇವಿಸಿ ಉಪವಾಸ ಮಾಡಿದರೆ ಒಂದೆರಡು ದಿನದಲ್ಲೇ ಮನುಷ್ಯ ಕೆಳಗೆ ಬೀಳುತ್ತಾನೆ. 11 ದಿನ ಉಪವಾಸ ಮಾಡಿದರೆ ಬದುಕಲು ಸಾಧ್ಯವೇ ಇಲ್ಲ. ಹೀಗಾಗಿ ಮೋದಿ ಉಪವಾಸದ ಮೇಲೆ ಅನುಮಾನ ಇದೆ ಎಂದು ಮೊಯ್ಲಿ ಹೇಳಿದ್ದಾರೆ.

  ಉಪವಾಸ ಮಾಡುತ್ತಿದ್ದೇನೆ ಎಂದು ಹೇಳಿಕೊಂಡೇ ಮೋದಿ ಜೋರಾಗಿ ಓಡಾಡಿದರು. ಉಪವಾಸ ಮಾಡುತ್ತಿದ್ದ ಹಾಗೆ ಮೋದಿ ಕಾಣಲೇ ಇಲ್ಲ. ಇವರ ನಾಟಕ ಮುಂದೆ ನಡೆಯಲ್ಲ ಎಂದೂ ಮೊಯ್ಲಿ ಹೇಳಿದ್ದಾರೆ.

 

Share Post