Bengaluru

ನಮ್ಮ ಮೆಟ್ರೋಗೆ 7 ಹೊಸ ರೈಲುಗಳ ಸೇರ್ಪಡೆ

ಬೆಂಗಳೂರು: ಬೈಯಪ್ಪನಹಳ್ಳಿ ಹಾಗೂ ವೈಟ್‌ಫೀಲ್ಡ್‌ ಮಾರ್ಗದಲ್ಲಿ ಮೆಟ್ರೋ ಕಾಮಗಾರಿ ನಡೆಯುತ್ತಿದ್ದು, ಈ ಮಾರ್ಗದಲ್ಲಿ ಸಂಚರಿಸಲು ರಾಜ್ಯಕ್ಕೆ ಹೊಸದಾಗಿ 7 ಮೆಟ್ರೋ ರೈಲು ಬರಲಿವೆ ಎಂಬ ಮಾಹಿತಿಯಿದೆ. 2022ರ ಅಂತ್ಯಕ್ಕೆ ಈ ಮಾರ್ಗದ ಮೆಟ್ರೋ ಕಾಮಗಾರಿ ಪೂರ್ಣಗೊಳ್ಳಲಿದ್ದು, ಬೈಯಪ್ಪನಹಳ್ಳಿ-ವೈಟ್‌ಫೀಲ್ಡ್‌ ಮಾರ್ಗದಲ್ಲಿ ಓಡಿಸಲು ಬಿಎಂಆರ್‌ಸಿಎಲ್‌ ಈ ರೈಲುಗಳನ್ನು ಖರೀದಿ ಮಾಡಿದೆ. ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ (ಬಿಇಎಂಲ್) ಅತ್ಯಾಧುನಿಕ ಹೊಸ 7 ರೈಲುಗಳನ್ನು ನಿರ್ಮಾಣ ಮಾಡಿದೆ. ಉತ್ತರ ಪ್ರದೇಶದ ಲಕ್ನೋದಲ್ಲಿರುವ ಆರ್‌ಡಿಎಸ್‌ಓ ಕಳೆದ ತಿಂಗಳು ಹೊರ ರೈಲಿನ ಪ್ರಾಯೋಗಿಕ ಪರೀಕ್ಷೆ ಕೂಡಾ ನಡೆಸಿದೆ.  ಹೊಸ ರೈಲುಗಳ ಸಂಚಾರಕ್ಕೆ ಆರ್‌ಡಿಎಸ್‌ಓ ಈಗಾಗಲೇ ಒಪ್ಪಿಗೆ ನೀಡಿದ್ದು, ಕೆಲವು ಬದಲಾವಣೆಗಳನ್ನು ಸೂಚಿಸಿದೆ. ಮುಂದಿನ ಹಂತದಲ್ಲಿ ಬಿಇಎಂಎಲ್ ಮೆಟ್ರೋ ರೈಲು ಸುರಕ್ಷತಾ ಆಯುಕ್ತರು (ಸಿಎಂಆರ್‌ಎಸ್) ಒಪ್ಪಿಗೆ ಪಡೆದ ಬಳಿಕ ಮೆಟ್ರೋ ರೈಲು ಸಂಚಾರ ಆರಂಭವಾಗಲಿದೆ.

Share Post