BusinessNational

ಶ್ರೀರಾಮನ ಲೋಗೋ ತಯಾರಿಸಿದ್ದು ಕಲಬುರಗಿಯ ಕಲಾವಿದ

ಕಲಬುರಗಿ; ಜನವರಿ 22 ರಂದು ಅಯೋಧ್ಯೆಯಲ್ಲಿ ಬಾಲರಾಮನ ಪ್ರತಿಷ್ಠಾಪನೆ ನಡೆಯುತ್ತಿದೆ. ಇದಕ್ಕಾಗಿ ಈಗಾಗಲೇ ಸಿದ್ಧತೆಗಳು ನಡೆಯುತ್ತಿವೆ. ಎಲ್ಲರಿಗೂ ಆಹ್ವಾನಪತ್ರಿಕೆ ವಿತರಿಸಿ ಆಗಿದೆ. ವಿಶೇಷ ಅಂದ್ರೆ ಈ ಆಹ್ವಾನ ಪತ್ರಿಕೆಯಲ್ಲಿ ಮುದ್ರಿತವಾಗಿರುವ ಶ್ರೀರಾಮನ ಲೋಗೋ ತಯಾರಿಸಿದ್ದು ಕಲಬುರಗಿಯಲ್ಲಿ.

 

ಆಹ್ವಾನ ಪತ್ರಿಕೆಯ ಮೇಲೆ ಪ್ರಕಾಶಿಸುವ ಸೂರ್ಯನ ಮಧ್ಯೆ ಕಂಗೊಳಿಸುವ ಶ್ರೀರಾಮನ ಭಾವಚಿತ್ರವಿದೆ. ಕೆಳಭಾಗದಲ್ಲಿ ಕುಳಿತಿರುವ ಹನುಮಂತನ ಚಿತ್ರವಿದೆ. ಇದನ್ನು ಕಲಬುರಗಿಯ ಕಲಾವಿದ ರಮೇಶ್ ತಿಪ್ಪನೂರ್ ಅವರು ಡಿಸೈನ್​ ಮಾಡಿದ್ದಾರೆ. ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಲೋಗೋ ತಯಾರಿಸಲು ಕರೆ ಕೊಟ್ಟಿತ್ತು. ​ದೇಶದ ವಿವಿಧ ಕಲಾವಿದರು ಲೋಗೋ ತಾಯಾರಿಸಿ ಟ್ರಸ್ಟ್​​ಗೆ ಕಳುಹಿಸಿದ್ದರು.

 

Share Post