NationalSports

ಒಲಿಂಪಿಕ್ಸ್‌ ಕ್ವಾಲಿಫೈಯರ್‌ನಲ್ಲಿ ಸೆಮಿಫೈನಲ್‌ ತಲುಪಿದ ಭಾರತ ಹಾಕಿ ತಂಡ

ಪ್ಯಾರಿಸ್‌ನಲ್ಲಿ ನಡೆಯಲಿರುವ ಈ ವರ್ಷದ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ನಡೆಯುತ್ತಿರುವ ಎಫ್‌ಐಎಚ್ ಹಾಕಿ ಒಲಿಂಪಿಕ್ಸ್ ಕ್ವಾಲಿಫೈಯರ್‌ನಲ್ಲಿ ಭಾರತದ ಮಹಿಳಾ ಹಾಕಿ ತಂಡ ಸೆಮಿಫೈನಲ್ ತಲುಪಿದೆ.

ಭಾರತ ತಂಡ ಫೈನಲ್‌ಗಾಗಿ ಗುರುವಾರ ಜರ್ಮನಿ ವಿರುದ್ಧ ಸೆಮಿಸ್‌ನಲ್ಲಿ ಸೆಣಸಲಿದೆ. ಜಪಾನ್ ಮತ್ತು ಅಮೆರಿಕ ನಡುವೆ ಮತ್ತೊಂದು ಸೆಮಿಸ್ ನಡೆಯಲಿದೆ.

ಟೂರ್ನಿಯಲ್ಲಿ ಅಗ್ರ 3 ಸ್ಥಾನ ಪಡೆಯುವ ತಂಡಗಳು ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲಿವೆ.

ಮಂಗಳವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತ ಮಹಿಳಾ ತಂಡ 5-1 ಗೋಲುಗಳಿಂದ ಇಟಲಿಯನ್ನು ಮಣಿಸಿತು.

ಭಾರತದ ಆಟಗಾರ್ತಿಯರಲ್ಲಿ ಉದಿತಾ ದುಹಾನ್ ಎರಡು ಗೋಲು ಗಳಿಸಿದರೆ, ದೀಪಿಕಾ, ಸಲೀಮಾ ಮತ್ತು ನವನೀತ್ ತಲಾ ಒಂದು ಗೋಲು ಗಳಿಸಿದರು.

ಒಂದು ಹಂತದಲ್ಲಿ ಭಾರತ ತಂಡ 5-0 ಮುನ್ನಡೆಯಲ್ಲಿದ್ದಾಗ ಕೊನೆಯ ನಿಮಿಷದಲ್ಲಿ ಇಟಲಿಯ ಕ್ಯಾಮಿಲಾ ಗೋಲು ಬಾರಿಸಿದಾಗ ಭಾರತ 5-1 ಅಂತರದಲ್ಲಿ ಜಯ ಸಾಧಿಸಿತು.

Share Post