CrimeDistricts

ಹಾವೇರಿ ಅತ್ಯಾಚಾರ ಪ್ರಕರಣ; ಸಿಎಂ ಭೇಟಿಗೂ ಮೊದಲು ಇನ್ನಿಬ್ಬರ ಅರೆಸ್ಟ್‌

ಹಾವೇರಿ; ಹಾನಗಲ್‌ನಲ್ಲಿ ಲಾಡ್ಜ್‌ನಲ್ಲಿ ಅನ್ಯಕೋಮಿನ ವ್ಯಕ್ತಿ ಜೊತೆ ಇದ್ದ ಮಹಿಳೆಯ ಮೇಲೆ ಹಲ್ಲೆ ನಡೆಸಿದ್ದಲ್ಲದೆ, ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಪ್ರಕರಣ ಮುಂದಿಟ್ಟುಕೊಂಡು ರಾಜಕೀಯ ಕೆಸರೆರಚಾಟ ನಡೆದಿದೆ. ಈ ನಡುವೆ ಇಂದು ಸಿಎಂ ಸಿದ್ದರಾಮಯ್ಯ, ಹಾವೇರಿಗೆ ಭೇಟಿ ನೀಡುತ್ತಿದ್ದಾರೆ. ಸಂತ್ರಸ್ತೆಯನ್ನು ಭೇಟಿಯಾಗಲಿರುವ ಸಿಎಂ ಸಿದ್ದರಾಮಯ್ಯ, ಘಟನೆಯ ಬಗ್ಗೆ ಮಾಹಿತಿ ಪಡೆಯಲಿದ್ದಾರೆ.

ಇನ್ನು ಸಿಎಂ ಸಿದ್ದರಾಮಯ್ಯ ಹಾವೇರಿ ಆಗಮಿಸುವ ಮೊದಲೇ ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ. ಮತ್ತಿಬ್ಬರು ಆರೋಪಿಗಳನ್ನು ಅರೆಸ್ಟ್‌ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಸಾಧಿಕ್‌ ಅಗಸಿಮನಿ ಹಾಗೂ ಶೋಯೆಬ್‌ ಮುಲ್ಲಾನನ್ನು  ನಿನ್ನೆ ಬಂಧಿಸಲಾಗಿದೆ. ಇದರಿಂದಾಗಿ ಎಲ್ಲಾ ಎಂಟು ಆರೋಪಿಗಳನ್ನೂ ಬಂಧಿಸಿದಂತಾಗಿದೆ.

ಅತ್ಯಾಚಾರ ಆರೋಪ ಇದ್ದರೂ ತನಿಖೆ ಸರಿಯಾಗಿ ನಡೆಯುತ್ತಿಲ್ಲ. ಸರ್ಕಾರ ಆರೋಪಿಗಳನ್ನು ರಕ್ಷಿಸುವ ಪ್ರಯತ್ನ ಮಾಡುತ್ತಿದೆ ಎಂದು ವಿಪಕ್ಷಗಳು ಆರೋಪ ಮಾಡುತ್ತಿದ್ದವು. ಇದೀಗ ಇದ್ದಕ್ಕಿದ್ದಂತೆ ಉಳಿದ ಆರೋಪಿಗಳನ್ನೂ ಬಂಧಿಸಲಾಗಿದೆ.

ಅಫ್ತಾಬ್‌, ಮದರಸಾಬ್, ಅಬ್ದುಲ್ ಖಾದರ್, ಮಹಮದ್ ಸೈಫ್‌, ರೆಹಾನ್, ಇಮ್ರಾನ್, ಸಾಧಿಕ್ ಅಗಸಿಮನಿ, ಶೋಯೆಬ್ ಮುಲ್ಲಾ ಬಂಧಿತ ಆರೋಪಿಗಳಾಗಿದ್ದಾರೆ.

ಈ ಆರೋಪಿಗಳು ಲಾಡ್ಜ್‌ನ ರೂಮ್‌ಗೆ ಬಲವಂತಾಗಿ ನುಗ್ಗಿ ಮಹಿಳೆ ಮೇಲೆ ಹಲ್ಲೆ ಮಾಡಿದ್ದರು. ಅದರ ವಿಡಿಯೋಗಳನ್ನು ರಿಲೀಸ್‌ ಮಾಡಿದ್ದರು. ಸಾಲದೆಂಬಂತೆ ಆಕೆಯನ್ನು ವಾಹನವೊಂದರಲ್ಲಿ ಕಾಡಿನ ಪ್ರದೇಶಕ್ಕೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ.

 

Share Post