ವೈದ್ಯರು ಸತ್ತಿದ್ದಾರೆ ಎಂದರು; ಆಂಬುಲೆನ್ಸ್ನಲ್ಲಿ ಹೋಗುವ ರಸ್ತೆಗುಂಡಿ ಬದುಕಿಸಿಬಿಡ್ತು!
ಹರ್ಯಾಣ; ವೈದ್ಯರು ಸತ್ತಿದ್ದಾರೆ ಎಂದು ಸರ್ಟಿಫಿಕೇಟ್ ಕೊಟ್ಟ ಮೇಲೆ, ಇನ್ನೇನು ಅಂತ್ಯಕ್ರಿಯೆ ನೆರವೇರಿಸಬೇಕು ಎನ್ನುವಷ್ಟರಲ್ಲಿ ಸತ್ತವರು ಎದ್ದು ಕೂತ ಘಟನೆಗಳು ಆಗಾಗ ನಡೆಯುತ್ತಲೇ ಇರುತ್ತವೆ. ಅಂತಹದ್ದೇ ಘಟನೆ ಇದು. ಆದ್ರೆ ಇಲ್ಲಿ ಸತ್ತ ವ್ಯಕ್ತಿಯನ್ನು ರಸ್ತೆ ಗುಂಡಿಯೊಂದು ಬದುಕಿಸಿಬಿಟ್ಟಿದೆ. ಅಚ್ಚರಿಯಾದರೂ ಇದು ನಿಜ. ಹರ್ಯಾಣದಲ್ಲಿ ಇಂತಹ ನಂಬಲಸಾಧ್ಯವಾದ ಘಟನೆ ನಡೆದಿದೆ.
80 ವರ್ಷದ ದರ್ಶನ್ ಸಿಂಗ್ ಎಂಬ ವ್ಯಕ್ತಿ ಹೃದ್ರೋಗದಿಂದ ಬಳಲುತ್ತಿದ್ದರು. ಇತ್ತೀಚೆಗೆ ಹೃದಯ ಸಮಸ್ಯೆ ತೀವ್ರವಾಗಿದ್ದರಿಂದ ಆಸ್ಪತ್ರೆಗೆ ಸೇರಿಸಲಾಗಿತ್ತು. ಪರೀಕ್ಷೆ ಮಾಡಿದ್ದ ವೈದ್ಯರು, ದರ್ಶನ್ ಸಿಂಗ್ ಸಾವನ್ನಪ್ಪಿದ್ದಾರೆ ಎಂದು ಘೋಷಣೆ ಮಾಡಿದ್ದರು. ಹೀಗಾಗಿ, ಕುಟುಂಬದವರು ದರ್ಶನ್ ಸಿಂಗ್ ಅವರನ್ನು ಅಂತ್ಯಕ್ರಿಯೆ ನಡೆಸಲೆಂದು ಸ್ವಗ್ರಾಮ ಕರ್ನಾಲ್ ಬಳಿಯ ನಿಸಿಂಗ್ಗೆ ತೆಗೆದುಕೊಂಡು ಹೋಗುತ್ತಿದ್ದರು. ಆಂಬುಲೆನ್ಸ್ನಲ್ಲಿ ಹೋಗುತ್ತಿದ್ದಾರೆ. ಒಂದು ದೊಡ್ಡ ಗುಂಡಿಯಲ್ಲಿ ಆಂಬುಲೆನ್ಸ್ ಇಳಿದಿದ್ದು, ಇದರಿಂದಾಗಿ ವಾಹನ ಕುಲುಕಾಡಿದೆ. ಈ ವೇಳೆ ದರ್ಶನ್ ಸಿಂಗ್ ಅವರ ಕೈ ಅಲ್ಲಾಡಿದ್ದನ್ನು ಅವರ ಮೊಮ್ಮಗ ಬಲ್ವಾನ್ ಸಿಂಗ್ ನೋಡಿದ್ದಾರೆ.
ಕೂಡಲೇ ಪರೀಕ್ಷೆ ಮಾಡಿದಾಗ ಅವರ ಹೃದಯ ಬಡಿತ ಚೆನ್ನಾಗಿಯೇ ಇದ್ದದ್ದು ಕಂಡುಬಂದಿದೆ. ಕೂಡಲೇ ಆಂಬುಲೆನ್ಸ್ ಡ್ರೈವರ್ಗೆ ಹೇಳಿ ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಪರೀಕ್ಷೆ ಮಾಡಿದ ವೈದ್ಯರು ದರ್ಶನ್ ಸಿಂಗ್ ಬದುಕಿದ್ದಾರೆ ಎಂದು ಹೇಳಿದ್ದಾರೆ. ಆದ್ರೆ ಅವರ ಆರೋಗ್ಯ ಸ್ಥಿತಿ ಇನ್ನೂ ಗಂಭೀರವಾಗಿದೆ. ವೈದ್ಯರು ಅವರನ್ನು ಉಳಿಸುವ ಪ್ರಯತ್ನ ಮಾಡುತ್ತಿದ್ದಾರೆ.
ನಾಲ್ಕು ದಿನಗಳಿಂದ ದರ್ಶನ್ ಸಿಂಗ್ ಅವರು ಪಟಿಯಾಲದ ಆಸ್ಪತ್ರೆಯಲ್ಲಿ ವೆಂಟಿಲೇಟರ್ನಲ್ಲಿದ್ದರು. ಗುರುವಾರ ಅವರ ಹೃದಯಬಡಿತ ನಿಂತಿದೆ ಎಂದು ವೈದ್ಯರು ತಿಳಿಸಿದ್ದಾರೆ. ಮೆಂಟಿಲೇಟರ್ ತೆಗೆದು ಮೃತಪಟ್ಟಿದ್ದಾರೆ ಎಂದು ಘೋಷಣೆ ಮಾಡಿದ್ದರು. ಇದೀಗ ಪವಾಡ ಎಂಬಂತೆ ದರ್ಶನ್ ಸಿಂಗ್ ಅವರು ಉಸಿರಾಡುತ್ತಿದ್ದಾರೆ. ಅವರನ್ನು ಉಳಿಸುವ ಪ್ರಯತ್ನವನ್ನು ವೈದ್ಯರು ಮಾಡುತ್ತಿದ್ದಾರೆ.