Districts

ಅಯ್ಯಪ್ಪ ಭಕ್ತರ ಬಸ್‌ಗೆ ಅಡ್ಡ ಬಂದ ಕಾಡಾನೆ; ಹಾರ ಕಿತ್ತು ತಲೆ ಮೇಲೆ ಹಾಕಿಕೊಂಡ ಸಲಗ!

ಕೊಡಗು; ಇದ್ದಕ್ಕಿದ್ದಂತೆ ಕಾಡಾನೆ ಅಡ್ಡ ಬಂದುಬಿಟ್ಟರೆ ಏನಾಬೇಡ ಅಲ್ಲವೇ..? ಅಂತಹದ್ದೇ ಒಂದು ಅನುಭವ ಅಯ್ಯಪ್ಪ ಭಕ್ತರಿಗೆ ಆಗಿದೆ. ಒಂಟಿ ಸಲಗವೊಂದು ಮಧ್ಯರಾತ್ರಿಯಲ್ಲಿ ಅಯ್ಯಪ್ಪ ಭಕ್ತರು ಪ್ರಯಾಣಿಸುತ್ತಿದ್ದ ಮಿನಿ ಬಸ್‌ಗೆ ಅಡ್ಡಬಂದ ಆತಂಕ ಮೂಡಿಸಿದೆ. ಆದ್ರೆ ಅದೇನು ಪವಾಡವೋ ಏನೋ ಆ ಆನೆ ಯಾರಿಗೂ ಯಾವುದೇ ತೊಂದರೆ ಕೊಡದೆ ಬಸ್‌ಗೆ ಹಾಕಿದ್ದ ಹೂವಿನ ಹಾರಗಳನ್ನು ಕಿತ್ತು ತನ್ನ ತಲೆ ಮೇಲೆ ಹಾಕಿಕೊಂಡಿದೆ. ಅನಂತರ ತನ್ನ ಪಾಡಿಗೆ ತಾನು ಹೋಗಿದೆ.

ಪೊನ್ನಂಪೇಟೆ ತಾಲ್ಲೂಕಿನ ತಿತಿಮತಿ ದೇವಸ್ಥಾನದ ಬಳಿಯೇ ಈ ಘಟನೆ ನಡೆದಿದೆ. ಅಯ್ಯಪ್ಪ ಮಾಲಾಧಾರಿಗಳು ಸೋಮವಾರಪೇಟೆಯಿಂದ ಮಿನಿ ಬಸ್‌ನಲ್ಲಿ ಶಬರಿಮಲೆಗೆ ಹೊರಟಿದ್ದರು. ಈ ವೇಳೆ ಮಿನಿ ಬಸ್‌ ತಿತಿಮತಿ ದೇವಸ್ಥಾನ ಬಳಿ ಬರುತ್ತಿದ್ದಂತೆ ಒಂಟಿ ಸಲಗ ಏಕಾಏಕಿ ಅಡ್ಡಬಂದಿದೆ. ಇದ್ರಿಂದ ಭಯಭೀತರಾದ ಅಪ್ಪಯ್ಯ ಮಾಲಾಧಾರಿಗಳು, ಅಯ್ಯಪ್ಪನ ಜಲ ಮಾಡುತ್ತಾ ಕುಳಿತಿದ್ದಾರೆ.

ಆನೆ ಸೊಂಡಿಲಿನಿಂದ ಸುಮ್ಮನೆ ನೂಕಿದ್ದರೂ ಬಸ್‌ ಉರುಳಿಬಿಡುತ್ತಿತ್ತು. ಆದ್ರೆ ಅಡ್ಡಬಂದ ಆನೆಗೆ ಅದೇನನಿಸಿತೋ ಏನು, ಪಾವಡವೆಂಬಂತೆ ಆ ಆನೆ ಅಯ್ಯಪ್ಪ ಭಕ್ತರನ್ನು ಏನೂ ಮಾಡಿಲ್ಲ. ಬದಲಾಗಿ, ಬಸ್‌ನ ಮುಂಭಾಗದಲ್ಲಿ ಹಾಕಿದ್ದ ಹಾರಗಳನ್ನು ಮಾತ್ರ ಕಿತ್ತಿದೆ. ಅದನ್ನು ತನ್ನ ತಲೆಯ ಮೇಲೆ ಹಾಕಿಕೊಂಡಿದೆ. ಅನಂತರ ಅಯ್ಯಪ್ಪ ಭಕ್ತರಿಗೆ ಅದು ಆಶಿರ್ವಾದ ಮಾಡಿ ತನ್ನ ಪಾಡಿಗೆ ತಾನು ಹೋಗಿದೆ.

ಈ ದೃಶ್ಯಗಳನ್ನು ಅಯ್ಯಪ್ಪ ಮಾಲಾಧಾರಿಗಳು ತಮ್ಮ ಮೊಬೈಲ್‌ನಲ್ಲಿ ಚಿತ್ರೀಕರಣ ಮಾಡಿಕೊಂಡಿದ್ದಾರೆ. ಆ ದೃಶ್ಯಗಳು ಈಗ ಎಲ್ಲೆಡೆ ವೈರಲ್‌ ಆಗುತ್ತಿವೆ.

 

Share Post