ಪರಿಶಿಷ್ಟರಿಗೆ ಸಿಎಂ ಸ್ಥಾನದ ಬೇಡಿಕೆಯೂ ಬರುತ್ತದೆ; ಸಚಿವ ಕೆ.ಎನ್.ರಾಜಣ್ಣ
ದಾವಣಗೆರೆ; ಮುಂದಿನ ದಿನಗಳಲ್ಲಿ ಪರಿಶಿಷ್ಟರಿಂದ ಸಿಎಂ ಸ್ಥಾನ ನೀಡಬೇಕೆಂಬ ಬೇಡಿಕೆಯೂ ಬರುತ್ತದೆ ಎಂದು ಸಚಿವ ಕೆ.ಎನ್.ರಾಜಣ್ಣ ಹೇಳಿದ್ದಾರೆ. ದಾವಣಗೆರೆಯಲ್ಲಿ ವಾಲ್ಮೀಕಿ ಗುರುಪೀಠದಲ್ಲಿ ಅವರು ಮಾತನಾಡಿದರು.
ಪರಿಶಿಷ್ಟರಿಗೆ ಸಿಎಂ ಸ್ಥಾನ ನೀಡಬೇಕು ಎಂಬ ಅಭಿಪ್ರಾಯ ಇದೆ. ಮುಂದಿನ ದಿನಗಳಲ್ಲಿ ಈ ಬೇಡಿಕೆ ಬಂದೇ ಬರುತ್ತದೆ. ಪರಿಶಿಷ್ಟರಿಗೆ ಅಧಿಕಾರ ಸಿಗಬೇಕಾದ ಅವಶ್ಯಕತೆಯೂ ಇದೆ ಎಂದು ಕೆ.ಎನ್.ರಾಜಣ್ಣ ಹೇಳಿದ್ದಾರೆ. ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಪರಿಶಿಷ್ಟರು ಸೇರಿ ಎಲ್ಲಾ ವರ್ಗಕ್ಕೂ ಅಧಿಕಾರ ಸಿಕ್ಕರೆ ಪಕ್ಷ ಗೆಲ್ಲುವುದಕ್ಕೆ ಅವಕಾಶವಾಗುತ್ತದೆ. ಹೀಗಾಗಿ ಮೂವರು ಡಿಸಿಎಂಗಳ ಸೃಷ್ಟಿ ಅವಶ್ಯಕತೆ ಇದೆ ಎಂದು ಅವರು ಹೇಳಿದ್ದಾರೆ.