ಸತೀಶ್ ನಿವಾಸದಲ್ಲಿ ದಲಿತ ಸಚಿವರ ರಹಸ್ಯ ಸಭೆ; ಏನಿದರ ಗುಟ್ಟು..?
ಬೆಂಗಳೂರು; ಮೂವರು ಡಿಸಿಎಂಗಳು ಮಾಡಿದರೆ ಯಾರಿಗೇನು ನಷ್ಟ ಆಗುತ್ತೆ ಎಂದು ಸಚಿವ ಕೆ.ಎನ್.ರಾಜಣ್ಣ ನಿನ್ನೆ ಪ್ರಶ್ನೆ ಮಾಡಿದ್ದರು. ಈ ನಡುವೆಯೇ ನಿನ್ನೆ ದಲಿತ ಸಚಿವರ ರಸಹ್ಯ ಸಭೆ ನಡೆದಿದೆ. ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ಈಗಾಗಲೇ ಹೈಕಮಾಂಡ್ ಭೇಟಿ ಮೂವರು ಡಿಸಿಎಂಗಳಿಗೆ ಭೇಡಿಕೆ ಇಟ್ಟಿದ್ದೂ ಆಗಿದೆ. ಈ ನಡುವೆಯೇ ನಿನ್ನೆ ಸತೀಶ್ ಜಾರಕಿಹೊಳಿ ನಿವಾಸದಲ್ಲಿ ರಹಸ್ಯ ಮೀಟಿಂಗ್ ನಡೆದಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಗೃಹ ಸಚಿವ ಪರಮೇಶ್ವರ್, ಸಚಿವರಾದ ಹೆಚ್.ಸಿ ಮಹಾದೇವಪ್ಪ ಹಾಗೂ ಕೆ.ಎನ್ ರಾಜಣ್ಣ ಅವರು ಸತೀಶ್ ಜಾರಕಿಹೊಳಿ ನಿವಾಸದಲ್ಲಿ ಮೀಟಿಂಗ್ ನಡೆಸಿದ್ದಾರೆ. ಸುಮಾರು ಮೂರು ಗಂಟೆಗಳ ಕಾಲ ಈ ಚರ್ಚೆ ನಡೆದಿದೆ. ಲೋಕಸಭಾ ಚುನಾವಣೆಗೂ ಮುಂಚೆ ಮೂವರು ಡಿಸಿಎಂಗಳ ನೇಮಕ ಮಾಡಿದರೆ, ಹೆಚ್ಚಿನ ಮತಗಳನ್ನು ಪಡೆಯೋದಕ್ಕೆ ಸಾಧ್ಯವಾಗುತ್ತೆ ಅನ್ನೋದು ಇವರ ಮಾತು.
ಮೀಟಿಂಗ್ ಮುಗಿಸಿ ಹೊರ ಬಂದ ನಾಯಕರು ಊಟಕ್ಕೆ ಕರೆದಿದ್ರು ಬಂದಿದ್ದೆವು ಅಷ್ಟೇ ಎಂದು ಹೇಳಿದ್ದಾರೆ. ಇನ್ನು ಕೆಲ ದಿನಗಳ ಹಿಂದೆ ಇದೇ ರೀತಿ ಜಿ.ಪರಮೇಶ್ವರ್ ನಿವಾಸದಕ್ಕೆ ದಲಿತ ಸಚಿವರು ಸೇರಿದ್ದರು. ಇದೀಗ ಮತ್ತೆ ಮೀಟಿಂಗ್ ಮಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ.