CrimeNational

ಅಯೋಧ್ಯೆ ರಾಮಮಂದಿರ ಹಾಗೂ ಯೋಗಿ ಆದಿತ್ಯನಾಥ್‌ಗೆ ಬಾಂಬ್‌ ಬೆದರಿಕೆ

ಅಯೋಧ್ಯೆ; ಇದೇ ಜನವರಿ 22ಕ್ಕೆ ರಾಮಂದಿರದಲ್ಲಿ ಶ್ರೀರಾಮನ ಪ್ರಾಣಪ್ರತಿಷ್ಠಾಪನೆ ನಡೆಯಲಿದೆ. ಅದಕ್ಕಾಗಿ ಈಗಾಗಲೇ ಸಾಕಷ್ಟು ಸಿದ್ಧತೆಗಳು ನಡೆಯುತ್ತಿವೆ. ಈ ನಡುವೆ, ಅಯೋದ್ಯೆ ರಾಮಮಂದಿರ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್‌ ಗೆ ಬಾಂಬ್‌ ಬೆದರಿಕೆ ಹಾಕಲಾಗಿದೆ. ಈ ಬಗ್ಗೆ ಇ-ಮೇಲ್‌ ಒಂದು ಬಂದಿದ್ದು, ಅದರಲ್ಲಿ ಎಸ್‌ಟಿಎಫ್ ಎಡಿಜಿ ಅಮಿತಾಬ್ ಯಶ್ ಹೆಸರನ್ನೂ ಉಲ್ಲೇಖ ಮಾಡಲಾಗಿದೆ.

ಇ-ಮೇಲ್‌ ಮಾಡಿರುವ ವ್ಯಕ್ತಿ ತನಗೆ ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಐಎಸ್‌ಐ ಜೊತೆ ಸಂಬಂಧ ಇದೆ ಎಂದೂ ಹೇಳಿಕೊಂಡಿದ್ದಾನೆ. ಭಾರತೀಯ ಕಿಸಾನ್ ಮಂಚ್‌ನ ರಾಷ್ಟ್ರೀಯ ಅಧ್ಯಕ್ಷ ದೇವೇಂದ್ರ ತಿವಾರಿ ಈ ಇ-ಮೇಲ್‌ ಬಂದಿದೆ. ಈ ಬಗ್ಗೆ ತಿವಾರಿ ಅವರು ಎಕ್ಸ್‌ ನಲ್ಲಿ ಬರೆದುಕೊಂಡಿದ್ದಾರೆ. ಜುಬೈರ್‌ ಹುಸೇನ್‌ ಖಾನ್‌ ಎಂಬ ಹೆಸರಿನಲ್ಲಿ ಈ ಇ-ಮೇಲ್‌ ಬಂದಿದೆ. ಪೊಲೀಸರು ಈ ಬಗ್ಗೆ ಎಫ್‌ಐಆರ್‌ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

Share Post