ನಟ ಸೋನುಸೂದ್ ಒಡೆತನದ ಹೊಟೇಲ್ಗಳಿಗೆ ಬಿಎಂಸಿ ನೋಟಿಸ್
ಮುಂಬೈ: ಕೊರೊನಾ ವಾರಿಯರ್ ಹಾಗೂ ಬಾಲಿವುಡ್ ನಟ ಸೋನುಸೂದ್ಗೆ ಬೃಹತ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ನೋಟಿಸ್ ನೀಡಿದೆ. ಕಟ್ಟಡದ ಪ್ಲಾನ್ ಪ್ರಕಾರ ಆರು ಅಂತಸ್ತಿನಲ್ಲಿ ನಡೆಸುತ್ತಿರುವ ಹೋಟೆಲ್ನ್ನು ನಿವಾಸಕ್ಕೆ ಯೋಗ್ಯವಾಗುವಂತೆ ಮಾರ್ಪಾಡು ಮಾಡುವುದಾಗಿ ಹೇಳಿ ಇನ್ನೂ ಕಾರ್ಯರೂಪಕ್ಕೆ ತರದ ಕಾರಣ ನಟನಿಗೆ ನೋಟಿಸ್ ನೀಡಿದೆ.
ಇದಕ್ಕೂ ಮೊದಲೇ ಮಹಾರಾಷ್ಟ್ರ ಮೂಲದ ಮಾನವ ಹಕ್ಕುಗಳ ಹೋರಾಟಗಾರ ಗಣೇಶ್ ಕುಸ್ಮುಲ ಎಂಬುವವರು ಸೋನುಸೂದ್ ವಿರುದ್ಧ ದೂರು ನೀಡಿದ್ರು. ರೆಸಿಡೆನ್ಷಿಯಲ್ ಕಟ್ಟಡದಲ್ಲಿ ಸೋನುಸೂದ್ರವರು ಅಕ್ರಮವಾಗಿ ಹೆಣ್ಣುಮಕ್ಕಳ ವಸತಿನಿಲಯ ಹಾಗೂ ಹೋಟೆಲ್ ನಡೆಸುತ್ತಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಿದ್ರ, ದೂರಿನ ಆಧಾರದ ಮೇಲೆ ಈ ವಿಚಾರ ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ರೆಸಿಡೆನ್ಷಿಯಲ್ ಕಟ್ಟಡದಲ್ಲಿ ಹೋಟೆಲ್ ನಡೆಸುವುದು ತಪ್ಪು ಎಂದು ಹೈಕೋರ್ಟ್ ತೀರ್ಪು ನೀಡಿತ್ತು. ನ್ಯಾಯಾಧೀಶರ ಆದೇಶದಂತೆ ಕಟ್ಟಡವನ್ನು ಮಾರ್ಪಾಡು ಮಾಡುವುದಾಗಿ ಕ್ಷಮೆ ಕೇಳಿ ನ್ಯಾಯಾಲಯ ಹಾಗೂ ಬಿಎಂಸಿ ಅಧಿಕಾರಿಗಳಿಗೆ ಪತ್ರ ಬರೆದಿದ್ದರು. ಈ ಪತ್ರದ ಆಧಾರದ ಮೇಲೆ ಬಿಎಂಸಿ ಸೋನುಸೂದ್ರನ್ನು ಪ್ರಶ್ನಿಸಿ ಒಂದು ವಾರ ಗಡುವು ನೀಡಿ ನೋಟಿಸ್ ನೀಡಿದೆ.