ಯುವನಿಧಿ ಯೋಜನೆಗೆ ಚಾಲನೆ; ಇಂದಿನಿಂದ ನೋಂದಣಿ ಪ್ರಕ್ರಿಯೆ
ಬೆಂಗಳೂರು; ಯುವನಿಧಿ ಯೋಜನೆಯ ನೋಂದಣಿಗೆ ಇಂದಿನಿಂದ ಚಾಲನೆ ದೊರೆತಿದೆ. ಇಂದಿನಿಂದ ಯುವನಿಧಿ ಯೋಜನೆಗೆ ಅರ್ಹರಾದವರು ಅರ್ಜಿ ಸಲ್ಲಿಕೆ ಮಾಡಬಹುದು. ಇಂದಿನಿಂದ ನೋಂದಣಿ ಪ್ರಕ್ರಿಯೆ ನಡೆಯಲಿದೆ. ಇದರಿಂದಾಗಿ ಕಾಂಗ್ರೆಸ್ ನೀಡಿದ ಐದೂ ಭರವಸೆಗಳು ಈಡೇರಿದಂತಾಗಿದೆ.
ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ವತಿಯಿಂದ ಯುವನಿಧಿ ಯೋಜನೆ ಜಾರಿಗೆ ತರಲಾಗುತ್ತಿದೆ. ಕುವೆಂಪುರವರ ಪುಣ್ಯಭೂಮಿ ಶಿವಮೊಗ್ಗದಲ್ಲಿ 2024ರ ಜನವರಿ 12ರಂದು ಈ ಯೋಜನೆಗೆ ಚಾಲನೆ ನೀಡಲು ಸರ್ಕಾರ ನಿರ್ಧಾರ ಮಾಡಿಕೊಂಡಿದೆ. ಅಂದು ಮೊದಲ ಕಂತಿನ ಹಣ ನಿರುದ್ಯೋಗಿ ಯುವಕ-ಯುವತಿಯರ ಅಕೌಂಟ್ಗೆ ಜಮೆಯಾಗಲಿದೆ.
ಅಂದಹಾಗೆ, ಡಿಗ್ರಿ ಅಥವಾ ಡಿಪ್ಲೋ ಮುಗಿಸಿ ಆರು ತಿಂಗಳಾದರೂ ಉದ್ಯೋಗ ಸಿಗದವರು ಈ ಯೋಜನೆಗೆ ಅರ್ಹರು. ಆರು ತಿಂಗಳ ಹಿಂದೆ ಡಿಗ್ರಿ ಮುಗಿಸಿದ ನಿರುದ್ಯೋಗಿಗಳಿಗೆ ತಿಂಗಳಿಗೆ 3000 ಸಾವಿರ ರೂಪಾಯಿ ಸಿಗಲಿದೆ. ಆರು ತಿಂಗಳ ಹಿಂದೆ ಡಿಪ್ಲೋಮಾ ಮುಗಿಸಿದ ನಿರುದ್ಯೋಗಿಗಳಿಗೆ ತಿಂಗಳಿಗೆ 1500 ರೂಪಾಯಿ ಸಿಗಲಿದೆ.