ಮಾವನ ಕಳ್ಳಸಾಗಣೆ ಅನುಮಾನ; 300 ಭಾರತೀಯ ಪ್ರಯಾಣಿಕರಿದ್ದ ವಿಮಾನ ವಶ
ಪ್ಯಾರಿಸ್; ಮಾನವ ಕಳ್ಳಸಾಗಣೆ ಅನುಮಾನದ ಮೇಲೆ ವಿಮಾನವೊಂದರನ್ನು ಫ್ರಾನ್ಸ್‌ನಲ್ಲಿ ತುರ್ತು ಭೂಸ್ಪರ್ಶ ಮಾಡಿಸಲಾಗಿದೆ. ಈ ವಿಮಾನದಲ್ಲಿ 300 ಮಂದಿ ಭಾರತೀಯ ಪ್ರಯಾಣಿಕರಿದ್ದರೆಂದು ತಿಳಿದುಬಂದಿದೆ. ಅನಾಮಿಕರೊಬ್ಬರು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಫ್ರೆಂಚ ಪೊಲೀಸರು ಇಬ್ಬರು ವ್ಯಕ್ತಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಫ್ರಾನ್ಸ್‌ನಲ್ಲಿ ಭಾರತೀಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸಿದ್ದಾರೆ. ಯುನೈಟೆಡ್ ಅರಬ್ ಕಿಂಗ್‌ಡಮ್‌ನಿಂದ (ಯುಎಇ) ಕೇಂದ್ರ ಅಮೆರಿಕದ ನಿಕರಾಗುವಾಕ್ಕೆ ವಿಮಾನ ತೆರಳುತ್ತಿತ್ತು. ರೊಮೇನಿಯಾದ ಚಾರ್ಟರ್ ಕಂಪನಿ ಲೆಜೆಂಡ್ ಏರ್‌ಲೈನ್ಸ್‌ನ ಏರ್‌ಬಸ್ ಎ340 ವಿಮಾನದಲ್ಲಿ 303 ಭಾರತೀಯ ಪ್ರಯಾಣಿಕರು ತೆರಳುತ್ತಿದ್ದರು.
ಪ್ಯಾರಿಸ್‌ನಿಂದ 150 ಕಿಮೀ ದೂರದಲ್ಲಿರುವ ಪೂರ್ವ ಫ್ರಾನ್ಸ್‌ನ ವಟ್ರಿ ವಿಮಾನ ನಿಲ್ದಾಣದಲ್ಲಿ ತಾಂತ್ರಿಕ ನಿಲುಗಡೆಗಾಗಿ ವಿಮಾನವನ್ನು ಇಳಿಸಲಾಗಿದೆ.