CrimeDistricts

ಹುಡುಗಿ ವಿಚಾರಕ್ಕೆ ಸ್ನೇಹಿತರನ್ನೇ ಕೊಚ್ಚಿ ಕೊಂದರು!

ಕಲಬುರಗಿ; ಪಾರ್ಟಿ ಕೊಡಿಸುವ ಆಸೆ ತೋರಿಸಿ ಸ್ನೇಹಿತನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ. ಕಲಬುರಗಿ ಹೊರವಲುದ ಶೆಟ್ಟಿ ಕಾಲೇಜು ಸಮೀಪ ಕಾರ್ತೀಕ್ ಉಪಾಧ್ಯ ಎಂಬಾತನನ್ನು ಕೊಲೆ ಮಾಡಲಾಗಿದೆ.

 

ಬಾಪೂಜಿನಗರ ನಿವಾಸಿಯಾದ ಈತ ಆಟೋ ಚಾಲಕನಾಗಿದ್ದ. ಈತನನ್ನ ಸ್ನೇಹಿತರೇ ಪಾರ್ಟಿಗೆ ಕರೆದು ಕುಡಿಸಿ ನಂತರ ಹತ್ಯೆ ಮಾಡಿದ್ದಾರೆ.

 

ಅಲಿ, ಕನ್ಹಯ್ಯ, ರೋಹಿತ್ ಸೇರಿ ಹತ್ಯೆ ಮಾಡಿದ್ದಾರೆ. ಆರೋಪಿಯೊಬ್ಬನ ತಂಗಿಯ ಜೊತೆ ಕೊಲೆಯಾದ ಕಾರ್ತೀಕ್ ಪ್ರೀತಿಯಲ್ಲಿ ಬಿದ್ದಿದ್ದ ಎನ್ನಲಾಗಿದೆ. ಈ ಕಾರಣಕ್ಕೆ ಕೊಲೆ ಮಾಡಲಾಗಿದೆ. ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

 

Share Post